“ರಾಮ ಕೇವಲ ಹಿಂದೂಗಳ ದೇವರೇ?”- ವಿಪಕ್ಷಗಳ ರ‌್ಯಾಲಿಯಲ್ಲಿ ಫಾರೂಕ್ ಅಬ್ದುಲ್ಲ

0
1026

ಶ್ರೀನಗರ: ಬಲಪಂಥೀಯರ ವಿರುದ್ಧ ಟೀಕಾಪ್ರಹಾರ ನಡೆಸಿದ ನ್ಯಾಶನಲ್ ಕಾನ್ಪರೆನ್ಸ್ ಪಾರ್ಟಿಯ ಫಾರೂಕ್ ಅಬ್ದುಲ್ಲ; ಭಗವಾನ್ ರಾಮ ಕೇವಲ ಹಿಂದೂಗಳ ದೇವರೇ ಎಂದು ಪ್ರಶ್ನಿಸಿದ್ದಾರೆ. ಅವರು ಆಮ್ ಆದ್ಮಿಪಾರ್ಟಿಯ ವಿಪಕ್ಷಗಳ ರ‌್ಯಾಲಿಯಲ್ಲಿ ಮಾತಾಡುತ್ತಿದ್ದರು.

ಎಲ್ಲ ಧರ್ಮದ ಜನರಿಗೆ ದೇಶದಲ್ಲಿ ಗೌರವಗಳೊಂದಿಗೆ ಬದುಕುವ ಹಕ್ಕಿದೆ ಎಂದ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‍ಶಾರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುವುದು ಅನಿವಾರ್ಯವಾಗಿದೆ ಅವರು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳಿಗೆ ಅಪಾಯಕಾರಿ ಎಂದರು.

“ನಮ್ಮ ಮನಸ್ಸು ಶುಚಿಯಾಗಿರಿಸೋಣ ಆಗ ಅವರನ್ನು ಸುಲಭದಲ್ಲಿ ದೂರವಿರಿಸಬಹುದು. ದೇಶವನ್ನು ರಕ್ಷಿಸಬೇಕಾದರೆ ನಾವು ತ್ಯಾಗಕ್ಕೆ ಸಿದ್ಧರಾಗಬೇಕಾಗಿದೆ. ಒಂದು ವೇಳೆ ಏನು ಮಾಡುವುದಿದ್ದರೂ ದೇಶಕ್ಕಾಗಿ ಮಾಡಿ; ಕುರ್ಚಿಯ ಆಸೆಯಲ್ಲಿ ಮಾಡಬೇಡಿ” ಎಂದು ಫಾರೂಕ್ ಅಬ್ದುಲ್ಲ ಹೇಳಿದರು.

ನಾವು ಇಂದು ಧಾರ್ಮಿಕ ಆಧಾರದಲ್ಲಿ ಹಿಂದೂ ಮತ್ತು ಮುಸ್ಲಿಮರೆಂದು ನಮ್ಮನ್ನು ನಾವೇ ಹಂಚಿಕೊಂಡಿದ್ದೇವೆ ಆದರೆ, ನಾನು ಹಿಂದೂಗಳಲ್ಲಿ ಕೇಳಬಯಸುತ್ತೇನೆ ರಾಮ ಕೇವಲ ನಿಮ್ಮ ರಾಮನೇ? ಇದು ಪವಿತ್ರ ಗ್ರಂಥಗಳಲ್ಲಿ ಬರೆದ ರಾಮ ಇಡೀ ಜಗತ್ತಿನ ದೇವನಾಗಿದ್ದಾನೆ. ಆದ್ದರಿಂದ ಅವನು ಎಲ್ಲರ ದೇವನಾಗಿದ್ದಾನೆ. ನಮಗೆ ನಮ್ಮ ಲಡಾಯಿಯನ್ನು ಮರೆಯುವ ಅಗತ್ಯವಿದೆ ಎಂದು ಫಾರೂಕ್ ಅಬ್ದುಲ್ಲ ಹೇಳಿದರು.

ವಿಷಾದದ ವಿಷಯವೆಂದರೆ ಮುಸ್ಲಿಮರಲ್ಲಿ ಏನು ಮಾಡಬೇಕು. ಏನು ಮಾಡಬಾರದು. ಎಲ್ಲಿಗೆ ಹೋಗಬೇಕು ಎಲ್ಲಿಗೆ ಹೋಗಬಾರದು ಎಂದು ಹೇಳಲಾಗುತ್ತದೆ. ಈ ದೇಶ ಅವರ ಹಿರಿಯ ದೇಶವಾಗಿದೆ. ಈ ದೇಶದಲ್ಲಿ ಎಲ್ಲ ಧರ್ಮದ ಜನರಿಗೆ ಬದುಕುವ ಸಮಾನ ಹಕ್ಕಿದೆ. ಹಿಂದೂ ಮುಸ್ಲಿಂ ಸಿಖ್ , ಕ್ರೈಸ್ತರು ನಾವೆಲ್ಲ ಸಹೋದರರು. ಮತ್ತು ಭಾರತ ಎಲ್ಲ ಭಾರತೀಯರದ್ದಾಗಿದೆ ಎಂದು ಫಾರೂಕ್ ಅಬ್ದುಲ್ಲ ಹೇಳಿದರು.