ಯಶಸ್ವಿಯಾಗಿ ರಾಕೆಟ್ ಉಡಾಯಿಸಿ ಉತ್ತರ ಕೊರಿಯಾಕ್ಕೆ ಸ್ಪಷ್ಟ ಸಂದೇಶ ನೀಡಿದ ದಕ್ಷಿಣ ಕೊರಿಯಾ

0
68

ಸನ್ಮಾರ್ಗ ವಾರ್ತೆ

ಸಿಯೋಲ್ : ದಕ್ಷಿಣ ಕೊರಿಯಾ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ರಾಕೆಟ್‌ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆ ಮೂಲಕ ಸದಾ ಬೆದರಿಕೆಯಂತಿರುವ ಉತ್ತರ ಕೊರಿಯಾಕ್ಕೆ ಉತ್ತರ ನೀಡಿದೆ.

ಕಳೆದ ಅಕ್ಟೋಬರ್‌ನಲ್ಲಿ ಮೊದಲ ರಾಕೆಟ್‌ನ ಉಡಾವಣೆ ನಡೆದಿತ್ತು. ಆದರೆ, ಮಾದರಿ ಗಗನನೌಕೆಯನ್ನು ಭೂಕಕ್ಷೆಗೆ ಸೇರಿಸುವಲ್ಲಿ ವಿಫಲವಾಗಿತ್ತು. ಈಗ ಎರಡನೇ ಪ್ರಯತ್ನ ಯಶಸ್ವಿಯಾಗಿರುವುದು ದೇಶದ ಬಾಹ್ಯಾಕಾಶ ಕ್ಷೇತ್ರದ ಕಾರ್ಯಕ್ರಮಗಳಿಗೆ ಮತ್ತಷ್ಟು ಬಲ ತುಂಬಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಸದಾ ಬೆದರಿಕೆವೊಡ್ಡುತ್ತಿರುವ ನೆರೆಯ ಉತ್ತರ ಕೊರಿಯಾದ ಮೇಲೆ ಉಪಗ್ರಹಗಳ ಮೂಲಕ ಕಣ್ಗಾವಲಿರಿಸುವ ಹಾಗೂ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವ ತಂತ್ರಜ್ಞಾನ ತನ್ನ ಬಳಿಯೂ ಇದೆ ಎಂಬ ಸಂದೇಶವನ್ನು ರವಾನಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ತಜ್ಞರು ಹೇಳಿದ್ದಾರೆ.

ದೇಶದ ದಕ್ಷಿಣದ ಚಿಕ್ಕ ದ್ವೀಪವೊಂದರಲ್ಲಿನ ಉಡ್ಡಯನ ಕೇಂದ್ರದಿಂದ ‘ನುರಿ’ ರಾಕೆಟ್‌ ನಭಕ್ಕೆ ಚಿಮ್ಮಿದ ದೃಶ್ಯಗಳನ್ನು ಅಲ್ಲಿನ ಸುದ್ದಿವಾಹಿನಿಗಳು ಪ್ರಸಾರ ಮಾಡಿದೆ.