ಕಳ್ಳನನ್ನು ಬಗ್ಗುಬಡಿದ ಬಾಲಕಿಗೆ 51,000 ರೂ. ಬಹುಮಾನ ನೀಡಿದ ಪೊಲೀಸರು- ವಿಡಿಯೋ

0
588

ಸನ್ಮಾರ್ಗ ವಾರ್ತೆ

ಜಲಂಧರ್,ಸೆ.3: ಫೋನ್ ಸೆಳೆದ ವ್ಯಕ್ತಿಯನ್ನು ಬೈಕ್ ಹತ್ತಲು ಬಿಡದೆ ಹೋರಾಡಿದ ಕುಸುಮಾ ಎಂಬ ಹದಿನೈದು ವರ್ಷದ ಬಾಲಕಿಗೆ ಪೊಲೀಸ್ ಉಪ ಆಯುಕ್ತರು 51,000 ರೂಪಾಯಿ ಬಹುಮಾನ ಘೋಷಿಸಿದ್ದಾರೆ.

ಕಳೆದ ದಿವಸ ಟ್ಯೂಶನ್ ಮುಗಿಸಿಕೊಂಡು ಮರಳುತ್ತಿದ್ದಾಗ ಬೈಕ್‍ನಲಿ ಬಂದ ಯುವಕರಲ್ಲಿ ಒಬ್ಬ ಕುಸುಮಾ ಕುಮಾರಿ ಕೈಯಲ್ಲಿದ್ದ ಫೋನನ್ನು ಎಳೆದಿದ್ದಾನೆ. ಅವನನ್ನು ಮಣಿಸುವಲ್ಲಿ ಬಾಲಕಿ ಯಶಸ್ವಿಯಾಗಿದ್ದಾಳೆ. ಘಟನೆಯ ದೃಶ್ಯವೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಜಲಂಧರ್ ಪೊಲೀಸ್ ಉಪ ಆಯುಕ್ತ ಘನಶ್ಯಾಂ ತೊರಿ ಬಹುಮಾನ ಘೋಷಿಸಿದ್ದಾರೆ. ಬೇಟಿ ಬಚಾವೊ ಬೇಟಿ ಪಡಾವೊ ಆಂದೋಲನ್ ಕಾರ್ಯಕ್ರಮದಲ್ಲಿ ಇತರ ಹೆಣ್ಣುಮಕ್ಕಳಿಗೂ ಪ್ರೇರಣೆ ನೀಡುವ ಉದ್ದೇಶದಿಂದ ಕುಸುಮಾ ಕುಮಾರಿಯನ್ನೂ ಸೇರಿಸಲು ಇಲಾಖೆ ತೀರ್ಮಾನಿಸಿದೆ ಎಂದು ತೊರಿ ಹೇಳಿದರು.

ತನ್ನ ಸ್ಮಾರ್ಟ್ ಫೋನ್ ಬೆಲೆ ಕಟ್ಟಲಾಗದ್ದು, ಅದನ್ನು ಹಾಗೆ ಸುಲಭದಲ್ಲಿ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಬಾಲಕಿ ಹೇಳಿದ್ದಾಳೆ. ಸ್ಮಾರ್ಟ್‌ಫೋನ್ ಸುಮ್ಮನೆ ಸಿಕ್ಕಿಲ್ಲ. ನನ್ನ ತಂದೆ ಬಹಳ ಕಷ್ಟಪಟ್ಟು ಫೋನ್ ಖರೀದಿಸಿ ಕೊಟ್ಟಿದ್ದಾರೆ. ಕೊರೋನ ಕಾರಣದಿಂದ ಆನ್‍ಲೈನ್ ತರಗತಿ ಬಂದಾಗ ತಂದೆ ಕಷ್ಟಪಟ್ಟು ಸ್ಮಾರ್ಟ್‌ಫೋನ್ ಕೊಂಡು ತಂದಿದ್ದಾರೆ ಎಂದು ಕುಸುಮಾ ಹೇಳಿದ್ದಾಳೆ.

ಮಾತ್ರವಲ್ಲ, ಫೋನ್ ಇಲ್ಲದಿದ್ದರೆ ತನಗೆ ತರಗತಿ ಇಲ್ಲದಾಗುತ್ತದೆ. ಇನ್ನೊಂದು ಫೋನ್ ಖರೀದಿಸಿ ಕೊಡಲು ತಂದೆಗೆ ಸಾಧ್ಯವೂ ಇಲ್ಲ ಎಂದು ಕುಸುಮಾ ಹೇಳಿದರು. ಇಂತಹ ಅವಸ್ಥೆ ಎದುರಾದಾಗ ಹೆಣ್ಣು ಮಕ್ಕಳು ಕುಸಮಾಳಂತೆ ಧೈರ್ಯ ತೋರಿಸಬೇಕು. ಹೆದರಿ ಸುಮ್ಮನಿರಬಾರದು. ಹೋರಾಡಬೇಕು. ಕೊನೆಗೆ ನೀವೇ ಗೆಲ್ಲುವಿರಿ’ ಎಂದು ಕುಸಮಾ ಕುಮಾರಿ ಹೇಳಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.