ಗಂಭೀರ ಸ್ಥಿತಿಯಲ್ಲಿರುವ ಕೊರೋನ ರೋಗಿಗಳಿಗೆ ಸ್ಟಿರಾಯ್ಡ್‌ಗಳು ಫಲಪ್ರದ

0
465

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಸೆ.3: ಕೊರೋನದಿಂದ ತೀವ್ರವಾಗಿ ಬಳಲುತ್ತಿರುವ ರೋಗಿಗಳ ಜೀವ ಉಳಿಸಲು ವಿವಿಧ ರೀತಿಯ ಸ್ಟಿರಾಯ್ಡ್‌ಗಳು ಪ್ರಯೋಜನಕಾರಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕಡಿಮೆ ಬೆಲೆಯ ಔಷಧವಾದರೂ ಉತ್ತಮವಾಗಿದೆ ಎಂದು ಅಧ್ಯಯನದ ಮೂಲಕ ಕಂಡು ಕೊಳ್ಳಲಾಗಿದೆ. ವಿಶ್ವ ಆರೋಗ್ಯ ಸಂಘಟನೆಯ ನೇತೃತ್ವದಲ್ಲಿ ನಡೆದ ಏಳು ಅಧ್ಯಯನಗಳನ್ನು ಅವಲೋಕಿಸಿ ವಿಜ್ಞಾನಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ.

ಅಮೆರಿಕದ ಮೆಡಿಕಲ್ ಅಸೋಸಿಯೇಶನ್ ಬುಧವಾರ ಹೊರಡಿಸಿದ ಜರ್ನಲ್‍ನಲ್ಲಿ ಈ ಅಧ್ಯಯನ ವರದಿ ಇದೆ.

ಸಾಧಾರಣ ಸ್ಥಿತಿಯ ಉಪಚಾರ ಮತ್ತು ಪ್ಲಸ್ ಬೊ ಶುಶ್ರೂಷೆ ಲಭ್ಯಗೊಳಿಸಿದ, ಹೆಚ್ಚು ಆಕ್ಸಿಜನ್ ಆವಶ್ಯಕತೆಯಿರುವ ಕೊರೋನಾ ತೀವ್ರವಾಗಿರುವ ರೋಗಿಗಳಿಗೆ ಸ್ಟಿರಾಯ್ಡ್ ಕೊಟ್ಟಾಗ ಮೊದಲ ತಿಂಗಳಲ್ಲೇ ಸಾವಿನ ಸಾಧ್ಯತೆ ಕಡಿಮೆಯಾಯಿತು ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಅಧ್ಯಯನ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಿದೆ ಎಂದು ಅಧ್ಯಯನಕ್ಕೆ ನೇತೃತ್ವ ನೀಡಿದ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಡಾ.ಮಾರ್ಟಿನ್ ಲಾಂಡ್ರೆ ಹೇಳಿದ್ದಾರೆ. ಅಧ್ಯಯನದ ಫಲಿತಾಂಶವು ಬಹಳಷ್ಟು ಹೆಜ್ಜೆಗಳನ್ನು ಮುಂದಿಡುವಂತೆ ಮಾಡಿದೆ. ಆದರೆ, ಇದು ರೋಗವನ್ನು ಸಂಪೂರ್ಣ ಗುಣಪಡಿಸುವುದಿಲ್ಲ ಎಂದು ಲಂಡನಿನ ಇಂಪೀರಿಯಲ್ ಕಾಲೇಜಿನ ಡಾ.ಆಂಟನಿ ಗಾರ್ಡನ್ ಹೇಳಿದ್ದಾರೆ.

ಸ್ಟಿರಾಯ್ಡ್‌ಗಳಿಗೆ ಕಡಿಮೆ ಬೆಲೆ ಇದೆ. ವ್ಯಾಪಕವಾಗಿ ಲಭಿಸುತ್ತದೆ. ಇದು ಹತ್ತು ಹಲವಾರು ವರ್ಷಗಳಿಂದ ಉಪಯೋಗಿಸಲಾಗುತ್ತಿರುವ ಔಷಧವೂ ಆಗಿದೆ. ವೈರಸ್ ದೇಹದ ಪ್ರತಿರೋಧ ವ್ಯವಸ್ಥೆಗೆ ಹಾನಿ ಮಾಡುತ್ತದೆ. ಇದರಿಂದಾಗಿ ಕೊರೋನ ರೋಗಿಗಳಿಗೆ ಅಡಚಣೆಯುಂಟಾಗಿ ಸಾವು ಸಂಭವಿಸಲು ಕಾರಣವಾಗುತ್ತದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.