ಕಾಂಗ್ರೆಸ್‍‌ನಿಂದ 5 ವರ್ಷಗಳಲ್ಲಿ 170 ಶಾಸಕರ ರಾಜೀನಾಮೆ; ಬಿಜೆಪಿಯಿಂದ 18 ಮಂದಿ

0
430

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಐದು ವರ್ಷಗಳಲ್ಲಿ ಕಾಂಗ್ರೆಸ್‍ನಿಂದ 170 ಶಾಸಕರು ರಾಜೀನಾಮೆ ನೀಡಿದ್ದಾರೆ. 2016ರಿಂದ 2020ರವರೆಗೆ ನಡೆದ ಚುನಾವಣೆಯ ಸಮಯದಲ್ಲಿ ಪಕ್ಷಾಂತರಿಸಿದ್ದಲ್ಲಿ ಶೇ.42ರಷ್ಟು ಕಾಂಗ್ರೆಸ್ ಶಾಸಕರು ಎಂದು ಅಸೋಸಿಯೇಶನ್ ಫಾರ್ ಡೆಮಕ್ರಾಟಿಕ್ ರಿಫಾಂಸ್(ಎಡಿಆರ್) ವರದಿ ಮಾಡಿದೆ.

ಇದೇ ಅವಧಿಯಲ್ಲಿ 18 ಬಿಜೆಪಿ ಶಾಸಕರು ಬೇರೆ ಪಾರ್ಟಿಗೆ ಪಕ್ಷಾಂತರವಾಗಿದ್ದಾರೆ. ಸಿಪಿಎಂನಿಂದ ಐವರು ಶಾಸಕರು, ಸಿಪಿಐನಿಂದ ಒಬ್ಬರು ಪಾರ್ಟಿ ತೊರೆದಿದ್ದಾರೆ. ಐದು ವರ್ಷದಲ್ಲಿ ಸಂಸದರು, ಶಾಸಕರ ಸಹಿತ 433 ಮಂದಿ ಪಾರ್ಟಿ ಬದಲಾಯಿಸಿದ್ದಾರೆ.

ಲೋಕಸಭಾ, ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಹೆಚ್ಚಿನ ಪಕ್ಷಾಂತರಗಳು ಆಗಿವೆ. ಚುನಾವಣೆಯಲ್ಲಿ ಟಿಕೇಟ್ ಪಡೆಯಲು ವಿಫಲವಾದವರು ಪಾರ್ಟಿ ತೊರೆದವರಲ್ಲಿ ಬಹುಸಂಖ್ಯೆಯಲ್ಲಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಕ್ರಾಟಿಕ್ ರಿಫಾಂಸ್ ತಿಳಿಸಿದೆ.

405 ಶಾಸಕರ ಪಕ್ಷಾಂತರದಲ್ಲಿ ಶೇ.42ರಷ್ಟು ಕಾಂಗ್ರೆಸ್ಸಿನವರು ಬಿಜೆಪಿಯಿಂದ ಶೇ.4ರಷ್ಟು ಮಾತ್ರ ಶಾಸಕರ ಪಕ್ಷಾಂತರ ನಡೆದಿದೆ. ಕಾಂಗ್ರೆಸ್‍ನಿಂದ ಹೊರಟವರನ್ನು ಬಿಜೆಪಿ ತನ್ನೊಳಗೆ ಸೇರಿಸಿಕೊಂಡಿದೆ ಎಂದು ವರದಿ ಹೇಳಿದೆ.

ಇತರ ಪಾರ್ಟಿಯಿಂದ 182 ಶಾಸಕರು(ಶೇ.44.9) ಬಿಜೆಪಿಗೆ ಸೇರಿದರು. ಇದೇವೇಳೆ, 38 ಮಂದಿ ಶಾಸಕರು ಕಾಂಗ್ರೆಸ್ಸಿಗೆ ಅಂದರೆ ಶೇ.9.4ರಷ್ಟು ಶಾಸಕರು ಕಾಂಗ್ರೆಸ್ ಸೇರ್ಪಡೆಯಾದರು. ತೆಲಂಗಾಣ ರಾಷ್ಟ್ರ ಸಮಿತಿಯಲ್ಲಿ 25 ಶಾಸಕರು ಸೇರ್ಪಡೆಯಾದರು. (ಶೇ.6.2)
2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಸಂಸದರು ಬಿಜೆಪಿ ತೊರೆದು ಇತರ ಪಾರ್ಟಿಗೆ ತೆರಳಿದರು. ಏಳು ರಾಜ್ಯಸಭಾ ಸಂಸದರು ಕಾಂಗ್ರೆಸ್‍ನಿಂದ ಬೇರೆ ಪಾರ್ಟಿಗೆ ಸೇರ್ಪಡೆಗೊಂಡರು. ಪಕ್ಷಾಂತರಗೊಂಡ 12 ಮಂದಿಯಲ್ಲಿ ಐದು ಮಂದಿ ಕಾಂಗ್ರೆಸ್‍ಗೆ ಸೇರಿದ್ದಾರೆ ಎಂದು ಅಸೋಯಿಯೇಶನ್ ಫಾರ್ ಡೆಮಕ್ರಾಟಿಕ್ ರಿಫಾಂಸ್ ಹೇಳಿದೆ.