ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಕ್ಕೆ ವಾಜಪೇಯಿ ಕೂಡ ಕ್ಷಮಾದಾನ ಅರ್ಜಿ ಬರೆದುಕೊಂಡಿದ್ದರು

0
717

ಸನ್ಮಾರ್ಗ ವಾರ್ತೆ

ಚೆನ್ನೈ: ಬ್ರಿಟಿಷ್ ವಸಾಹತುಶಾಹಿ ಸರಕಾರದ ವಿರುದ್ಧ ದೇಶವನ್ನು ಸ್ವತಂತ್ರಗೊಳಿಸುವ ಸ್ವಾತಂತ್ರ್ಯ ಹೋರಾಟದಲ್ಲಿ ತಾನಿದ್ದೆ ಎಂದು ಹೇಳುತ್ತಾ ಮುಂದೆ ಬರುವ ಹಲವರ ವಾದ ಸುಳ್ಳೆಂಬುದನ್ನು ಐತಿಹಾಸಿಕ ಸಾಕ್ಷ್ಯವನ್ನು ಒದಗಿಸುವ ಮೂಲಕ ಹೊಸ ಶೋಧವನ್ನು ಪ್ರಮುಖ ಇತಿಹಾಸ ತಜ್ಞ, ಮುಂಬೈ ಐಐಟಿ ಮಾಜಿ ಹಿರಿಯ ಮೆಡಿಕಲ್ ಆಫಿಸರ್ ರಾಮ್ ಪುನಿಯಾನಿ ಬಹಿರಂಗಪಡಿಸಿದ್ದಾರೆ.

ತಾನು ಸ್ವಾತಂತ್ರ್ಯ ಸಮರದಲ್ಲಿದ್ದೆ ಎಂದು ಬಿಜೆಪಿ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ವಾದ ಅರ್ಧ ಸತ್ಯವಾಗಿದೆ ಒಂದು ಸಮಯದಲ್ಲಿ ಹೋರಾಟದ ಭಾಗವಾಗಿ ಬಂಧಿಸಲ್ಪಟ್ಟಾಗ ಕ್ಷಮಾದಾನ ಅರ್ಜಿ ಸಲ್ಲಿಸಿ ಅವರು ಪಾರಾದರು ಎಂದು ಮದ್ರಾಸ್ ಕೊರಿಯರ್‌ಗೆ ಬರೆದ ಲೇಖನದಲ್ಲಿ ರಾಮ್ ಪುನಿಯಾನಿ ತಿಳಿಸಿದ್ದಾರೆ.

ಹುಟ್ಟೂರು ಭುವನೇಶ್ವದಲ್ಲಿ ಬ್ರಿಟಿಷ್ ವಿರುದ್ಧ ಪ್ರತಿಭಟನೆ ನಡೆದಾಗ ನೋಡುಗರಲ್ಲಿ ವಾಜಪೇಯಿ ಇದ್ದರು. ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜು ಮಾಡಿ ಚದುರಿಸಿದಾಗ ಪೊಲೀಸರು ಪ್ರತಿಭಟನಾಕಾರ ಜೊತೆ ಹೊರಟ ವಾಜಪೇಯಿಯವರನ್ನು ಬಂಧಿಸಿದ್ದರು. ಜೈಲಿನಿಂದ ಹೊರಗೆ ಬರಲು ಅತೀ ಬೇಗನೆ ಕ್ಷಮಾಯಾಚನೆ ಅರ್ಜಿ ಸಲ್ಲಿಸಿದ್ದು ಮಾತ್ರವಲ್ಲದೇ ತಾನು ಹೋರಾಟದ ಭಾಗವಲ್ಲ ಎಂದು ಅದರಲ್ಲಿ ಬರೆದಿದ್ದರು. ಹೋರಾಟಕ್ಕೆ ನೇತೃತ್ವ ನೀಡಿದವರ ಹೆಸರುಗಳನ್ನು ಪೊಲೀಸರಿಗೆ ಹೇಳಿ ಕೊಟ್ಟು ಪಾರಾಗಿದ್ದರೆಂದು ಪುನಿಯಾನಿ ಹೇಳುತ್ತಾರೆ.