2018 ರಲ್ಲಿ ಇಸ್ರೇಲ್ ಸೇನೆಯಿಂದ 312 ಫೇಲಸ್ತೀನಿಯರ ಹತ್ಯೆ, 31,500 ಗಾಯಾಳುಗಳು: ಎನ್.ಜಿ.ಓ ವರದಿ

0
566

ಇಸ್ರೇಲ್ ಆಕ್ರಮಿತ ಗಾಜಾ ಪಟ್ಟಿ ಮತ್ತು ವೆಸ್ಟ್ ಬ್ಯಾಂಕ್ ವಲಯಗಳಲ್ಲಿ ಸುಮಾರು 312 ಫೇಲಸ್ತೀನಿಯರನ್ನು ಇಸ್ರೇಲ್ ಸೇನೆಯು 2018 ರಲ್ಲಿ ಹತ್ಯೆಗೈದಿರುವುದಾಗಿ ಫೇಲಸ್ತೀನಿಯನ್ ಎನ್.ಜಿ.ಓ ವರದಿ ಮಾಡಿದೆ.

ಹತ್ಯೆಯಾದವರಲ್ಲಿ ಒಟ್ಟು 53 ಮಕ್ಕಳು ಹಾಗೂ ಮೂವರು ಮಹಿಳೆಯರೂ ಸೇರಿದ್ದಾರೆಂಬುದಾಗಿ ಫೆಲಸ್ತೀನಿಯನ್ ಲಿಬರೇಶನ್ ಆರ್ಗನೈಸೇಶನಿನ(PLO) ಅಬ್ದುಲ್ಲಾಹ್ ಹೌರಾನಿ ಸೆಂಟರ್ ಫಾರ್ ಸ್ಟಡೀಸ್ ಆ್ಯಂಡ್ ಡಾಕ್ಯುಮೆಂಟೆಷನ್ ತನ್ನ ವರದಿಯಲ್ಲಿ ತಿಳಿಸಿದೆ.‌

ಎನ್.ಜಿ.ಓ ಪ್ರಕಾರ ಗಾಜಾ ಪಟ್ಟಿಯಲ್ಲಿ 262 ಫೇಲಸ್ತೀನಿಯರು ಹಾಗೂ ಇಸ್ರೇಲ್ ಆಕ್ರಮಿತ ವೆಸ್ಟ್ ಬ್ಯಾಂಕ್ ವಲಯದಲ್ಲಿ 50 ಫೇಲಸ್ತೀನಿಯರು ಇಸ್ರೇಲ್ ಸೇನೆಯಿಂದ ಹತ್ಯೆಗೊಳಗಾಗೊರುವುದಾಗಿ ತಿಳಿಸಿದೆ.

ಕಳೆದ ಹಿಂದಿನ ವರ್ಷಗಳಲ್ಲಿ ಹುತಾತ್ಮರಾದವರ ಸಂಖ್ಯೆಯನ್ನು ಪರಿಗಣಿಸುವಾಗ 2018 ರಲ್ಲಿ ಫೇಲಸ್ತೀನಿಯನ್ ಹುತಾತ್ಮರ ಸಂಖ್ಯೆಯು ಶೇ. 200%ಕ್ಕೆ ಏರಿಕೆಯಾಗಿದೆ. ಗಾಜಾ ಪಟ್ಟಿಯಲ್ಲಿ ಸುಮಾರು 31 ಸಾವಿರ ಜನರು ಇಸ್ರೇಲ್ ಸೇನಾ ದಾಳಿಯಿಂದ ಗಾಯಾಳುಗಳಾಗಿದ್ದರೆ, ವೆಸ್ಟ್ ಬ್ಯಾಂಕ್ ವಲಯದಲ್ಲಿ 500 ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆಂದು ವರದಿಯಲ್ಲಿ ತಿಳಿದು ಬಂದಿದೆ.