ಟರ್ಕಿ, ಗ್ರೀಸ್‍ನಲ್ಲಿ ಭೂಕಂಪ: 22 ಮಂದಿ ಸಾವು, ಮುಂದುವರಿದ ರಕ್ಷಣಾ ಕಾರ್ಯ- ವೀಡಿಯೊ

0
759

ಸನ್ಮಾರ್ಗ ವಾರ್ತೆ

ಇಸ್ತಾಂಬುಲ್,ಅ.31: ಟರ್ಕಿ ಮತ್ತು ಗ್ರೀಸ್‍ನಲ್ಲಿ ಭೂಕಂಪನವಾಗಿದ್ದು ಮೃತರ ಸಂಖ್ಯೆ ಹನ್ನೆರಡಕ್ಕೇರಿಕೆಯಾಗಿದೆ. ಹಲವಾರು ಮಂದಿ ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ.

ಶುಕ್ರವಾರ ಸಂಜೆ ಎಗನ್ ಸಮುದ್ರದಲ್ಲಿ ಕಂಪನವಾಗಿದ್ದು ಸಾಮೊಸಿಲ್ ದ್ವೀಪದಲ್ಲಿ ಸಣ್ಣದಾದ ಸುನಾಮಿಯೂ ಕಂಡುಬಂದಿತ್ತು. ಟರ್ಕಿಯ ಪಶ್ಚಿಮ ನಗರಗಳಲ್ಲಿ ಕಂಪನವಾಗಿದೆ. ಸುನಾಮಿಯಿಂದಾಗಿ ಟರ್ಕಿಯ ಕರಾವಳಿ ಪ್ರದೇಶಗಳು ನದಿಗಳಂತಾಗಿದ್ದು, ಹಲವಾರು ನಾಶನಷ್ಟಗಳು ಸಂಭವಿಸಿದೆ. ಇಸಾಮಿರ್ ಕರಾವಳಿಯಲ್ಲಿ 17 ಕಿಲೊಮೀಟರ್ ದೂರ 16 ಕಿಲೋಮೀಟರ್ ಆಳದಲ್ಲಿ ಕಂಪನ ಪ್ರಭಾವ ಕೇಂದ್ರವಿತ್ತೆಂದು ಅಮೆರಿಕದ ಜಿಯೊಲಜಿಕಲ್ ಸರ್ವೆ ತಿಳಿಸಿದೆ.

ಇಸ್‍ಮಿರ್‌ನಲ್ಲಿ ಅತ್ಯಂತ ಹೆಚ್ಚು ನಾಶನಷ್ಟ ಸಂಭವಿಸಿದೆ. 30 ಲಕ್ಷಕ್ಕೂ ಹೆಚ್ಚು ಮಂದಿ ವಾಸಿಸುವ ಪ್ರದೇಶ ಇದಾಗಿದ್ದು ಹಲವಾರು ಕಟ್ಟಡಗಳು ಕುಸಿದಿವೆ. ಕಟ್ಟಡಗಳು ಬೀಳುತ್ತಿರುವುದನ್ನು ನೋಡಿ ಜನರು ಓಡುತ್ತಿರುವ ದೃಶ್ಯಗಳು ಹೊರಬಂದಿವೆ. 20ರಷ್ಟು ಕಟ್ಟಡಗಳು ಕುಸಿದು ಬಿದ್ದಿವೆ ಎಂದು ವರದಿಯಾಗಿದೆ. ಎಗನ್ ಸಮುದ್ರದಲ್ಲುಂಟಾದ ಸುನಾಮಿಯಿಂದ ಕರಾವಳಿ ಪ್ರದೇಶಕ್ಕೆ ನೀರು ತುಂಬಿಕೊಂಡಿತು. ಕಟ್ಟಡಗಳು ರಸ್ತೆಗಳು ನೀರಿನಿಂದಾವ್ರತವಾಗಿದೆ.