ಆಟೋ ರಿಕ್ಷಾದ ಮೇಲೆ ಡಂಪರ್ ಲಾರಿ ಪಲ್ಟಿ: ಪರೀಕ್ಷೆ ಮುಗಿಸಿ ಹಿಂತಿರುಗುತ್ತಿದ್ದ ಮೂವರು ವಿದ್ಯಾರ್ಥಿಗಳ ಸಹಿತ ನಾಲ್ವರು ಬಲಿ

0
436

ಸನ್ಮಾರ್ಗ ವಾರ್ತೆ

ರಾಯ್‌ಗಢ: ಮಹಾರಾಷ್ಟ್ರದ ರಾಯ್‌ಗಢದಲ್ಲಿ ಮರಳು ತುಂಬಿದ ಡಂಪರ್ ಲಾರಿಯೊಂದು ಆಟೋ ರಿಕ್ಷಾದ ಮೇಲೆ  ಪಲ್ಟಿಯಾದ ಪರಿಣಾಮವಾಗಿ ಮೂವರು ವಿದ್ಯಾರ್ಥಿಗಳ ಸಹಿತ ಆಟೋ ಚಾಲಕ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾಗಿ ವರದಿಯಾಗಿದೆ‌.

ಅಪಘಾತದ ವಿಷಯ ತಿಳಿದ ಪೊಲೀಸರು ಮರಳು ದಿಬ್ಬದೊಳಗಿಂದ ಮೃತದೇಹಗಳನ್ನು ಹೊರತೆಗೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಯಲ್ಲಿ ಸಂತಾಪ ಸೂಚಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮೃತರ ಕುಟುಂಬಕ್ಕೆ ತಲಾ 5ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.