ನ್ಯೂಯಾರ್ಕ್,ಎ.6: ಅರಬ್ ದೇಶಗಳಲ್ಲಿ ಕಠಿಣ ಜಲ ಕ್ಷಾಮ ಕಂಡು ಬಂದಿದ್ದು ಇದನ್ನು ಆದಷ್ಟು ಬೇಗನೆ ಪರಿಹರಿಸಬೇಕೆಂದು ವಿಶ್ವಸಂಸ್ಥೆಯ ಆಹಾರ-ಕೃಷಿ ಸಂಘಟನೆ(ಎಫ್ಐಒ) ಮುನ್ನೆಚ್ಚರಿಕೆ ನೀಡಿದೆ. ಈಸ್ಥಿತಿಯಲ್ಲಿ ಹೋದರೆ 2050ಕ್ಕಾಗುವಾಗ ನೀರಿನ ಮೂಲ ಶೇ.50ಕ್ಕೆ ಇಳಿಕೆಯಾದೀತು. ಇದಕ್ಕೆ ಪರಿಹಾರೋಪಾಯವಾಗಿ ಅರಬ್ ದೇಶಗಳು ಜಂಟಿ ಜಲಪರಿಪಾಲನೆ ಯೋಜನೆಯನ್ನು ಜಾರಿಗೆ ತರಬೇಕು. ಆಧುನಿಕ ನೀರಾವರಿ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕೆಂದು ವಿಶ್ವಸಂಸ್ಥೆ ತಿಳಿಸಿದೆ.
ಹವಾಮಾನ ವೈಪರೀತ್ಯದಿಂದ ಮಧ್ಯಪ್ರಾಚ್ಯ, ಉತ್ತರ ಆಫ್ರಿಕನ್ ದೇಶಗಳು ಜಲಕ್ಷಾಮವನ್ನು ಎದುರಿಸುತ್ತಿದೆ ಎಂದು ಗುರುವಾರ ಈಜಿಪ್ಟ್ನ ಕೈರೊದಲ್ಲಿ ನಡೆದ ಅರಬ್ ದೇಶಗಳ ಸಮ್ಮೇಳನದಲ್ಲಿ ಮಾತಾಡಿದ ಎಫ್ಐಒ ನಿರ್ದೇಶಕ ಜವರಲ್ ಜೋಸ್ ಗ್ರಾಸಿಯಾನೊ ಸಿಲ್ವ ಹೇಳಿದರು. ಈ ವಲಯದ ನೀರು ಸಂರಕ್ಷಣೆಗೆ ಭೂಜಲ ಮೂಲ ಪರಿಪಾಲನೆಗೆ ಸೂಕ್ತ ವ್ಯವಸ್ಥೆ ಇಲ್ಲ ಎನ್ನುವುದನ್ನು ನಂಬಲು ಕಷ್ಟವಾಗುತ್ತಿದೆ ಎಂದು ಅವರು ಹೇಳಿದರು.












