ಮುಸ್ಲಿಂ ವಿದ್ಯಾರ್ಥಿಯನ್ನು ತಾಲಿಬಾನಿ ಎಂದು ಕರೆದು ಕ್ಷಮೆ ಯಾಚಿಸಿದ ಜಗ್ಗಿ ವಾಸುದೇವ್-ವೀಡಿಯೊ

0
991

ಲಂಡನ್,ಎ.6: ಇಂಗ್ಲೆಂಡಿನ ಲಂಡನ್ ಸ್ಕೂಲ್ ಅಫ್ ಇಕಾನಮಿಕ್ಸ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿಯನ್ನು ತಾಲಿಬಾನಿ ಎಂದು ಕರೆದಿದ್ದ ಜಗ್ಗಿ ವಾಸುದೇವ್ ತನ್ನ ಹೇಳಿಕೆ ವಿವಾದವಾದ ನಂತರ ಕ್ಷಮೆ ಯಾಚಿಸಿದ್ದಾರೆ. ಯೂತ್ ಆಂಡ್ ಟ್ರೂತ್, ಅನ್‍ಪ್ಲಗ್ ವಿದ್ ವಾಸುದೇವ್ ಎನ್ನುವ ಕಾರ್ಯಕ್ರಮದಲ್ಲಿ ಲಂಡನ್‍ನಲ್ಲಿ ತಾಲಿಬಾನಿ ಎಂದು ಮುಸ್ಲಿಂ ವಿದ್ಯಾರ್ಥಿಗೆ ಹೇಳಿದ್ದರು.

ವಿದ್ಯಾರ್ಥಿಗಳೊಡನೆ ಸಂವಾದದಲ್ಲಿ ಪಾಕ್ ವಂಶದ ಬಲಾಲ್ ಬಿನ್ ಸಾಕಿಬ್ ಎನ್ನುವ ವಿದ್ಯಾರ್ಥಿಗೆ ತಾಲಿಬಾನಿ ಎಂದು ಜಗ್ಗಿ ವಾಸುದೇವ್ ಹೇಳಿದ್ದರು. ಅನ್‍ಪ್ಲಗ್ ವಿದ್ ಸದ್ಗುರು ಎನ್ನುವ ಕಾರ್ಯಕ್ರಮದ ನಿರೂಪಕ ಕೂಡ ಸಾಕಿಬ್ ಆಗಿದ್ದರು. ಚರ್ಚೆಯ ನಡುವೆ ಜೀವನ ಮತ್ತು ಮಾನಸಿಕ ಸಂಕಷ್ಟಗಳ ಕುರಿತು ಪ್ರಶ್ನಿಸಿದಾಗ ಸಾಕಿಬ್‍ರಿಗೆ ತಾಲಿಬಾನಿ ಎಂದು ಜಗ್ಗಿ ಹೇಳಿದರು.

ವಿವಾದ ವೀಡಿಯೊ ವ್ಯಾಪಕವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರಗೊಂಡಿದ್ದು ಅವರ ಹೇಳಿಕೆಯನ್ನು ಖಂಡಿಸಿ ವಿದ್ಯಾರ್ಥಿ ಸಂಘಗಳು ರಂಗಪ್ರವೇಶಿಸಿದ್ದವು. ಇಸ್ಲಾಮೊಫೋಬಿಯ ಹೇಳಿಕೆಗೆ ಕ್ಯಾಂಪಸ್ಸಿನಲ್ಲಿ ಅವಕಾಶ ಕಲ್ಪಿಸುವುದು ಖಂಡನೀಯವೆಂದು ಜಗ್ಗಿ ಕ್ಷಮೆಯಾಚಿಸಬೇಕೆಂದು ವಿದ್ಯಾರ್ಥಿ ಸಂಘ ಆಗ್ರಹಿಸಿತ್ತು.

ತದನಂತರ ಘಟನೆಯಲ್ಲಿ ಜಗ್ಗಿ ವಾಸುದೇವ್ ಸ್ಪಷ್ಟೀಕರಣ ನೀಡಿ ಬಿಲಾಲ್‍ರನ್ನು ಅಪಮಾನಿಸುವ ಉದ್ದೇಶ ತನಗಿಲ್ಲ. ತಾಲಿಬಾನ್ ಎಂಬುದಕ್ಕೆ ಉತ್ಸಾಹವಿರುವ ವಿದ್ಯಾರ್ಥಿ ಎನ್ನುವ ಅರ್ಥವಿದೆ. ಪ್ರಚಾರ ಮಾಡಲಾಗುತ್ತಿರುವ ವೀಡಿಯೊವನ್ನು ಎಡಿಟ್ ಮಾಡಲಾಗಿದೆ ಎಂದು ಅವರು ಕ್ಷಮಾಯಾಚನೆ ವೀಡಿಯೊದ ಮೂಲಕ ತಿಳಿಸಿದ್ದಾರೆ.