ಬಾಗ್ದಾದ್,ಎ.6: ಇಸ್ಲಾಮಿಕ್ ಸ್ಟೇಟ್ ಕುರಿತು ವಿವರ ನೀಡಿದವರಿಗೆ 25 ಮಿಲಿಯನ್ ಡಾಲರ್ ಬಹುಮಾನವನ್ನು ಇರಾಕ್ ಸರಕಾರ ಘೋಷಿಸಿದೆ. ಇದಕ್ಕೆ ಸಂಬಂಧಿಸಿದ ವಿವರಗಳನ್ನು ನೋಟಿಸುಗಳನ್ನು ಕಳೆದ ದಿವಸ ಇರಾಕ್ ಸೈನಿಕ ವಿಮಾನಗಳು ದೇಶದ ಪಶ್ಚಿಮ ಪ್ರಾಂತ್ಯದಲ್ಲಿ ಎರಚುತ್ತಾ ಹೋಯಿತೆಂದು ವರದಿಯಾಗಿದೆ.
ಐಎಸ್ ಸಂಘಟನೆ ಮತ್ತು ಅದರ ಮುಖಂಡರ ವಿವರ ನೀಡುವವರಿಗೆ ಬಹುಮಾನ ದೊರಕಲಿದೆ. ಐಎಸ್ ಭಯೋತ್ಪಾದ ಗುಂಪುಗಳ ಮುಖ್ಯಸ್ಥ ಇಬ್ರಾಹೀಂ ಅಲ್ ಸಮರಾಯಿ ಅಬೂಬಕರ್ ಅಲ್ ಬಗ್ದಾದಿ ಫೋಟೋ ಸಹಿತ ಅನೇಕ ನೋಟಿಸುಗಳನ್ನು ಅಂಬರ್ ಪ್ರಾಂತದಲ್ಲಿ ಸೈನ್ಯ ವಿತರಿಸಿತು. ಬಾಗ್ದಾದ್ ಸಹಿತ ದೇಶದಲ್ಲಿರುವ ಐಎಸ್ ಸಂಘಟನೆಯ ನಾಯಕರ ಕುರಿತು ಮತ್ತು ಐಎಸ್ ಕುರಿತು ವಿವರಗಳು ನೀಡಬೇಕೆಂದು ಕರಪತ್ರದಲ್ಲಿ ವಿನಂತಿಸಲಾಗಿದೆ. ನಿಮ್ಮ ಭೂಮಿಯನ್ನು ವಶಪಡಿಸಿಕೊಂಡು ನಿಮ್ಮ ಜನರನ್ನು ಕೊಲ್ಲುವ ದಾಯಿಶ್(ಐಎಸ್) ನಾಯಕ ಮತ್ತು ತಂಡ ಈಗ ಸುರಕ್ಷಿತ ಸ್ಥಾನದಲ್ಲಿ ಅಡಗಿ ಕೂತಿದ್ದಾರೆ. ವಿವರ ನೀಡಿ ಅವರನ್ನು ಪತ್ತೆ ಹಚ್ಚಲು ಸಹಕರಿಸಿ ಎಂದು ಕರಪತ್ರದಲ್ಲಿ ವಿನಂತಿಸಲಾಗಿದೆ.












