ಇಸ್ರೇಲಿನ ಜೈಲುಗಳಲ್ಲಿ ಬಂಧಿಯಾದ ಫೆಲಸ್ತೀನಿ ಮಕ್ಕಳು; ಸೈನಿಕ ದಾಳಿಯ ವೇಳೆ 220 ಹೆಚ್ಚು ಮಕ್ಕಳ ಬಂಧನ-ಚಿತ್ರಹಿಂಸೆ!

0
940

ಗಾಝ,ಮಾ. 27: ಇಸ್ರೇಲ್ 220 ಅಮಾಯಕ ಫೆಲಸ್ತೀನಿ ಮಕ್ಕಳನ್ನು ಅಮಾನವೀಯವಾಗಿ ಜೈಲಿನೊಳಗೆ ಬಂಧಿಸಿಟ್ಟಿದೆ ಎಂದು ಫೆಲಸ್ತೀನ್ ಪ್ರಿಸನರ್ಸ್ ಕ್ಲಬ್(ಪಿಪಿಸಿ) ನಿರ್ದೇಶಕ ಕುದೌರ ಫೇರ್ಸ್ ನಿನ್ನೆ ಹೇಳಿದರು. ಇಸ್ರೇಲಿನ ಸೈನಿಕರು ಪ್ರತಿದಿನ ದಾಳಿ ಮಾಡಿ ಮಕ್ಕಳನ್ನು ಹಿಡಿದುಕೊಂಡು ಹೋಗುತ್ತಿದೆ. ತನಿಖಾಧಿಕಾರಿಗಳು ಮಕ್ಕಳಿಗೆ ಚಿತ್ರ ಹಿಂಸೆ ನೀಡುತ್ತಿದ್ದಾರೆ. ಪುಟ್ಟ ಮಕ್ಕಳನ್ನು ಜೈಲಿನೊಳಗೆ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಕುದೌರ ಫೇರ್ಸ್ ಹೇಳಿದರು. ಮಕ್ಕಳನ್ನು ಬಂಧಿಸಿಟ್ಟ ಜೈಲುಗಳಲ್ಲಿ ಮಕ್ಕಳ ಮತ್ತು ಕೈದಿಗಳ ಹಕ್ಕುಗಳ ಅಂತಾರಾಷ್ಟ್ರೀಯ ಮಾನದಂಡಗಳನ್ನು ಅನುಸರಿಲಾಗುತ್ತಿಲ್ಲ.

ಮಕ್ಕಳಿಗೆ ಸರಿಯಾದ ಆಹಾರ ದೊರಕುವುದಿಲ್ಲ. ಶುಚಿತ್ವ, ಉತ್ತಮಗಾಳಿ, ಬೆಳಕು ಇಲ್ಲ. ಜೊತೆಗೆ ಸೊಳ್ಳೆಗಳ ಹಾವಳಿ, ಸರಿಯಾದ ವೈದ್ಯಕೀಯ ಚಿಕಿತ್ಸೆ ಮಾತ್ರವಲ್ಲ ಸರಿಯಾದ ಉಡುಪನ್ನು ನೀಡಲಾಗುತ್ತಿಲ್ಲ ಎಂದು ಅವರು ಹೇಳಿದರು. ಮಕ್ಕಳು ಹೊರ ಜಗತ್ತಿನೊಂದಿಗೆ ಸಂಪೂರ್ಣ ಸಂಬಂಧವನ್ನು ಕಡಿದು ಕೊಂಡಿದ್ದಾರೆ. ಅವರ ಕುಟುಂಬಕ್ಕೆ ಮಕ್ಕಳ ನ್ನು ಭೇಟಿ ಮಾಡಲು ಅವಕಾಶ ನೀಡಲಾಗುತ್ತಿಲ್ಲ. ಇಸ್ರೇಲಿನ ಕೈದಿಗಳು ಮಕ್ಕಳಿಗೆ ಲೈಂಗಿಕ ಹಿಂಸೆಯನ್ನೂ ನೀಡುತ್ತಿದ್ದಾರೆ ಎಂದು ಕುದೌರ ಫೇರ್ಸ್ ತಿಳಿಸಿದರು.