ಮಾಸ್ಕೊ,ಮಾ.24: ರಷ್ಯ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕಿಲ್ಲರ್ ರೊಬೋಟ್( ಮಾನವ ರಹಿತ ಸ್ವಯಂಚಾಲಿತ ಯುದ್ಧ ಮಾಡುವ ರೊಬೋಟ್) ಅನ್ನು ತನ್ನ ಸೇನೆಗೆ ಸೇರಿಸುತ್ತಿದೆ ಎಂಬ ಶಾಕ್ ನೀಡುವಂತಹ ವರದಿಯೊಂದು ಇದೀಗ ಬಹಿರಂಗಗೊಂಡಿದೆ.
ಇದೇವೇಳೆ ಮೂರನೆ ಮಹಾಯುದ್ಧ ಸಾಧ್ಯತೆಯನ್ನು ಇದು ಹೆಚ್ಚಿಸಲು ಕಾರಣವಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕಿಲ್ಲರ್ ರೊಬೋಟ್ ಗಳನ್ನು ಗ್ರೌಂಡ್ ಪೋರ್ಸ್ ಅಂದರೆ ಭೂಸೇನೆಗೆ ರಷ್ಯಾ ರೂಪು ನೀಡುತ್ತಿದೆ ಎನ್ನಲಾಗಿದೆ.
ರಷ್ಯಾದ ಸೇನೆಯಲ್ಲಿ ಹೊಸ ವ್ಯವಸ್ಥೆ ಅಸ್ತಿತ್ವಕ್ಕೆ ಬರುವುದರೊಂದಿಗೆ ಯುದ್ಧರಂಗಕ್ಕೆ ತೆರಳಿ ಮನುಷ್ಯರ ಬದಲು ರೊಬೊಟ್ಗಳು ಯುದ್ಧ ಮಾಡಲಿವೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಉಪಯೋಗಿಸಿ ಚಾಲಕನಿಲ್ಲದೆ ಟ್ಯಾಂಕರ್ಗಳು ಎಂತಹ ದುರ್ಗಮ ಸ್ಥಳಕ್ಕೂ ಚಲಿಸಬಲ್ಲುದು. ವಿರೋಧಿಗಳು ಏಕಾಏಕಿ ಬರುವ ರೊಬೊಟ್ ಡ್ರೋಣ್ಗಳ ಮಹಾಪ್ರವಾಹ ಕಂಡು ವಿರೋಧಿಗಳು ಛಿದ್ರಗೊಳ್ಳಬಹುದು ಎಂದು ಮುನ್ನೆಚ್ಚರಿಕೆಯನ್ನು ಯುದ್ಧತಜ್ಞರು ನೀಡುತ್ತಿದ್ದಾರೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಉಪಯೋಗಿಸಿ ರಷ್ಯದ ಸೇನೆ ಬೆಳೆಯುವಾಗ ಇನ್ನೊದೆಡೆ ಅಮೆರಿಕ ಸಹಿತ ಹಲವು ದೇಶಗಳಲ್ಲಿ ನಡುಕ ಸೃಷ್ಟಿಯಾಗಿದೆ ಎಂದು ವರದಿ ತಿಳಿಸುತ್ತಿದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕಿಲ್ಲರ್ ರೊಬೋಟ್ ಡ್ರೋಣ್ಗಳ ಒಂದು ಸಮೂಹವನ್ನೇ ರಷ್ಯ ಸಜ್ಜುಗೊಳಿಸುತ್ತಿದೆ ಎಂದು ಇತ್ತೀಚೆಗೆ ವೀಡಿಯೊವೊಂದನ್ನು ರಷ್ಯ ವೇ ಹೊರಗೆ ಬಿಟ್ಟಿತ್ತು. ಇದರ ಭಾಗವಾಗಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕಂಟ್ರೊಲ್ಡ್ ಡ್ರೈವರ್ಲೆಸ್ ಟ್ಯಾಂಕ್ಗಳನ್ನು ಕೂಡ ರಷ್ಯ ಅಭಿವೃದ್ಧಿಪಡಿಸುತ್ತಿದೆ ಎಂದು ತಿಳಿದು ಬಂದಿದೆ.
ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಭಿವೃದ್ಧಿ ಪಡಿಸುವ ಹೊಣೆಯನ್ನು ರಷ್ಯದ ಅಡ್ವಾನ್ಸ್ಡ್ ರಿಸರ್ಚ್ ಫೌಂಡೇಶನ್ (ಎಆರ್ಎಫ್) ವಹಿಸಿಕೊಂಡಿದೆ. ಈಗ ದೂರದಿಂದ ನಿಯಂತ್ರಿಸುವ ಡ್ರೋಣ್ಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ಆದರೆ ರಷ್ಯ ಈಗ ಹೊಸದಾಗಿ ಶತ್ರುಗಳನ್ನು ಮನುಷ್ಯನ ಉಪಸ್ಥಿತಿಯಿಲ್ಲದೆ ನಾಶಪಡಿಸುವ ಕಿಲ್ಲರ್ ರೊಬೊಟ್ಗಳನ್ನು ತಯಾರಿಸುತ್ತಿದೆ.
ಒಟೊನಮಸ್ ಮೋಡ್ನಲ್ಲಿ ಕಾರ್ಯಾಚರಣೆ ನಡೆಸಬಲ್ಲಂಥ ಕೊಂಬಾಟ್ ರೊಬೊಟ್ಗಳನ್ನು ರಷ್ಯ ತಯಾರಿಸುತ್ತಿದೆ ಎಂದು ಎಆರ್ಎಫ್ ವಕ್ತಾರರೊಬ್ಬರು ಬಹಿರಂಗ ಪಡಿಸಿದೆ..ಇದು ಸಿದ್ಧಗೊಂಡ ಬಳಿಕ ಯುದ್ಧದ ವೇಳೆ ಮಾನವ ಆಪರೇಟರ್ಗಳನ್ನು ಸಂಪೂರ್ಣ ಕೈಬಿಡಲಾಗುತ್ತದೆ ಎಂದು ಅವರು ಹೇಳಿದರು. ಈಗಾಗಲೇ ಎಆರ್ ಎಫ್ ಇದಕ್ಕೆ ಸಂಬಂಧಿಸಿದ ವೀಡಿಯೊವೊಂದನ್ನು ಯೂಟ್ಯೂಬ್ಗೆ ಅಪ್ಲೋಡ್ ಮಾಡಿದ್ದು ಈ ವೀಡಿಯೊದಲ್ಲಿ ಎಐ ಕಿಲ್ಲರ್ ರೊಬೊಟ್ಗಳ ಸಾಮಥ್ರ್ಯದ ಕುರಿತು ವಿವರಣೆ ನೀಡಲಾಗಿದೆ.
ರಷ್ಯದಂತೆ ಅಮರಿಕ ಸಹಿತ ಹಲವಾರು ದೇಶಗಳು ಭವಿಷ್ಯದಲ್ಲಿ ಯುದ್ಧದಲ್ಲಿ ಬಳಸಬಹುದಾದ ಒಟೊನಮಸ್ ರಿಮೊಟ್ ಕಂಟ್ರೋಲ್ಡ್ ವೆಹಿಕಲ್ಗಳನ್ನು ಹೇಗೆ ತಯಾರಿಸಬಹುದು ಎಂಬ ತ್ವರಿತ ಸಂಶೋಧನೆಯಲ್ಲಿ ತೊಡಗಿದ್ದು ಇದೇ ವೇಳೆ ರಷ್ಯ ಇತರರನ್ನು ಈ ಕ್ಷೇತ್ರದಲ್ಲಿ ಹಿಂದಿಕ್ಕಿ ಸಾಧನೆ ಮೆರೆದಿದೆ ಎಂದು ವರದಿ ಬಹಿರಂಗಪಡಿಸಿದೆ.












