ಮೀನೇ ಜಾಗ್ರತೆ!: ಬೇಯಿಸಲು ಇಟ್ಟಾಗ ಮೀನಿನಿಂದ ಹುಳುಗಳು ಹೊರಬಂದವು

0
1346

ಸನ್ಮಾರ್ಗ ವಾರ್ತೆ

ಕುಳತ್ತುಪ್ಪುಝ,ಜೂ.29: ಹುಳುವಾದ ಮೀನನ್ನು ಭಾರೀ ಬೆಲೆಗೆ ಮಾರಿ ಮೋಸ ಮಾಡಿರುವುದಾಗಿ ದೂರು ಕೇಳಿ ಬಂದಿದೆ. ಕುಳತ್ತುಪ್ಪುಝ ಡೀಸಂಟ್ ಮುಕ್ ವನಶ್ರೀಯ ನಿವೃತ್ತ ರೇಂಜ್ ಆಫಿಸರ್ ಪ್ರಭಾಕರನ್ ನಾಯರ್‌ರ ಕುಟುಂಬ ಕಳೆದ ದಿವಸ ಮನೆಯ ಬಳಿಗೆ ಮೀನು ಮಾರಲು ವಾಹನದಿಂದ ಮೀನು ಖರೀದಿಸಿದ್ದರು. ನಂತರ ಬೇಯಿಸಲು ಹೊರಟು ಒಲೆಯಲ್ಲಿಟ್ಟಾಗ ಮೀನಿನಿಂದ ಹುಳಗಳು ಹೊರ ಬಂದವು.

ನೋಡುವಾಗ ಮೀನು ಒಳ್ಳೆದೇ ಇತ್ತು. ಕೆಟ್ಟು ಹೋಗಿರುವ ವಾಸನೆಯೂ ಇರಲಿಲ್ಲ. ಅಡಿಗೆ ಮಾಡಲಿಕ್ಕಾಗಿ ಸ್ಟೌವ್‍ನಲ್ಲಿ ಬಿಸಿ ಮಾಡಿದಾಗ ಮೀನಿನಿಂದ ಸಣ್ಣ ಹುಳುಗಳು ಒಂದೊಂದಾಗಿ ಹೊರಕ್ಕೆ ಬಂದಿದೆ. ಕೂಡಲೇ ಕುಳತ್ತುಪುಝ ಸಾಮೂಹಿಕ ಆರೋಗ್ಯ ವಿಭಾಗಕ್ಕೆ ತಿಳಿಸಿದರೂ ಅವರು ಅದನ್ನು ಪರೀಕ್ಷೆ ಮಾಡಲು ಬರಲಿಲ್ಲ.

ಕೊರೋನದಿಂದಾಗಿ ಕುಳತ್ತುಪುಝದಲ್ಲಿ ಸಾರ್ವಜನಿಕ ಮೀನು ಮಾರುಕಟ್ಟೆ ಬಂದ್ ಆಗಿದೆ. ಆದ್ದರಿಂದ ಈಗ ವಾಹನದಲ್ಲಿ ವ್ಯಾಪಾರಿಗಳು ಮೀನು ತಂದು ಮನೆಯ ಹತ್ತಿರ ಕೊಟ್ಟು ಹೋಗುತ್ತಿದ್ದಾರೆ. ಹೌಸ್ ಸಪ್ಲೈ, ಸಗಟು ವ್ಯಾಪಾರಿಗಳಿಂದ ಮೀನು ಖರೀದಿಸಿ ಚಿಲ್ಲರೆ ವ್ಯಾಪಾರಿಗಳು ಮನೆ ಬಾಗಿಲಿಗೆ ಬರುತ್ತಿದ್ದಾರೆ. ಇಲ್ಲಿ ಕೊಳೆತ ಮೀನು ಮಾರುತ್ತಿದ್ದಾರೆಂದು ಮೂರು ದೂರುಗಳು ದಾಖಲಾಗಿವೆ. ಆದರೆ ಆಹಾರ ಸುರಕ್ಷೆ ಅಧಿಕಾರಿಗಳು ಅದನ್ನು ತಲೆಗೆ ಹಚ್ಚಿಕೊಂಡಿಲ್ಲ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.