ಉತ್ತರ ಪ್ರದೇಶ: ಬಿಎಸ್ಪಿಯ ಮತಗಳು ಬಿಜೆಪಿಗೆ!-ದೂರು

0
1428

ಹೊಸದಿಲ್ಲಿ ಎ.12: ಮೊದಲ ಹಂತದ ಚುನಾವಣೆ ನಡೆದಿದ್ದ ಉತ್ತರ ಪ್ರದೇಶದ ಸಹರನ್‍ಪುರದಲ್ಲಿ ಬಿಎಸ್ಪಿಗೆ ಚಲಾವಣೆಗೊಂಡ ಮತಗಳು ಬಿಜೆಪಿ ಪಾಲಾಗಿದೆ ಎಂದು ಆರೋಪ ಹೊರಿಸಲಾಗಿದ್ದು ಸಹರನ್‍ಪುರದ ಬಿಜ್‍ನೋರ್ ಮತಗಟ್ಟೆಯಲ್ಲಿ ಬಿಎಸ್ಪಿ ಅಭ್ಯರ್ಥಿಯ ಚಿಹ್ನೆ ಆನೆಯ ಗುಂಡಿ ಅದುಮಿದಾಗ ತಾವರೆ ಚಿಹ್ನೆಯಲ್ಲಿ ಬೆಳಕು ಉರಿಯಿತು ಎಂದು ಧಾರಾ ಸಿಂಗ್ ಎಂಬವರು ದೂರಿದ್ದಾರೆ. ನಂತರ ಇಂತಹದೇ ದೂರಿನೊಂದಿಗೆ ಇನ್ನು ನಾಲ್ಕು ಮಂದಿ ಮುಂದೆ ಬಂದರು. ಇವರು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವ ದೃಶ್ಯಗಳು ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಟ್ವಿಟರ್‍ನಲ್ಲಿ ಶೇರ್ ಮಾಡಿದರು. ಆದರೆ ಇಂತಹದ್ದೇನೂ ನಡೆದಿಲ್ಲ ಇವೆಲ್ಲ ನಿರಾಧಾರ ಆರೋಪಗಳೆಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರತಿಕ್ರಿಯಿಸಿದ್ದಾರೆ.