ವಾಷಿಂಗ್ಟನ್,ಎ.6: ಯಮನ್‍ನಲ್ಲಿ ಅಮೆರಿಕ ಸೈನ್ಯ ಸೌದಿ ಅರೇಬಿಯದ ಸಖ್ಯ ಸೇನೆಗೆ ನೀಡುತ್ತಿದ್ದ ಬೆಂಬಲವನ್ನು ಹಿಂಪಡೆಯಲು ಅಮೆರಿಕದ ಜನಪ್ರತಿನಿಧಿ ಸಭೆ ಒಪ್ಪಿಗೆ ನೀಡಿದೆ. 175ಕ್ಕೆ 247 ವೋಟುಗಳ ಅಂತರದಿಂದ ಪ್ರಸ್ತಾವ ಪಾಸಾಗಿದೆ. ಇದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರ ಪರಿಗಣನೆಗೆ ಕಳುಹಿಸಲಿದೆ. ಆದರೆ ಪ್ರಸ್ತಾವಕ್ಕೆ ಟ್ರಂಪ್ ವೀಟೊ ಪ್ರಯೋಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸೆನೆಟ್‍ನಲ್ಲಿ ಅಂಗೀಕಾರಗೊಂಡ ಪ್ರಸ್ತಾವ ಜನಪ್ರತಿನಿಧಿ ಸಭೆಯಲ್ಲಿ ಮತಕ್ಕೆ ಹಾಕಲಾಗಿತ್ತು.
ಪ್ರಸ್ತಾವ ಪಾಸು ಮಾಡುವ ಮೂಲಕ ಮೊದಲ ಬಾರಿ ಅಮೆರಿಕನ್ ಕಾಂಗ್ರೆಸ್ 1973ರ ಯುದ್ಧಾಧಿಕಾರ ಕಾನೂನು ಪ್ರಕಾರ ವ್ಯವಹರಿಸಿತು. ಯಮನ್‍ನಲ್ಲಿ 2015ರಿಂದ ಅಮೆರಿಕ, ಸೌದಿ ಅರೇಬಿಯದ ಮಿತ್ರ ಪಡೆಗಳಿಗೆ ಸಹಾಯ ನೀಡುತ್ತಿದೆ. ಯುದ್ಧವಿಮಾನಗಳಿಗೆ ಇಂಧನ ನೀಡುವುದು.ಇಂಟಲಿಜೆನ್ಸ್ ವಿವರಗಳನ್ನು ನೀಡುವುದು ಅಮೆರಿಕದ ಸೇನೆಯಾಗಿದೆ.












