ಬಿಜೆಪಿ 2014ಕ್ಕಿಂತ ಹೆಚ್ಚು ಬಹುಮತದಿಂದ ಗೆಲ್ಲಲಿದೆ- ನರೇಂದ್ರ ಮೋದಿ

0
578

ಹೊಸದಿಲ್ಲಿ,ಎ.6: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಬಹುಮತದಿಂದ ಗೆಲುವು ಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈವರೆಗೆ ಇಲ್ಲದ ಅಲೆ ಈಗ ದೇಶದಲ್ಲಿ ಕಂಡು ಬರುತ್ತಿದೆ ಎಂದು ಅವರು ಹೇಳಿದರು.

ಚುನಾವಣೆ ಘೋಷಣೆಯಾದ ಬಳಿಕ 70-80 ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಗುಜರಾತ್ ಚುನಾವಣೆಯ ವೇಳೆ ಅಥವಾ 2013-14ರ ವರ್ಷದ ಚುನಾವಣೆಯಲ್ಲಿ ಕಾಣದಿದ್ದಂತ ಆಡಳಿತ ಅನುಕೂಲಕರ ಅಲೆ ಅಲ್ಲೆಲ್ಲ ಕಂಡು ಬಂತು. ಈ ಅಲೆ ಬೃಹತ್ತಾದುದು ಎಂದು ಮೋದಿ ಹಿಂದುಸ್ಥಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಎಲ್ಲ ಕಡೆ ಬಿಜೆಪಿಗೆ ಜನರು ಸೇರ್ಪಡೆಯಾಗುತ್ತಿದ್ದಾರೆ. ಒರಿಸ್ಸಾ ಮತ್ತು ಪಶ್ಚಿಮಬಂಗಾಳದಲ್ಲಿ ಆ ಅಲೆ ಸ್ಪಷ್ಟವಾಗಿ ಗೋಚರಿಸಿದೆ. ಖಂಡಿತವಾಗಿ ಬಿಜೆಪಿ ಸರಕಾರ ರೂಪಿಸುತ್ತದೆ. ಅದು ಸಂಪೂರ್ಣ ಬಹುಮತ ಇರುವ ಸರಕಾರವಾಗಿರುತ್ತದೆ. ಹಿಂದಿಗಿಂತ ಹೆಚ್ಚು ಸದಸ್ಯ ಬಲ ಈ ಸಲ ಬಿಜೆಪಿಗೆ ಇರಲಿದೆ ಎಂದು ಮೋದಿ ಹೇಳಿದರು.

ಬಿಜೆಪಿಗೆ ಮಾತ್ರವಲ್ಲ ಬಿಜೆಪಿ ಮಿತ್ರಪಕ್ಷಗಳು ಕೂಡ ಕಳೆದ ಬಾರಿಗಿಂತ ಹೆಚ್ಚು ಸದಸ್ಯ ಬಲವನ್ನು ಹೊಂದಲಿದೆ. ಕಳೆದ ಐದುವರ್ಷದ ಆಡಳಿತದಲ್ಲಿ ಸಂಪೂರ್ಣ ತೃಪ್ತಿ ನೀಡಿದೆ. ಭಾರತ ಯಾಕೆ ಈಗಲೂ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿದೆ ಎನ್ನುವುದಕ್ಕೆ ಕಾರಣ ಹೇಳುವಂತಿಲ್ಲ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿರುವ ಎಲ್ಲ ಅವಕಾಶಗಳು ನಮಗೂ ಇವೆ ಎಂದು ಪ್ರಧಾನಿ ಹೇಳಿದರು.

ದೇಶದ ಪ್ರಧಾನಿ ಸ್ಥಾನವನ್ನು ವಹಿಸಿಕೊಂಡಾಗ ತಾನು ಯೋಚಿಸಿದ್ದಕ್ಕಿಂತ ಕೆಟ್ಟ ಅವಸ್ಥೆ ಇತ್ತು. ತಾನು ಈ ಸ್ಥಾನಕ್ಕೆ ಮೊದಲ ಬಾರಿ ಬಂದಿದ್ದೆ. ಆದರೆ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಆದರೆ ತೀರ್ಮಾನಗಳನ್ನು ತೆಗೆಯಲು ತೊಡಗಿದಾಗ ಸಮಸ್ಯೆಗಳು ಸೃಷ್ಟಿಯಾದವು. ಮುಖ್ಯಮಂತ್ರಿ ಎಂಬ ನೆಲೆಯಲ್ಲಿ ತನಗಿದ್ದ ಅನುಭವ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಸಮಸ್ಯೆ ಪರಿಹಾರಕ್ಕಾಗಿ ದಾರಿ ಕಂಡು ಹುಡುಕಲು ಸಾಧ್ಯವಿದೆ ಎಂದು ನನಗೆ ಗೊತ್ತಿತ್ತು. ಅದನ್ನು ಕಂಡು ಹುಕಲು ಯಶಸ್ವಿಯಾದೆ ಎಂದು ಮೋದಿ ಹೇಳಿದರು.