ಮೋದಿ ಚೌಕಿದಾರ್ ಆಗಿದ್ದರೆ ಟೋಪಿ, ವಿಝಿಲ್ ಕೊಡುತ್ತೇನೆ – ಅಕ್ಬರುದ್ದೀನ್ ಉವೈಸಿ

0
1331

ಹೈದರಾಬಾದ್,ಮಾ. 25: ಪ್ರಧಾನಿ ನರೇಂದ್ರ ಮೋದಿ ಹೆಸರಿನ ಮುಂದೆ ಚೌಕಿದಾರ್ ಸೇರಿಸಿರುವುದನ್ನು ಆಲ್ ಇಂಡಿಯಾ ಮಜ್ಲಿಸೆ ಇತ್ತಿಹಾದುಲ್ ಮುಸ್ಲಿಮೀನ್ ನಾಯಕ ಅಕ್ಬರುದ್ದೀನ್ ಉವೈಸಿ ಕಟುವಾಗಿ ಟೀಕಿಸಿದ್ದಾರೆ.’ ಮೋದಿ ಕಾವಲುಗಾರನಾಗಿದ್ದರೆ ಅವರಿಗೆ ಟೋಪಿ,ವಿಝಿಲ್ ಕೊಡುತ್ತೇನೆ ಎಂದು ಅಕ್ಬರುದೀನ್ ಉವೈಸಿ ಹೇಳಿದರು.

ಸಹೋದರ ಮತ್ತು ಪಾರ್ಟಿ ಅಧ್ಯಕ್ಷ ಅಸದುದ್ದೀನ್ ಉವೈಸಿಯವರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತಾಡುತ್ತಿದ್ದರು. ನರೇಂದ್ರ ಮೊದಿ, ಅಮಿತ್ ಶಾ ಮುಂತಾದವರು ಈಗಲೂ ‘ಚೌಕಿದಾರ್’ ಆಗಿದ್ದಾರೆ. ಆದರೆ ಟ್ವಿಟರ್‍ನಲ್ಲಿ ಮಾತ್ರ ಇವರ ಹೆಸರಿನ ಜೊತೆ ಚೌಕಿದಾರ್ ಇದೆ. ಹಾಗಿದ್ದರೆ ಆಧಾರ್ ಕಾರ್ಡಿನಲ್ಲಿ, ವೋಟರ್ ಐಡಿ, ಪಾಸ್‍ಪೋರ್ಟುಗಳಲ್ಲಿ ಹೆಸರು ಬದಲಾಯಿಸುವುದು ಒಳ್ಳೆಯದು. ಮೊದಲು ಚಾವಾಲಾ, ನಂತರ ಪಕೋಡಾವಾಲ, ಈಗ ಚೌಕಿದಾರ್. ಮೋದಿಯನ್ನು ಫಾಲೋ ಮಾಡುವವರನ್ನು ನೆನೆದು ಆಶ್ಚರ್ಯವಾಗುತ್ತಿದೆ ಎಂದರು. ಕೆಲವು ಸಮಯದಲ್ಲಿ ಮೋದಿ ಚಾ ಮಾರಾಟಗಾರನಾಗಿದ್ದರು. ಕೆಲವೊಮ್ಮೆ ಬಡವ, ಈಗ ಕಾವಲುಗಾರ. ಚಾಮಾರಾಟಗಾರನಾಗಿದ್ದರೆ ತಾನು ಮೋದಿಗೆ ಗ್ಲಾಸು ಖರೀದಿಸಿ ಕೊಡುತ್ತೇನೆ ಎಂದು ಈ ಹಿಂದೆಯೇ ಹೇಳಿದ್ದೇನೆ. ಈಗ ಚೌಕಿದಾರ್ ಆದುದರಿಂದ ಟೋಪಿ, ವಿಝಿಲ್ ಕೋಡುತ್ತೇನೆ ಎಂದು ಅಕ್ಬರುದ್ದೀನ್ ಉವೈಸಿ ಹೇಳಿದರು.