ಮೇಲ್ಜಾತಿ ಹಿಂದುಗಳು ಭಾರತದಲ್ಲಿ ಶ್ರೀಮಂತರು; ಒಟ್ಟು ಆಸ್ತಿಯ 41% ರಷ್ಟು ಭಾಗ ಅವರ ಕೈಯಲ್ಲೇ! -ಅಧ್ಯಯನ ವರದಿ

0
1352

ಒಬ್ಬ ವ್ಯಕ್ತಿಗೆ ಲಭ್ಯವಿರುವ ಶೈಕ್ಷಣಿಕ ಮತ್ತು ವೃತ್ತಿಪರ ಆಯ್ಕೆಗಳಲ್ಲಿ ಜಾತಿ ಗಮನಾರ್ಹ ಪಾತ್ರವನ್ನು ವಹಿಸುತ್ತಿದೆ ಮತ್ತು ಪರಿಣಾಮವು ಆದಾಯ ಮತ್ತು ಸ್ವತ್ತುಗಳಲ್ಲಿ ಕಾಣಸಿಗುತ್ತದೆ ಎಂದು ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯ (ಎಸ್ ಪಿ ಪಿ ಯು ), ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆ ಏನ್ ಯು ) ಮತ್ತು ಭಾರತೀಯ ದಲಿತ ಅಧ್ಯಯನಗಳ ಸಂಸ್ಥೆ ಜಂಟಿಯಾಗಿ ನಡೆಸಿದ ಎರಡು ವರ್ಷಗಳ ಅವಧಿಯ ಅಧ್ಯಯನವು ಬಹಿರಂಗಪಡಿಸುತ್ತದೆ.

ದೇಶದ ಒಟ್ಟು ಮೇಲ್ಜಾತಿ ಹಿಂದುಗಳ ಪೈಕಿ ಕೇವಲ 22.3 ಶೇಕಡಾ ಮಂದಿ ದೇಶದ ಒಟ್ಟು ಸಂಪತ್ತಿನ 41 ಶೇಕಡವನ್ನು ಹೊಂದಿದ್ದಾರೆ ಮತ್ತು ಶ್ರೀಮಂತ ಗುಂಪಿಗೊಳಪಡುತ್ತಾರೆ. ಹಾಗೆಯೇ 7.8 ಶೇ ಹಿಂದೂ ಪರಿಶಿಷ್ಟ ಪಂಗಡಗಳು ಕೇವಲ 3.7 ಶೇಕಡಾ ಸಂಪತ್ತನ್ನು ಹೊಂದಿದ್ದಾರೆ ಅಥವಾ ದೇಶದ ಸ್ವತ್ತುಗಳಲ್ಲಿ ಕಡಿಮೆ ಸಂಪತ್ತಿನ ಪಾಲನ್ನು ಹೊಂದಿರುವರೆಂದು ಈ ಅಧ್ಯಯನವು ತಿಳಿಸುತ್ತದೆ. ಉನ್ನತಿಯಲ್ಲಿರುವ 1 ಶೇಕಡ (ಸಂಪತ್ತಿನ ವಿಷಯದಲ್ಲಿ) ಜನರು ದೇಶದ ಒಟ್ಟು ಆಸ್ತಿಯ ಶೇಕಡಾ 25 ರಷ್ಟನ್ನು ಹೊಂದಿದ್ದಾರೆ. ಶೇ. 46 ರಷ್ಟು ಸಂಪತ್ತು ಅಗ್ರ ಶ್ರೇಣಿಯಲ್ಲಿರುವ 5 ಶೇಕಡಾ ಜನರ ಒಡೆತನದಲ್ಲಿದೆ. ಇದಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿ, ತಳಮಟ್ಟದಲ್ಲಿರುವ 40 ಶೇಕಡಾ ಕುಟುಂಬಗಳು ದೇಶದ ಒಟ್ಟು ಆಸ್ತಿಯಲ್ಲಿ ಶೇ. 3.4 ರಷ್ಟು ಮಾತ್ರ ಹೊಂದಿದೆ. 2013 ರಲ್ಲಿ ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ ನಡೆಸಿದ ಅಖಿಲ ಭಾರತ ಸಾಲ ಮತ್ತು ಹೂಡಿಕೆ ಸಮೀಕ್ಷೆಯ ಪ್ರಕಾರ, ಇದು ಸಾಮಾಜಿಕ-ಧಾರ್ಮಿಕ ಆಧಾರದ ಮೇಲೆ ಸ್ವತ್ತುಗಳ ವಿತರಣೆಗೆ ಸಂಬಂಧಿಸಿ ಆಳವಾದ ನೋಟ, ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಜಾತಿಗಳ ಆಚೆಗೆ ಆರ್ಥಿಕವಾಗಿ ದುರ್ಬಲ ವಿಭಾಗಕ್ಕೆ 10% ಮೀಸಲಾತಿಯನ್ನು ಕೇಂದ್ರ ಸರ್ಕಾರವು ಘೋಷಿಸಿದ ಸಮಯದಲ್ಲಿ, “ಭಾರತದಲ್ಲಿ ಸ್ವತ್ತುಗಳ ಮಾಲೀಕತ್ವ ಮತ್ತು ಅಸಮಾನತೆ: ಸಾಮಾಜಿಕ-ಧಾರ್ಮಿಕ ವಿಶ್ಲೇಷಣೆ” ಎಂಬ ಅಧ್ಯಯನದಲ್ಲಿ ಹೇಳಲಾಗಿದೆ. ಈ ಅಧ್ಯಯನವನ್ನು 2015 ರಿಂದ 2017 ರವರೆಗೆ ನಡೆಸಲಾಯಿತು ಮತ್ತು ಅಧ್ಯಯನದ ಫಲಿತಾಂಶವು ಇತ್ತೀಚೆಗೆ ಬಹಿರಂಗಗೊಂಡವು.

“ಶಿಕ್ಷಣ ಮಟ್ಟವನ್ನು, ವೃತ್ತಿಯ ಸ್ವಭಾವ ಮತ್ತು ಪರಿಣಾಮವಾಗಿ ಬರುವ ಆದಾಯ ಮತ್ತು ಸ್ವತ್ತುಗಳನ್ನು ಈ ದೇಶದಲ್ಲಿ ಒಬ್ಬರು ಹೊಂದುವುದನ್ನು ಈಗಲೂ ಜಾತಿಯೇ ನಿರ್ಧರಿಸುತ್ತದೆ. ಸ್ವತ್ತುಗಳ ಒಡೆತನ, ಇದು ಭೂಮಿ ಅಥವಾ ಕಟ್ಟಡದ ಸ್ವರೂಪದಲ್ಲಿ, ಭಾರತದಲ್ಲಿನ ಯಾವುದೇ ಜಾತಿಗಿಂತ ಹಿಂದು ಮೇಲು ಜಾತಿಗಳಲ್ಲಿ ಹೆಚ್ಚಾಗಿ ಕಂಡುಬಂದಿದೆ” ಎಂದು ಪ್ರಮುಖ ಲೇಖಕ ಮತ್ತು ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ನಿತಿನ್ ತ್ಯಾಗಡೆ ತಿಳಿಸಿದರು.

ಈ ಅಧ್ಯಯನವು ಭಾರತದ 20 ರಾಜ್ಯಗಳ 1,10,800 ಕುಟುಂಬಗಳನ್ನು, ಅದರಲ್ಲಿ 56 ಶೇ.ನಗರ ಪ್ರದೇಶದ ಮತ್ತು ಉಳಿದವು ಗ್ರಾಮೀಣ ಪ್ರದೇಶಗಳ ಕುಟುಂಬಗಳನ್ನು ಒಳಗೊಂಡಿದೆ. ಜನಸಂಖ್ಯೆಯನ್ನು ಅನೇಕ ಗುಂಪುಗಳಾಗಿ ವರ್ಗೀಕರಿಸಲಾಗಿದೆ -ಹಿಂದೂ ಪರಿಶಿಷ್ಟ ವರ್ಗ (ಎಚ್ಎಸ್ಸಿ), ಹಿಂದೂ ಪರಿಶಿಷ್ಟ ಪಂಗಡಗಳು (ಎಚ್ಎಸ್ಟಿ), ಹಿಂದೂ ಪರಿಶಿಷ್ಟ ಜಾತಿ (ಎಚ್ಎಸ್ ಸಿ ಎಸ್ ), ಹಿಂದೂ ಪರಿಶಿಷ್ಟ ಬುಡಕಟ್ಟು (ಎಚ್ಎಸ್ಟಿಎಸ್ ), ಹಿಂದೂಯೇತರ ಪರಿಶಿಷ್ಟ ಜಾತಿಗಳು (ಏನ್ ಎಚ್ ಎಸ್ ಸಿ ಗಳು), ಹಿಂದೂಯೇತರ ಪರಿಶಿಷ್ಟ ಪಂಗಡಗಳು (ಏನ್ ಎಚ್ ಎಸ ಟಿ ),ಹಿಂದು ಇತರ ಹಿಂದುಳಿದ ವರ್ಗಗಳು (ಎಚ್ ಓ ಬಿ ಸಿ ಗಳು), ಹಿಂಧೂ ಮೇಲ್ಜಾತಿಗಳು (ಎಚ್ ಎಚ್ ಸಿ ಎಸ್ ),ಮುಸ್ಲಿಂ ಇತರೆ ಹಿಂದುಳಿದ ವರ್ಗಗಳು (ಎಂ ಓ ಬಿ ಸಿ ಗಳು), ಮುಸ್ಲಿಂ ಮೇಲ್ಜಾತಿಗಳು (ಎಂ ಎಚ್ ಸಿ ಎಸ್ ) ಮತ್ತು ಉಳಿದವರು.

ನಿರ್ದಿಷ್ಟ ಜಾತಿ ಸದಸ್ಯರು ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ಆಧರಿಸಿ ಸಂಶೋಧಕರು ಸಂಪತ್ತಿನ ವಿತರಣೆಯಲ್ಲಿ ಗಮನಾರ್ಹ ವಿಭಜನೆಯನ್ನು ಕಂಡುಕೊಂಡಿದ್ದಾರೆ. ಉದಾಹರಣೆಗೆ, ನಗರ ಪ್ರದೇಶಗಳಲ್ಲಿ 34.9 ಶೇಕಡಾ ಸಂಪತ್ತು ಹಿಂದೂ ಮೇಲ್ಜಾತಿಯವರಲ್ಲಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿನ ಅದೇ ಜಾತಿಯ ಜನರು ಒಟ್ಟು ಸಂಪತ್ತಿನ 16.7 ಶೇಕಡ ಮಾತ್ರ ಹೊಂದಿದ್ದಾರೆ. ಅದೇ ರೀತಿ, ಹಿಂದು ಪರಿಶಿಷ್ಟ ಪಂಗಡಗಳು ಗ್ರಾಮೀಣ ಪ್ರದೇಶಗಳಲ್ಲಿ 10.4 ಶೇಕಡಾ ಸಂಪತ್ತು ಹೊಂದಿ ಶ್ರೀಮಂತರಾಗಿರುತ್ತಾರೆ- ನಗರ ಪ್ರದೇಶದಲ್ಲಿ ಅದೇ ಜಾತಿಯವರೊಂದಿಗೆ ಹೋಲಿಸಿದರೆ, ಶೇಕಡಾ 2.8 ಸಂಪತ್ತನ್ನು ಹೊಂದಿರುತ್ತಾರೆ.

ಈ ಅಸಮಾನತೆಯನ್ನು ವಿವರಿಸುತ್ತಾ, ಅಧ್ಯಯನದ ಸಹ-ಸಂಶೋಧಕ ಮತ್ತು ಜೆಏನ್ ಯುವಿನಲ್ಲಿ ಗೌರವ ಪ್ರಾಧ್ಯಾಪಕರಾಗಿರುವ ಸುಖದೇವ್ ಥೊರಟ್ ಹೇಳುತ್ತಾರೆ, “ಬಹಳ ಚಿಕ್ಕ ಪ್ರಮಾಣದ ಹಿಂದೂ ಎಸ್ಟಿಗಳು ನಗರ ಪ್ರದೇಶಗಳಿಗೆ ಶಿಕ್ಷಣ ಅಥವಾ ಉದ್ಯೋಗಕ್ಕಾಗಿ ವಲಸೆ ಹೋಗುತ್ತಾರೆ. ಇವೆರಡು ಕೆಲವು ಮೀಸಲಾತಿಗಳ ಮೂಲಕ ಗಳಿಸಲ್ಪಡುತ್ತದೆ. ಆದರೂ , ಎಸ್ಟಿ ವಲಸಿಗರಲ್ಲಿ ಹೆಚ್ಚಿನವರು ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ತಳಮಟ್ಟದ ಆದಾಯವನ್ನು ಹೊಂದಿರುತ್ತಾರೆ. ಹಾಗಾಗಿಯೇ ನಗರಗಳಲ್ಲಿನ ಹೆಚ್ಚಿನ ಹಿಂದೂ ಎಸ್ಟಿಗಳು ಸ್ಲಂ-ನಿವಾಸಿಗಳಲ್ಲಿ ಎಣಿಸಲ್ಪಡುತ್ತಾರೆ”.

ಐತಿಹಾಸಿಕವಾಗಿ, ಆಸ್ತಿ ಮತ್ತು ಶಿಕ್ಷಣದ ಹಕ್ಕು ಹಿಂದೂ ಉನ್ನತ ಜಾತಿ ಜನಸಂಖ್ಯೆಗೆ ಮಾತ್ರ ಲಭ್ಯವಿದ್ದು, ಈ ಪ್ರವೃತ್ತಿಯು ಬಹುಮಟ್ಟಿಗೆ ಬದಲಾಗದೆ ಉಳಿದಿದೆ ಎಂದು ಅಧ್ಯಯನವು ಹೇಳುತ್ತದೆ.”ಇಂದಿಗೂ ಸಹ, ಜಾತಿ ಪ್ರಮುಖ ಪಾತ್ರವಹಿಸುತ್ತದೆ ಮತ್ತು ಹಿಂದೂಗಳೊಳಗೆ ಜಾತಿ ಕ್ರಮಾನುಗತ ಕೆಳಕ್ಕಿರುವವರು ಬಡವರೆಂದು ಕಂಡುಬಂದಿದೆ. ಅಸಮಾನತೆ ಮತ್ತು ತಾರತಮ್ಯವನ್ನು ಕೆಳ ಜಾತಿಗಳಿಗೆ ಸೇರಿದ ಜನಸಂಖ್ಯೆ ಈಗಲೂ ಎದುರಿಸುತ್ತಿದೆ. ಆಸ್ತಿಯ ಖರೀದಿಗೆ ಅಥವಾ ಯಾವುದೇ ವ್ಯವಹಾರವನ್ನು ಕೈಗೊಳ್ಳುವಲ್ಲಿ ಇದು ನಿಜವಾಗಿದೆ, ಇವೆರಡೂ ಮೇಲ್ವರ್ಗದ ಜಾತಿಗಳಿಂದ ಆಳಲ್ಪಡುತ್ತವೆ ” ಎಂದು ಥೋರಟ್ ಹೇಳಿದರು.

ಈ ಅಧ್ಯಯನವು ಐದು ರಾಜ್ಯಗಳ ಮೇಲೆ ಬೆಳಕು ಚೆಲ್ಲಿದೆ -ಮಹಾರಾಷ್ಟ್ರ, ಉತ್ತರ ಪ್ರದೇಶ, ಕೇರಳ, ತಮಿಳುನಾಡು ಮತ್ತು ಹರಿಯಾಣ -ದೇಶದ ಒಟ್ಟು ಸಂಪತ್ತಿನ ಶೇ 50 ರಷ್ಟು ಒಡೆತನವನ್ನು ಹೊಂದಿದೆ. ಅಧ್ಯಯನದ ಪ್ರಕಾರ, ಮಹಾರಾಷ್ಟ್ರ (ದೇಶದ ಸಂಪತ್ತಿನ ಪಾಲು ಶೇ 17 ರಷ್ಟು), ಉತ್ತರ ಪ್ರದೇಶ (11.6%) ಮತ್ತು ಕೇರಳ (7.4%) ಹಾಗೆ ಬಡ ರಾಜ್ಯಗಳು ಒಡಿಶಾ (1%), ಜಾರ್ಖಂಡ್ (1%), ಹಿಮಾಚಲ ಪ್ರದೇಶ (1%) ಮತ್ತು ಉತ್ತರಾಖಂಡ್ (0.9%).

ರಾಷ್ಟ್ರೀಯ ಮಾದರಿಯಂತೆಯೇ, ಮಹಾರಾಷ್ಟ್ರದ ಅಗ್ರ ಶ್ರೇಯಾಂಕಿತವಾಗಿದೆ. ಶೇಕಡಾ 10 ರಷ್ಟು ಜನಸಂಖ್ಯೆಯು ರಾಜ್ಯದ ಆಸ್ತಿಯಲ್ಲಿ ಶೇ. 50 ರಷ್ಟು ಸ್ವಾಮ್ಯ ಹೊಂದಿದ್ದು, ತಳಮಟ್ಟದಲ್ಲಿರುವ ಶೇ. 1 ರಷ್ಟು ಜನಸಂಖ್ಯೆ ರಾಜ್ಯದ ಒಟ್ಟು ಸಂಪತ್ತಿನ ಶೇಕಡಾ 1 ರಷ್ಟು ಸ್ವಾಮ್ಯವನ್ನೂ ಹೊಂದಿಲ್ಲ. ಅತ್ಯಧಿಕ ಮೌಲ್ಯದ ಆಸ್ತಿಗಳು ಭೂಮಿ ಮತ್ತು ಕಟ್ಟಡಗಳಾಗಿ ಕೇಂದ್ರೀಕೃತವಾಗಿರುವುದು ಕಂಡುಕೊಳ್ಳಲಾಗಿದೆ. ಮೇಲ್ಜಾತಿ ಹಿಂದುಗಳು ಭಾರತದಲ್ಲಿ ಶ್ರೀಮಂತರು, ಒಟ್ಟು ಆಸ್ತಿಯ 41% ನಷ್ಟು; ಎಸ್ಟಿಎಸ್ 3.7% ನಷ್ಟು ಹೊಂದಿದೆ ಎಂದು ಸಂಪತ್ತಿನ ಹಂಚಿಕೆ ಕುರಿತು ಅಧ್ಯಯನ ಹೇಳುತ್ತದೆ.

ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್
ಕನ್ನಡಕ್ಕೆ: ಆಯಿಷತುಲ್ ಅಫೀಫ