ಭಾರತದ ಯುದ್ಧ ವಿಮಾನ ಹೊಡೆದುರಳಿಸಿದ ಪಾಕಿಸ್ತಾನದ ವಾದವನ್ನು ನಿರಾಕರಿಸಿದ ಭಾರತ

0
1295

ಇಸ್ಲಾಮಾಬಾದ್,ಫೆ. 27: ಪಾಕಿಸ್ತಾನ ಎರಡು ವಿಮಾನಗಳನ್ನು ಹೊಡೆದುರುಳಿಸಿದೆ ಎಂಬ ವಾದವನ್ನು ಭಾರತ ಸರಕಾರ ನಿರಾಕರಿಸಿದೆ. ಪಾಕಿಸ್ತಾನದ ನಿಯಂತ್ರಣ ರೇಖೆ ದಾಟಿ ಬಂದ ಎರಡು ವಿಮಾನಗಳನ್ನು ಹೊಡೆದುರುಳಿಸಲಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಿಮಾನ ಕೆಳಗುರುಳಿತ್ತು. ಒಬ್ಬ ಭಾರತದ ಪೈಲಟನ್ನು ಬಂಧಿಸಲಾಗಿದೆ ಎಂದು ಪಾಕ್ ಮೇಜರ್ ಜನರಲ್ ಆಸಿಫ್ ಹೇಳಿದ್ದರು.

ನಿಯಂತ್ರಣ ರೇಖೆ ದಾಟಿ ಬಂದ ವಿಮಾನದ ಮೇಲೆ ದಾಳಿ ಮಾಡಲಾಗಿದೆ ಮತ್ತು ಪಾಕಿಸ್ತಾನದ ಗಡಿಯೊಳಗೆ ನಿಂತು ದಾಳಿ ನಡೆಸಿದ್ದೇವೆ ಎಂದು ಸಚಿವ ಶಾ ಮಹಮೂದ್ ಕುರೈಶಿ ಹೇಳಿದ್ದರು.

ಸ್ವರಕ್ಷಣೆಯ ಹಕ್ಕನ್ನು ಸಾಬೀತುಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ. ದಾಳಿಯನ್ನು ಹೆಚ್ಚಿಸಲು ಬಯಸುವುದಿಲ್ಲ. ಆದ್ದರಿಂದ ಜನರ ನಾಶವಾಗದಿರಲು ಸೈನಿಕ ಕ್ಷೇತ್ರದಿಂದ ಜನರನ್ನು ತೆರವು ಗೊಳಿಸಲಾಗಿದೆ. ಆದರೆ ಇದೇ ರೀತಿ ನಿರ್ಬಂಧಿಸಿದರೆ ವ್ಯಾಪಕ ದಾಳಿ ನಡೆಸಲು ಸರ್ವಸಜ್ಜಿತರಾಗಿದ್ದೇವೆ ಎಂದು ಅವರು ಹೇಳಿದರು.

ಇದೇವೇಳೆ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂಬ ವಾದವನ್ನು ಭಾರತ ನಿರಾಕರಿಸಿದೆ. ಪೈಲಟ್‍ನನ್ನು ಬಂಧಿಸಲಾಗಿದೆ ಎಂಬ ವಾದವನ್ನೂ ಭಾರತ ನಿರಾಕರಿಸಿದೆ. ಇದೇವೇಳೆ, ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಅಜಿತ್ ಡೊವಲ್, ರಕ್ಷಣೆ, ವಿದೇಶ ಕಾರ್ಯದರ್ಶಿಗಳೊಡನೆ ಸಮಾಲೋಚನೆ ನಡೆಸಿದ್ದಾರೆ.