ದಿಲ್ಲಿಯಲ್ಲಿ ಆಮ್ ಆದ್ಮಿ ಪಾರ್ಟಿ-ಕಾಂಗ್ರೆಸ್ ಸಖ್ಯಕ್ಕೆ ರಾಹುಲ್ ಸಹಕರಿಸಲಿಲ್ಲ- ಕೇಜ್ರಿವಾಲ್

0
1691

ಹೊಸದಿಲ್ಲಿ, ಎ.1: ರಾಜಧಾನಿ ದಿಲ್ಲಿಯಲ್ಲಿ ಬಿಜೆಪಿಯನ್ನು ಎದುರಿಸಲು ಆಮ್ ಆದ್ಮಿಪಾರ್ಟಿ ಮತ್ತು ಕಾಂಗ್ರೆಸ್ ನಡುವಿನ ಸಖ್ಯಮಾಡಿಕೊಳ್ಳಲಿದೆ ಎನ್ನುವÀ ವದಂತಿಗಳನ್ನೆಲ್ಲ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಳ್ಳಿಹಾಕಿದ್ದಾರೆ. ಸಖ್ಯಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಸಿರು ಸಮ್ಮತಿಸಿಲ್ಲ ಎಂದು ಕೇಜ್ರಿವಾಲ್ ಸ್ಪಷ್ಟಪಡಿಸಿದರು.

ಕಾಂಗ್ರೆಸ್‍ನೊಂದಿಗೆ ಮೈತ್ರಿಗೆ ಆಮ್‍ಆದ್ಮಿಪಾರ್ಟಿ ಈವರೆಗೆ ಸಂಪರ್ಕಿಸಿಲ್ಲ ಎಂದು ದಿಲ್ಲಿ ಉಸ್ತುವಾರಿಯಿರುವ ಕಾಂಗ್ರೆಸ್‍ನ ಹಿರಿಯ ನಾಯಕಿ ಶೀಲಾ ದೀಕ್ಷಿತ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅರವಿಂದ್ ಕೇಜ್ರಿವಾಲ್ ರಾಹುಲ್ ಗಾಂಧಿಯನ್ನು ಭೇಟಿಯಾಗಿ ಸಖ್ಯದ ಕುರಿತು ಚರ್ಚೆ ನಡೆಸಲಾಗಿತ್ತು. ಅವರು ಸಖ್ಯಕ್ಕೆ ಸಮ್ಮತಿಸಲಿಲ್ಲ ಎಂದು ತಿಳಿಸಿದರು. ಕಾಂಗ್ರೆಸ್ ಪಾರ್ಟಿಯಲ್ಲಿ ರಾಹುಲ್‍ಗಾಂಧಿಗಿಂತ ಹೆಚ್ಚು ಪ್ರಭಾವಿ ವ್ಯಕ್ತಿ ಶೀಲಾ ದೀಕ್ಷಿತ್ ಅಲ್ಲ ಎಂದು ಕೇಜ್ರಿವಾಲ್ ಹೇಳಿದರು.

ಪಂಜಾಬ್, ಹರಿಯಾಣ ದಿಲ್ಲಿಗಳಲ್ಲಿ ಕಾಂಗ್ರೆಸ್‍ನೊಂದಿಗೆ ಆಮ್‍ಆದ್ಮಿಪಾರ್ಟಿ ಸಖ್ಯ ಮಾಡಿಕೊಳ್ಳಲು ಸಿದ್ಧವಿದೆ ಎಂದು ತಿಳಿಸಿತ್ತು. ದಿಲ್ಲಿಯಲ್ಲಿ ಐದು ಸೀಟಗಳನ್ನು ಆಮ್ ಆದ್ಮಿ ಪಾರ್ಟಿ ಕೇಳಿತ್ತು.