ಉತ್ತರಪ್ರದೇಶ: ಅಭಯ ಕೇಂದ್ರದಲ್ಲಿ 57 ಬಾಲಕಿಯರಿಗೆ ಕೊರೋನ; ಇಬ್ಬರು ಅಪ್ರಾಪ್ತೆಯರ ಸಹಿತ ಐವರು ಗರ್ಭಿಣಿಯರು!

0
580

ಸನ್ಮಾರ್ಗ ವಾರ್ತೆ

ಲಕ್ನೊ,ಜೂ.22: ಉತ್ತರಪ್ರದೇಶದ ಅಭಯ ಕೇಂದ್ರದಲ್ಲಿ 57 ಹೆಣ್ಣು ಮಕ್ಕಳಿಗೆ ಕೊರೊನ ದೃಢಪಟ್ಟಿದೆ. ಇವರಲ್ಲಿ ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕಿಯರ ಸಹಿತ ಐದು ಮಂದಿ ಗರ್ಭಿಣಿಯರಾಗಿದ್ದಾರೆ. ಒಬ್ಬಳಿಗೆ ಎಚ್‍ಐವಿ ಇದೆ. ವಿವಿಧ ಆಸ್ಪತ್ರೆಗೆ ಇವರನ್ನು ಚಿಕಿತ್ಸೆ ಸೇರಿಸಲಾಗಿದೆ.

ಐವರು ಗರ್ಭಿಣಿಯರು ಆಗ್ರಾ, ಎಟಾ, ಕನೌಜ್, ಫಿರೊಝಬಾದ್, ಕಾನ್ಪುರಗಳಿಂದ ಶಿಶುಕಲ್ಯಾಣ ಸಮಿತಿ ಅಭಯಕೇಂದ್ರಕ್ಕೆ ತಂದು ಇರಿಸಿದವರಾಗಿದ್ದಾರೆ ಎಂದು ಕಾನ್‍ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಬ್ರಹ್ಮದೇವ್ ತಿವಾರಿ ಹೇಳಿದರು. ಅಲ್ಲಿಗೆ ಹೋಗುವ ಮೊದಲೇ ಅವರು ಗರ್ಭಿಣಿಯರಾಗಿದ್ದರು. ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯ ನಿರೋಧ ಕಾನೂನು ಪ್ರಕಾರ(ಪೊಕ್ಸೊ) ಮೊಕದ್ದಮೆ ನಡೆಯುತ್ತಿದೆ. ಕೊರೋನ ಇಲ್ಲದ ಇಬ್ಬರು ಹೆಣ್ಣುಮಕ್ಕಳು ಗರ್ಭಿಣಿಯರಾಗಿದ್ದಾರೆ ಎಂದು ತಿವಾರಿ ತಿಳಿಸಿದ್ದಾರೆ.

ಇದೇ ಅಭಯ ಕೇಂದ್ರದಲ್ಲಿ ಮಹಿಳೆಯೊಬ್ಬರಿಗೆ ಒಂದು ವಾರದ ಮೊದಲ ಕೊರೋನ ದೃಢಪಟ್ಟಿತ್ತು. ನಂತರ ನಡೆಸಲಾದ ಪರೀಕ್ಷೆಯಲ್ಲಿ 33 ಮಂದಿಗೆ ಕೊರೋನ ಇರುವುದು ಪತ್ತೆಯಾಗಿದೆ. ಮುಂದಿನ ದಿವಸಗಳಲ್ಲಿ ಇನ್ನೂ 28 ಹೆಣ್ಣು ಮಕ್ಕಳು ಕೊರೋನ ಪಾಸಿಟಿವ್ ಆಗಿ ಕಂಡು ಬಂದರು.

ಕಾನ್‍ಪುರ ಕಮಿಷನರ್ ಸುಧೀರ್ ಮಹದೇವ್ ಕೂಡ ಅಭಯ ಕೇಂದ್ರಕ್ಕೆ ಹೆಣ್ಣು ಮಕ್ಕಳು ಬರುವ ಮೊದಲೇ ಗರ್ಭಿಣಿಯರಾಗಿದ್ದರೆಂದು ಹೇಳಿದ್ದಾರೆ. ಯಾವುದೇ ಅಧಿಕಾರಿಗಳು, ನೌಕರರಿಂದ ಈ ತಪ್ಪು ಸಂಭವಿಸಿದೆಯೇ ಎಂದು ತನಿಖೆ ನಡೆಸುವುದಾಗಿ ಕೂಡ ಅವರು ಹೇಳಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ರಾಜ್ಯ ಸರಕಾರವನ್ನು ಕಟುವಾಗಿ ಟೀಕಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.