ಮುಂಬೈ ಕೊಳಗೇರಿಗಳಲ್ಲಿ ಶೇ.57 ರಷ್ಟು ಮಂದಿಗೆ ಕೊರೋನ ಬಂದು ಹೋಯಿತು- ಕಾರಣವೇನು ಗೊತ್ತೇ?

0
671

ಸನ್ಮಾರ್ಗ ವಾರ್ತೆ

ಮುಂಬೈ,ಆ.13: ಮಹಾರಾಷ್ಟ್ರದಲ್ಲಿ ಕೊರೋನ ಅತ್ಯಂತ ದಾಂಧಲೆಗಿಟ್ಟ ಮುಂಬೈನ ಝೊಪಡಾಪಟ್ಟಿ ನಿವಾಸಿಗಳಲ್ಲಿ ಶೇ.57ರಷ್ಟು ಮಂದಿಗೆ ಕೊರೋನ ಬಂದು ಹೋಗಿರುವುದಾಗಿ ಅಧ್ಯಯನವೊಂದರಲ್ಲಿ ಬಹಿರಂಗವಾಗಿದೆ.

ಬ್ರಿಹಾನ್ ಮುಂಬಯಿ ಮುನ್ಸಿಪಲ್ ಕಾರ್ಪೊರೇಷನ್ ಈ ಕುರಿತು ಝಿರೊಲಜಿಕಲ್ ಸಮೀಕ್ಷೆಯಲ್ಲಿ ಬಹುಭಾಗ ಜನರಿಗೆ ಕೊರೋನ ಬಂದಿದ್ದನ್ನು ಪತ್ತೆ ಹಚ್ಚಿದೆ. ಝೊಪಡಾಪಟ್ಟಿ ಜನರಲ್ಲಿ ವೈರಸ್‍ನ್ನು ಹಿಮ್ಮೆಟ್ಟಿಸುವ ಹಾರ್ಡ್ ಇಮ್ಯುನಿಟಿ ಇತ್ತು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಆದ್ದರಿಂದ ಎರಡನೆ ಘಟ್ಟದ ಝೀರೊ ಪ್ರಿವೆಲೆನ್ಸ್ ಸರ್ವೆಗೆ ಬ್ರಿಹನ್ ಮುಂಬೈ ಮುನ್ಸಿಪಾಲಿಟಿ ಸಜ್ಜಾಗಿದೆ.

ಜುಲೈಯಲ್ಲಿ ಮೊದಲ ಸಮೀಕ್ಷೆ ನಡೆದಿತ್ತು. ಕೊಳಚೆಗೇರಿಯಲ್ಲಿನ ಜನರಿಂದ ಸ್ಯಾಂಪಲ್ ಸಂಗ್ರಹಿಸಿ ಮಾಡಿದ ಸರ್ವೇಯಲ್ಲಿ ಶೇ. 57ರಷ್ಟು ಮಂದಿಗೆ ಕೊರೋನ ಬಂದು ಹೋಗಿದ್ದು ಗೊತ್ತಾಗಿದೆ. ಇವರಲ್ಲಿ ಕೊರೋನ ವಿರುದ್ಧ ಆಂಟಿಬಾಡಿಕ್‌ಗಳು ಕಂಡು ಬಂದಿತ್ತು. ರೋಗ ಬಂದವರಲ್ಲಿ ಮಾತ್ರ ಈ ಆಂಟಿಬಾಡಿಕ್‌ಗಳು ವಿಕಸಿಸುತ್ತದೆ.

ಎರಡನೆ ಸಮೀಕ್ಷೆಯಲ್ಲಿ ಮೊದಲ ಸಮೀಕ್ಷೆಯ ಭಾಗಿಯಾದ ಅದೇ ವ್ಯಕ್ತಿಗಳ ಸ್ಯಾಂಪಲ್‍ಗಳನ್ನು ಪರೀಕ್ಷಿಸುವುದು. ಇವರಲ್ಲಿ ಆಂಟಿ ಬಾಡಿಕ್‍ಗಳು ಕಡಿಮೆಯಾಯಿತೋ ಅಥವಾ ಹೆಚ್ಚಿತೊ ಎಂದು ತಜ್ಞರು ಪರೀಕ್ಷಿಸಲಿರುವರು.

ಕೊರೋನದಂತಹ ಅಂಟು ರೋಗವನ್ನು ವ್ಯಾಕ್ಸಿನ್ ಕಂಡುಕೊಂಡರೂ ಜನರಲ್ಲಿ ದೊಡ್ಡ ವಿಭಾಗಕ್ಕೆ ಪ್ರತಿರೋಧಕ ಶಕ್ತಿ ಇದ್ದರೆ ಮಾತ್ರ ರೋಗ ವ್ಯಾಪಿಸುವುದನ್ನು ತಡೆಯಲು ಸಾಧ್ಯ ಎಂದು ವೈದ್ಯರು ಹೇಳುತ್ತಾರೆ.

ದೇಶದಲ್ಲಿ ವರದಿಯಾದ ಒಟ್ಟು ಕೊರೋನ ಪ್ರಕರಣಗಳಲ್ಲಿ ಶೇ. 7 ಮುಂಬೈಯದ್ದಾಗಿದೆ. ಕಳೆದ 24 ಗಂಟೆಗಳಲ್ಲಿ 1,132 ಹೊಸ ಕೊರೋನ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಮುಂಬೈಯ ಕೊರooನ ಪೀಡಿತರ ಸಂಖ್ಯೆ 126,356ಕ್ಕೇರಿಕೆಯಾಗಿದೆ. ಕಳೆದ ದಿವಸ 50 ಕೊರೋನ ಸಾವುಗಳು ಸಂಭವಿಸಿರುವುದಾಗಿವರದಿಯಾಗಿದೆ. ಒಟ್ಟು ಇಲ್ಲಿ 6943 ಮಂದಿ ಮೃತಪಟ್ಟಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.