ಸನ್ಮಾರ್ಗ ವಾರ್ತೆ
ಗುವಾಹಟಿ,ಆ.13: ಅಸ್ಸಾಂನಲ್ಲಿ ಮೃತಪಟ್ಟವರ ಸಂಖ್ಯೆ 110ಕ್ಕೆ ಏರಿಕೆಯಾಗಿದೆ. 56 ಲಕ್ಷ ಮಂದಿ ಪ್ರಳಯ ಬಾಧಿತರಾಗಿದ್ದಾರೆ.
30 ಜಿಲ್ಲೆಗಳಲ್ಲಿ 56,89,584 ಮಂದಿಗೆ ನೆರೆ ಸಂತ್ರಸ್ತರೆಂದು ರಾಜ್ಯದ ಪ್ರಕೃತಿ ವಿಕೋಪ ತಡೆ ಸಮಿತಿ ತಿಳಿಸಿತು. ದೆಮಾಜಿ, ಬಕ್ಸ, ಮೊರಿಗೊನ್ ಜಿಲ್ಲೆಯ ಬಹುಭಾಗ ಪ್ರದೇಶಗಳು ನೀರಿನಲ್ಲಿ ಮುಳುಗಿದೆ. ಈ ಜಿಲ್ಲೆಯಲ್ಲಿ 7009 ಹೆಕ್ಟರ್ ಕೃಷಿಭೂಮಿ ನಾಶವಾಗಿದೆ.
ಈ ವರ್ಷ ಇಲ್ಲಿ ಪ್ರಕೃತಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 136 ಆಗಿದೆ. 110 ಮಂದಿ ಜಲಪ್ರಳಯಕ್ಕೂ 26 ಮಂದಿ ಗುಡ್ಡ ಜರಿತಕ್ಕೂ ತುತ್ತಾದರು. ಹಲವು ಜಿಲ್ಲೆಗಳಲ್ಲಿ ರಸ್ತೆಗಳು ಮತ್ತು ಸೇತುವೆಗಳು ಸಹಿತ ಸಂಪೂರ್ಣ ನಾಶವಾಗಿ ಪೂರ್ಣ ದಿಗ್ಬಂಧನ ಅವಸ್ಥೆಯಲ್ಲಿವೆ ಎಂದು ವರದಿಯು ತಿಳಿಸಿದೆ.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












