ಬ್ಯಾಕ್ಟೀರಿಯ ಪತ್ತೆ: ಭಾರತ, ಬ್ರಿಟಿಷ್, ಅಮೆರಿಕದ ಆಹಾರೋತ್ಪನ್ನಗಳಿಗೆ ನಿಷೇಧ ಹೇರಿದ ಕುವೈಟ್ ಸರಕಾರ!

0
1578

ಕುವೈಟ್‍ಸಿಟಿ,ಎ.10: ಭಾರತ, ಬ್ರಿಟನ್, ಅಮೆರಿಕಗಳ ಆಹಾರೋತ್ಪನ್ನಗಳಿಗೆ ಕುವೈಟ್ ಸರಕಾರ ನಿಷೇಧ ಹೇರಿದೆ. ಕುವೈಟ್ ಆಹಾರ ಸುರಕ್ಷಾ ಉನ್ನತ ವಿಭಾಗ ಮುಖ್ಯಕಾರ್ಯದರ್ಶಿ ಆದಿಲ್ ಅಲ್ ಸುವೈತ್ ಹೇಳಿಕೆ ನೀಡಿ ಈ ವಿಷಯವನ್ನು ತಿಳಿಸಿದರು. ಎಲುಬಿಲ್ಲದ ದನದ ಮಾಂಸ ಆಮದು ಮಾಡಿಕೊಳ್ಳುತ್ತಿದ್ದ ಎಎಲ್‍ಎಮ್‍ನ ಉತ್ಪನ್ನಗಳನ್ನು ಭಾರತದಿಂದ ನಿಷೇಧಿಸಲಾಗಿದೆ. ಮಾಂಸದಲ್ಲಿ ಬ್ಯಾಕ್ಟೀರಿಯಗಳು ಕಂಡು ಬಂದದ್ದರಿಂದ ನಿಷೇಧ ಹೇರಿದೆ.ಜಯ್ ಆಶಾಪುರಿಯ ಕೊತ್ತಂಬರಿ ಹುಡಿ, ಫಾಟಿನ್ ಕಂಪೆನಿಯ ಕಾಳು ಮೆಣಸು ಹುಡಿ, ಹಳದಿ ಹುಡಿ ಭಾರತದಿಂದ ನಿಷೇಧಿಸಲಾದ ಆಹಾರೋತ್ಪನ್ನಗಳು.