ಸೌದಿಯಲ್ಲಿ ಮತ್ತೆ ಕೊರೊನ್ ವೈರಸ್ ಭೀತಿ: 1 ಸಾವು; 24 ಮಂದಿಯಲ್ಲಿ ವೈರಸ್ ಪತ್ತೆ!

0
1432

ಜಿದ್ದಾ: ಸೌದಿಯಲ್ಲಿ ಪುನಃ ಕೊರೊನ ವೈರಸ್ ಬೆದರಿಕೆ ಸೃಷ್ಟಿಸಿದ್ದು ಒಂದು ವಾರದಲ್ಲಿ ಓರ್ವರು ಮೃತಪಟ್ಟಿದ್ದಾರೆ. 24 ಮಂದಿಗೆ ರೋಗ ತಗಲಿದ್ದು ದೃಢವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಒಂಟೆಗಳಿಂದ ಈಗ ರೋಗ ಹರಡುತ್ತಿದ್ದು ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಸಚಿವಾಲಯ ತಿಳಿಸಿದೆ.

2012ರ ನಂತರ ಕೊರೊನ ವೈರಸ್ ಹರಡಲು ಆರಂಭವಾಗಿದೆ. ಲೋಕ ಆರೋಗ್ಯ ಸಂಘಟನೆಯ ಲೆಕ್ಕ ಪ್ರಕಾರ ಕಳೆದ ವರ್ಷ ನವೆಂಬರ್‍ವರೆಗೆ 27 ದೇಶಗಳಲ್ಲಿ 2274 ಮಂದಿಯಲ್ಲಿ ರೋಗ ಪತ್ತೆಯಾಗಿದೆ. 806 ಮಂದಿ ಸಾವಿಗೀಡಾಗಿದ್ದಾರೆ. ಮೃತರಲ್ಲಿ ಶೇ. 80ರಷ್ಟು ಮಂದಿ ಸೌದಿ ಅರೇಬಿಯಾದ ನಿವಾಸಿಗಳು. ಸೌದಿ ಆರೋಗ್ಯ ಸಚಿವಾಲಯದ ಲೆಕ್ಕಪ್ರಕಾರ ಕಳೆದ ಆರು ವರ್ಷದಲ್ಲಿ 773 ಮಂದಿ ದೇಶದಲ್ಲಿ ಕೊರೊನ್ ಬಾಧೆಯಲ್ಲಿ ಮೃತಪಟ್ಟಿದ್ದಾರೆ. ಕಳೆದ ವಾರ ಪುನಃ ಸೌದಿ ಅರೇಬಿಯಲದಲ್ಲಿ ರೋಗ ಹಲವು ಮಂದಿಗೆ ಕಾಣಿಸಿಕೊಂಡಿದೆ.

ರೋಗ ಬಾಧಿಸಿದವರಲ್ಲಿ ಶೇ. 65ರಷ್ಟು ಮಂದಿ ರಿಯಾದ್ ಪ್ರಾಂತ್ಯದ ವಾದಿ ಅಲ್‍ದವಾಸಿರ್ ನಿವಾಸಿಗಳು. ಬುರೈದ, ಖಮೀಸ್ ಮುಸೈತ್ ಮೊದಲ ಸ್ಥಳಗಳಲ್ಲಿ ಒಂದೇ ಪ್ರಕರಣ ವರದಿಯಾಗಿದೆ. ಒಂಟೆಗಳು ಕೊರೊನ ವೈರಸ್‍ಗಳ ಪ್ರಭಾವ ಕೇಂದ್ರವಾಗಿದೆ ಎಂಬುದನ್ನು ಪತ್ತೆಹಚ್ಚಲಾಗಿದ್ದು, ರೋಗ ಹರಡದಿರಲು ಸೌದಿ ಆರೋಗ್ಯ ಸಚಿವಾಲಯ ಮಾರ್ಗಸೂಚಿಗಳನ್ನು ನೀಡಿದೆ. ಒಂಟೆಗಳ ಅವುಗಳ ಪರಿಸರದಲ್ಲಿ ನೇರವಾಗಿ ಅಥವಾ ಅಲ್ಲದೆಯು ಸಂಪರ್ಕದಿಂದ ದೂರವಿರಬೇಕು. ಒಂಟೆಯ ಉತ್ಪನ್ನಗಳು ಮತ್ತು ಅದರ ಹಾಲನ್ನು ಬಿಸಿ ಮಾಡದೆ ಬಳಸಬಾರದು. ಕೊರೊನೊ ವೈರಸ್ ಬಾಧಿಸಿದ ರೋಗಿಗಳೊಂದಿಗೆ ಸಹವಾಸದಲ್ಲಿ ಎಚ್ಚರವಹಿಸಬೇಕೆಂದು ಆರೋಗ್ಯ ಸಚಿವಾಲಯ ತಿಳಿಸಿದೆ.