ಪೂಲ್ವಾಮ ಭಯೋತ್ಪಾದನಾ ದಾಳಿ: ಫೆ.18ಕ್ಕೆ ವ್ಯಾಪಾರಿಗಳಿಂದ ಭಾರತ ಬಂದ್

0
2089

ಹೊಸದಿಲ್ಲಿ: ಪುಲ್ವಾಮ ಭಯೋತ್ಪಾದನಾ ದಾಳಿಯ ವೀರ ಮೃತ್ಯುಗೀಡಾಗಿರುವ ಯೋಧರ ಶ್ರದ್ಧಾಂಜಲಿಯ ನಿಮಿತ್ತ ಅಖಿಲ ಭಾರತೀಯ ವ್ಯಾಪಾರ ಪರಿಷತ್ ಫೆ.18ಕ್ಕೆ ದೇಶವ್ಯಾಪಿ ಬಂದ್‍ಗೆ ಕರೆನೀಡಿದೆ. ಗುರುವಾರ ಪುಲ್ವಾಮದಲ್ಲಿ ಸಿಆರ್‌ಪಿಎಫ್ ವಾಹನ ವ್ಯೂಹದ ಮೇಲೆ ಭಯೋತ್ಪಾದನಾ ದಾಳಿ ನಡೆದಿತ್ತು. 44 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಘಟನೆಯ ನಂತರ ದೇಶದಲ್ಲಿ ಶುಕ್ರವಾರ ಹಲವು ಕಡೆಗಳಲ್ಲಿ ಪಾಕಿಸ್ತಾನ ವಿರೋಧಿ ಪ್ರತಿಭಟನೆಗಳು ನಡೆದಿವೆ.

ಈಗಾಲೇ ದೇಶಾದ್ಯಂತ ಎಲ್ಲ ಸಮುದಾಯದ ಜನರು ವೀರಮೃತ್ಯುಗೀಡಾದ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ದೇಶಾದ್ಯಂತ ಪಾಕಿಸ್ತಾನ ಮುರ್ದಾಬಾದ್ ಘೋಷಣೆ ಅನುರಣಿಸಿದೆ. ಪೂಲ್ವಾಮದಲ್ಲಿ ಯೋಧರ ಹುತಾತ್ಮೆಗಾಗಿ ಪಾಕಿಸ್ತಾನದ ವಿರುದ್ಧ ಆಕ್ರೋಶ ಮಡುಗಟ್ಟಿದೆ. ಹಲವು ಸಂಘಟನೆಗಳು ಈ ಹೇಡಿತನದ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ. ನಾವು ಈ ದುಃಖದ ಸಮಯದಲ್ಲಿ ವೀರಮೃತ್ಯುವನ್ನಪ್ಪಿದ ಯೋಧರ ಕುಟುಂಬದ ಜೊತೆಗಿದ್ದೇವೆ. ನಾವು ಸರಕಾರ ಮತ್ತು ಸೇನೆ ಜೊತೆ ಇದ್ದೇವೆ. ಸರಕಾರ ಪಾಕಿಸ್ತಾನ ವಿರುದ್ಧ ಯಾವುದೇ ಕ್ರಮ ಜರಗಿಸಿದರೂ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ. ಬೆಳಗ್ಗೆ ಕೇಂದ್ರೀಯ ಸುರಕ್ಷಾ ಸಮಿತಿಯ ಬೈಠಕ್ ನಡೆದಿದೆ. ಇದರಲ್ಲಿ ಪಾಕಿಸ್ತಾನದ ಮೋಸ್ಟ್ ಫೆವರ್ ನೇಶನ್ ದರ್ಜೆಯನ್ನು ಅಧಿಕೃತವಾಗಿ ತೆರವುಗೊಳಿಸಲಾಯಿತು. ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮದ ಹಲವು ನಿರ್ಧಾರಗಳನ್ನು ತಳೆದಿದೆ.