ಅಖ್ಲಾಕ್‍ರ ಕುಟುಂಬಕ್ಕೆ ವೋಟಿಲ್ಲ

0
896

ಲಕ್ನೊ,ಎ.13: ಜನರ ಗುಂಪು ದಾಳಿಯಿಂದ ಕೊಲ್ಲಲ್ಪಟ್ಟಿದ್ದ ಮುಹಮ್ಮದ್ ಅಖ್ಲಾಕ್‍ರ ಕುಟುಂಬವನ್ನು ಮತನದಾರ ಪಟ್ಟಿಯಿಂದ ಹೊರಗಿಡಲಾಗಿದೆ. ಬೀಫ್ ಇರಿಸಿಕೊಂಡಿದ್ದಾರೆ ಎಂದುಆರೋಪಿಸಿ 2015ರಲ್ಲಿ ಗ್ರೇಟರ್ ನೊಯಿಡದ ಗ್ರಾಮವೊಂದರಲ್ಲಿಮುಹಮ್ಮದ್ ಅಖ್ಲಾಕ್‍ರನ್ನು ಸಂಘಪರಿವಾರದ ಕಾರ್ಯಕರ್ತರು ಕೊಲೆ ಮಾಡಿದ್ದರು. ಗುರುವಾರ ಮೊದಲ ಹಂತದ ಚುನಾವಣೆ ನಡೆದ ಗೌತಂ ಬುದ್ಧ ನಗರದ ಮತದಾರ ಪಟ್ಟಿಯಿಂದ ಅಖ್ಲಾಕ್‍ರ ಕುಟುಂಬದ ಹೆಸರನ್ನು ತೆಗೆದು ಹಾಕಲಾಗಿದೆ.

ಕೆಲವು ದಿವಸಗಳಿಂದ ಕುಟುಂಬ ಗೌತಂ ಬುದ್ಧ ನಗರದಲ್ಲಿ ವಾಸವಿಲ್ಲ ಎಂದು ಬಿಎಲ್‍ಒ ಸ್ಪಷ್ಟೀಕರಣ ನೀಡಿದ್ದಾರೆ. ಗ್ರಾಮಸ್ಥರು ಗುರುವಾರ ಮತದಾನ ಮಾಡಿದಾಗ ಅಖ್ಲಾಕ್‍ರ ಕುಟುಂಬ ಮತದಾನ ಮಾಡಲಾಗದೆ ಮನೆಯಲ್ಲಿಯೇ ಉಳಿಯ ಬೇಕಾಯಿತು. 2015 ಸೆಪ್ಟಂಬರ್28ರಂದು ಅಖ್ಲಾಕ್‍ರನ್ನು ಅವರ ಮನೆಗೆ ನುಗ್ಗಿದ ಗುಂಪೊಂದು ಹೊಡೆದು ಕೊಂದು ಹಾಕಿತ್ತು.