ಅವರು ಹಂದಿ ಮಾಂಸ ತಿನ್ನಿಸದೆ ನನ್ನನ್ನು ಹೊಡೆದು ಸಾಯಿಸಬಹುದಿತ್ತು

0
2508

ಗುವಾಹಟಿ,ಎ.13: ಅಸ್ಸಾಂ ಪೊಲೀಸ್ ಮತ್ತು ಸಿಆರ್‍ಪಿಎಫ್ ಕಾವಲಿರುವ ಗುವಾಹಟಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಒಂದನೆ ನಂಬರಿನ ಸರ್ಜಿಕಲ್ ವಾರ್ಡಿಗೆ ಹೋದಾಗ ಶೌಕತ್ ಅಲಿ ಅಳತೊಡಗಿದರು “ಆ ಹಂದಿಮಾಂಸ ತಿನ್ನಿಸುವ ಮೊದಲು ಅವರು ನನ್ನನ್ನು ಹೊಡೆದು ಕೊಂದಿದ್ದರೆ ಸಾಕಿತ್ತು” ಎಂದರು. ಹೊಡೆತ ತಿಂದ ಕಪಾಲ ಬಾತುಕೊಂಡಿದೆ. ಪ್ರಾಣಿಗಳಂತೆ ಪರಚಿಗಾಯಗೊಳಿಸಿದ ಕಲೆಗಳು ದೇಹದಲ್ಲಿವೆ. ಕಣ್ಣಿಗೆ ಮೆಣಸಿನ ಹುಡಿ ಹಾಕಿದ ಉರಿ ಇನ್ನೂ ಮಾಸಿಲ್ಲ. ಶೌಕತ್‍ರ ಪುತ್ರ ಮುಖದಿಂದ ಕಣ್ಣೀರ ಹನಿಯನ್ನು ಒರೆಸಿ ತೆಗೆದರು.

ಗಟ್ಟಿಯಾಗಿ ಮಾತಾಡಲು ಅವರಿಂದ ಆಗುತ್ತಿಲ್ಲ. ತನ್ನ ನೋವನ್ನು ಹಂಚಿಕೊಳ್ಳಲು ತುಂಬ ಕಷ್ಟಪಡುತ್ತಾರೆ. ಎರಡು ಗಂಟೆಕಾಲ ಅವರು ತನಗೆ ಕೋಲಿನಿಂದ ಹೊಡೆದರು. ಎಲುಬು ಮುರಿದಂತೆ ದೇಹ ನೋಯುತ್ತಿದ್ದರೂ ಅದನ್ನು ಸಹಿಸಲು ಕಷ್ಟವಿಲ್ಲ ಎಂದು ಹೇಳಿದರು. ಆಹಾರ ಸೇವಿಸಲು ವೈದ್ಯರು ಹೇಳಿದರೂ ಅವರಿಂದ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಬಾಯಿಗೆ ಯಾವುದನ್ನು ಇಡುವಾಗಲೂ ಆ ಹಂದಿ ಮಾಂಸ ನೆನಪಿಗೆ ಬರುತ್ತಿದೆ ಎಂದು ಶೌಕತ್ ಅಲಿ ಹೇಳುತ್ತಾರೆ.

ಪ್ರಥಮ ಹಂತದ ಚುನಾವಣೆಯ ಮೊದಲು ಅಸ್ಸಾಂನಲ್ಲಿ ಕೋಮು ಧ್ರುವೀಕರಣ ಯತ್ನ ನಡೆಯುತ್ತಿದ್ದ ಸಮಯದಲ್ಲಿ ದೇಶವನ್ನೇ ಬೆಚ್ಚಿ ಬೀಳಿಸುವ ಘಟನೆ ನಡೆಯಿತು. ಬೀಫ್ ಹೆಸರಿನಲ್ಲಿ ವಯೋವೃದ್ಧ ಶೌಕತ್ ಅಲಿಗೆ ಕೋಮುವಾದಿಗಳು ಮಾರಣಾಂತಿಕವಾಗಿ ಹೊಡೆದಿದ್ದರು. 40 ವರ್ಷಗಳಿಂದ ಬಿಶ್ವನಾಥ್‍ನಲ್ಲಿ ಶೌಕತ್ ಸಣ್ಣ ಹೊಟೇಲು ಇಟ್ಟುಕೊಂಡಿದ್ದಾರೆ. ಇವರ ಐವರು ಸಹೋದರರಲ್ಲಿ ಒಬ್ಬರು ಶಾಲಾಧ್ಯಾಪಕರು. ತಂದೆಯ ವ್ಯಾಪಾರವನ್ನು ಶೌಕತ್ ಮುಂದುವರಿಸುತ್ತಿದ್ದಾರೆ. ಅಸ್ಸಾಂನಲ್ಲಿ ಬೀಫ್ ನಿಷೇಧವಿಲ್ಲ. ಆದ್ದರಿಂದ ಅವರು ಬೀಫ್ ವ್ಯಾಪಾರ ನಡೆಯುತ್ತಿದೆ. ಎಲ್ಲ ವ್ಯಾಪಾರ ಇರುವ ಮಾರುಕಟ್ಟೆಯಲ್ಲಿ ಬೀಫ್ ಮಾರಾಟ ನಡೆಯುತ್ತಿದೆ. ಇದರ ವರಮಾನದಲ್ಲಿ ಎಂಟು ಮಂದಿಯ ಕುಟುಂಬವನ್ನು ಅವರು ಸಾಕುತ್ತಿದ್ದಾರೆ. ಊಟ ಮತ್ತು ಬೀಫ್‍ನ್ನು ಬಝಾರಿನಲ್ಲಿ ಅವರು ಮಾರುತ್ತಿದ್ದರು. ಶುಕ್ರವಾರ, ರವಿವಾರ ಸಂತೆ ದಿನ ಒಳ್ಳೆಯ ವ್ಯಾಪಾರ ಆಗುತ್ತಿತ್ತು. ಅಲ್ಲಿ ಶೌಕತ್ ಅಲಿಯ ಬೀಫ್ ಮತ್ತು ಊಟ ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಆದ್ದರಿಂದ ಹಿಂದುತ್ವವಾದಿ ಗೂಂಡಗಳು ಶೌಕತ್ ಅಲಿಗೆ ಹಲ್ಲೆ ನಡೆಸುವ ಸಂಚು ಹೆಣೆದು ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ಕಳೆದ ರವಿವಾರ ಹಲ್ಲೆ ಮಾಡಿದ ಜನರ ತಂಡ ತನ್ನ ಹತ್ತಿರ ಬಂದು ಹಣ ಕೇಳಿತ್ತು. ಸ್ವಲ್ಪ ಹಣ ಕೊಟ್ಟಾಗ ಇದು ಸಾಲದು ಎಂದಿತ್ತು. ಆದರೆ ಹೆಚ್ಚು ಹಣವನ್ನು ಅವರು ಕೊಟ್ಟಿರಲಿಲ್ಲ. ನಂತರ ಕಳೆದ ರವಿವಾರ ವ್ಯಾಪಾರಕ್ಕೆ ಬಂದಾಗ ಇದೇ ತಂಡ ಅವರನ್ನು ಮಾರಣಾಂತಿಕವಾಗಿ ಥಳಿಸಿತ್ತು. ಮೊದಲು ಬೀಫ್ ಪದಾರ್ಥ ಮಾಡಿ ತಂದದ್ದು ಮಾರಿ ಮುಗಿದಿತ್ತು. ಎರಡನೆ ಬಾರಿ ಚಿಕನ್ ಪದಾರ್ಥ ತಂದು ಮಾರಾಟ ಮಾಡುತ್ತಿದ್ದಾಗ ಇಲ್ಲಿಂದ ಕೊಂಡು ಹೋಗುವಂತೆ ಸ್ಥಳದ ಮಾಲಕ ಹೇಳಿದಾಗ ಶೌಕತ್ ಅಲ್ಲಿಂದ ಇನ್ನೊಂದು ಕಡೆಗೆ ಹೋಗಿ ವ್ಯಾಪಾರಕ್ಕೆ ನಿಂತಿದ್ದರು. ನಂತರ ಅಲ್ಲಿ ಎರಡು ಗಂಟೆಗಳ ಕಾಲ ಹಿಂದುತ್ವ ಗೂಂಡಾಗಳು ಅವರನ್ನು ಬಂದಿಯಾಗಿಸಿಟ್ಟಿತು. ಮಾರ್ಕೆಟ್‍ನಿಂದ ಜನರು ಖಾಲಿಯಾಗಿದನ್ನು ನೋಡಿ ಹಲ್ಲೆ ನಡೆಸಿದೆ. ಹೊಡೆಯುವುದನ್ನು ನೋಡಿ ಓಡಿ ಬಂದವರು ಕೂಡ ರಕ್ಷಿಸಲು ನೋಡಿಲ್ಲ. ಹೊಡೆಯುವ ವೇಳೆ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇರಿಸಲಾಗಿದ್ದ ಹಂದಿ ಮಾಂಸವನ್ನು ಖರೀದಿಸಿ ತಂದು ತಿನ್ನಲು ಬಲವಂತಪಡಿಸಿದರು. ಅದಕ್ಕೆ ಸಿದ್ಧವಾಗದಿದ್ದಾಗ ಕೋಲಿನಿಂದ ಹೊಡೆದರು. ಕೈಹಿಡಿದು ಕಣ್ಣಿಗೆ ಮೆಣಸಿನ ಹುಡಿ ಹಾಕಿದರು.

ಹೊಡೆದು ಹಂದಿ ಮಾಂಸವನ್ನು ತಿನ್ನಿಸಿದರು. ಎರಡು ಗಂಟೆಕಾಲ ಹೊಡೆದರು. ನಂತರ ಪೊಲೀಸರು ಮತ್ತು ಸಿಆರ್‍ಪಿಎಫ್ ಶೌಕತ್‍ರನ್ನು ಕಸ್ಟಡಿಗೆ ತೆಗೆದುಕೊಂಡು ಪೊಲೀಸ್ ಠಾಣೆಗೆ ಕರೆದು ಕೊಂಡು ಹೋದರು. ಹೊಡೆದವರನ್ನು ಬಂಧಿಸಲಿಲ್ಲ. ಸಿಟಿ ಆಸ್ಪತ್ರೆಗೆಕರೆದುಕೊಂಡು ಹೋಗಿ ರಾತ್ರೆ ಪುನಃ ಅಲ್ಲಿಂದ ಕರೆದು ಕೊಂಡು ಬಂದುಪೊಲೀಸರು ಪುನಃ ಲಾಕಪ್‍ನಲ್ಲಿರಿಸಿದರು. ಘಟನೆಯ ವೀಡಿಯೊ ವೈರಲ್ ಆಗಿ, ಸುದ್ದಿ ಬಹಿರಂಗಗೊಂಡ ಬಳಿಕ ಸೋಮವಾರ ಮಧ್ಯಾಹ್ನ ಹನ್ನೆರಡು ಗಂಟೆಗೆ ಲಾಕಪ್‍ನಿಂದ ಪುನಃ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗುವಾಹಟಿಗೆ 250 ಕಿಲೋಮೀಟರ್ ದೂರದ ಬಿಶ್ವನಾಥ್ ನಗರದಲ್ಲಿ ಬೀಫ್‍ನ ಹೆಸರಿನಲ್ಲಿ ಕ್ರೂರ ಹಲ್ಲೆಗೀಡಾದ ಶೌಕತ್ ಅಲಿಯವರನ್ನು ಸೋಮವಾರ ಮಧ್ಯರಾತ್ರೆ ಹೆಚ್ಚಿನ ಚಿಕಿತ್ಸೆಗಾಗಿ ಗುವಾಹಟಿಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಿಶ್ವನಾಥ್ ಸಿಟಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದಾಗ ಊರವರು ಪ್ರತಿಭಟನೆ ನಡೆಸಿದರು. ತದನಂತರ ಅವರನ್ನು ಗುವಾಹಟಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.