ರಾಕ್‍ನಲ್ಲಿ ಜಲಪ್ರಳಯ: ಸರಕಾರದಿಂದ ತುರ್ತುಪರಿಸ್ಥಿತಿ ಘೋಷಣೆ

0
613

ಟೆಹ್ರಾನ್,ಎ.2: ಇರಾಕ್‍ನ ಖುಝಿಸ್ಥಾನ ಮುಂತಾದೆಡೆ ಭಾರೀ ಪ್ರವಾಹ ಬಂದಿದೆ. ವಿಪರೀತ ಮಳೆಯಾದ ಕಾರಣ ಖುಝಿಸ್ಥಾನ ಪ್ರಾಂತದಲ್ಲಿ ನೆರೆಹಾವಳಿ ಭೀಕರ ಪರಿಸ್ಥಿತಿಯನ್ನು ಸೃಷ್ಟಿಸಿದ್ದು ಇಲ್ಲಿ ತುರ್ತು ಪರಿಸ್ಥಿತಿ ಘೋಷಿಸಿಲಾಯಿತು. ಖುಝಿಸ್ಥಾನ ರಾಜ್ಯಪಾಲ ಜನರಲ್ ಖುಲಾಂ ರಿಝ ಶರೀಅತಿ ತುರ್ತು ಪರಿಸ್ಥಿತಿ ಘೋಷಿಸಿದರು. ನಂತರ ಗೃಹ ಸಚಿವ ಅಬ್ದುಲ್ ರಿಝ ರಹ್ಮಾನಿ ಅದನ್ನು ಅನುಮೋದಿಸಿದರು.

ಮುಂದಿನ 24 ಗಂಟೆಗಳ ಮುನ್ನೆಚ್ಚರಿಕೆ ಪಾಲಿಸಬೇಕೆಂದು ಜನರಿಗೆ ತಿಳಿಸಲಾಗಿದೆ. ವಲಯದ ಪರಿಸ್ಥಿತಿ ಅತೀಗಂಭೀರವಾಗಿದ್ದು ಖುಝಿಸ್ಥಾನದ ನದಿಗಳು ಹೊರಗೆ ಹರಿಯುತ್ತಿದೆ. ಈ ಪ್ರಾಂತದಲ್ಲಿ ಐದು ಪ್ರಧಾನ ನದಿಗಳು ಹರಿಯುತ್ತಿವೆ. ಇದರ ಸಮೀಪದಲ್ಲಿ 55 ಗ್ರಾಮಗಳಿವೆ. ಇಲ್ಲಿನ ಜನರು ಪ್ರಾಣಾಪಾಯ ಭೀತಿಯನ್ನು ಎದುರಿಸುತ್ತಿದ್ದಾರೆ. ಕಳೆದ ಮಾರ್ಚ್ 19ಕ್ಕೆ ಇರಾನ್‍ನ ವಿವಿಧ ಕಡೆಗಳಲ್ಲಿ ನೆರೆಹಾವಳಿಯಾಗಿತ್ತು.