ಸೌದಿ ಅರೇಬಿಯ ಖರೀದಿಸಿದ್ದ ಜಗತ್ತಿನ ಅತ್ಯಂತ ದುಬಾರಿ ಪೈಂಟಿಂಗ್ ನಾಪತ್ತೆ!

0
765

ನ್ಯೂಯಾರ್ಕ್,ಎ.2: ಜಗತ್ತಿನ ಅತ್ಯಂತದ ದುಬಾರಿ ಪೈಂಟಿಗಿಂಗ್ ಸೌದಿಅರೇಬಿಯದಿಂದ ನಾಪತ್ತೆಯಾಗಿದೆ ಎಂದು ವರದಿಯಾಗಿದೆ. ಲಿಯಾನಾರ್ಡೊ ಡ ವಿಂಚಿಯ ಸಾಲ್ವೆಟರ್ ಮುಂಡಿ ಎನ್ನುವ ಪ್ರಸಿದ್ಧ ಪೈಂಟಿಂಗ್ ಇದು. ನ್ಯೂಯಾರ್ಕ್ ಟೈಮ್ಸ್ ಕಳೆದ ದಿವಸ ಪೈಟಿಂಗ್ ಕಾಣೆಯಾದ ಕುರಿತ ವರದಿಯನ್ನು ನಿನ್ನೆ ಪ್ರಕಟಿಸಿದ್ದು, 2017 ನವೆಂಬರ್‍ನಲ್ಲಿ 450.3 ಮಿಲಿಯನ್ ಡಾಲರ್‍ಗೆ ಈ ಚಿತ್ರವನ್ನು ಸೌದಿಅರೇಬಿಯ ಖರೀದಿಸಿತ್ತು.

ನ್ಯೂಯಾರ್ಕ್‍ನಲ್ಲಿ ನಡೆದ ಹರಾಜಿನಲ್ಲಿ ಈ ಪೈಂಟಿಂಗ್ ಖರೀದಿಸಿದ ವ್ಯಕ್ತಿಯ ಹೆಸರನ್ನು ಗುಪ್ತವಾಗಿರಿಸಲಾಗಿತ್ತು. ನಂತರ ಇದನ್ನು ಸೌದಿ ಅರೇಬಿಯದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಖರೀದಿಸಿದ್ದರು ಎನ್ನುವ ಸಮಾಚಾರ ಬಹಿರಂಗವಾಗಿತ್ತು. ಪ್ಯಾರಿಸ್‍ನ ಲುವರ್ ಮ್ಯೂಸಿಯಂನಲ್ಲಿ ಅಬುಧಾಬಿ ಸಾಂಸ್ಕೃತಿಕ ವಿಭಾಗ ಇದರ ಪ್ರದರ್ಶನ ನಡೆಸಲಿದೆ ಎಂದು ಘೋಷಿಸಿತ್ತು. ಆದರೆ, ಕಾರಣ ತಿಳಿಸದೆ ಪ್ರದರ್ಶನವನ್ನು ಮುಂದೂಡಲಾಯಿತು. ಇದೇವೇಳೆ. ಪೈಂಟಿಂಗ್ ಕಳ್ಳತನ ನಡೆಯಿತೇ ಎನ್ನುವ ಎನ್ನುವ ವಿವರಗಳು ಕೂಡ ಈವರೆಗೆ ಬಹಿರಂಗವಾಗಿಲ್ಲ.