ಯುರೋಪಿನಲ್ಲಿ ಕೊರೋನ ಸೋಂಕಿಗೆ ಇನ್ನೂ ಲಕ್ಷ ಮಂದಿ ಬಲಿಯಾಗುವ ಸಾಧ್ಯತೆ: WHO ಮುನ್ನೆಚ್ಚರಿಕೆ

0
472

ಸನ್ಮಾರ್ಗ‌ ವಾರ್ತೆ

ಹೊಸದಿಲ್ಲಿ: ಯುರೋಪಿನಲ್ಲಿ ಮಂದಿನ ದಿನಗಳಲ್ಲಿ ಇನ್ನೂ ಏಳು ಲಕ್ಷ ಜನರು ಕೊರೋನ ಸೋಂಕಿಗೆ ಬಲಿಯಾಗುವರೆಂದು ವಿಶ್ವ ಆರೋಗ್ಯ ಸಂಘಟನೆಯು ಮುನ್ನೆಚ್ಚರಿಕೆ ನೀಡಿದೆ. ಯುರೋಪಿನ ಒಟ್ಟು 22 ಲಕ್ಷ ಕೊರೋನ ಸಾವುಗಳು ಸಂಭವಿಸಿವೆ ಎಂಬಿದಾಗಿ ಅದು ತಿಳಿಸಿತು. ಸೆಪ್ಟಂಬರಿನಲ್ಲಿ ಪ್ರತಿದಿನ 2100 ಮಂದಿ ಕೊರೋನಕ್ಕೆ ಬಲಿಯಾಗಿದ್ದಾರೆ.

ಕಳೆದ ವಾರದಿಂದ 4200ಕ್ಕೂ ಹೆಚ್ಚು ಹೆಚ್ಚಿದೆ ಎಂಬುದನ್ನು ಅದು ಲೆಕ್ಕ ಮಾಡಿದೆ. ಕೊರೊನ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಯುರೋಪಿನ ದೇಶಗಳಲ್ಲಿ ಭಾರೀನಿ ಯಂತ್ರಣವನ್ನು ಮತ್ತೆ ಅಳವಡಿಸಿಕೊಳ್ಳಬೇಕಾಗಿದೆ ಎಂದು ಡಬ್ಲ್ಯೂಎಚ್‍ಒ ಹೇಳಿದೆ.

ಮಾಸ್ಕ್ ಬಳಕೆ ಕೊರೋನ ಹರಡುವುದನ್ನು ಶೇ.53ರಷ್ಟು ತಡೆಯೊಡ್ಡುತ್ತದೆ. ಶೇ.95ರಷ್ಟು ಮಂದಿ ಮಾಸ್ಕ್ ಹಾಕಿಕೊಂಡರೆ ಮಾರ್ಚ್ ಒಂದರ ನಂತರ 160,000 ಕೊರೋನ ಸಾವುಗಳನ್ನು ತಡೆಯಬಹುದು ಎಂದು ವಿಶ್ವ ಆರೋಗ್ಯ ಸಂಘಟನೆ ಬೆಟ್ಟು ಮಾಡಿದೆ.

2022 ಮಾರ್ಚ್‍ವರಗೆ 53 ದೇಶಗಳಲ್ಲಿ 39 ದೇಶಗಳು ತೀವ್ರ ಉಪಚಾರ ಅಗತ್ಯ ಎನಿಸಿಕೊಳ್ಳಬಹುದು. ವ್ಯಾಕ್ಸಿನೇಶನ್ ಸರಿಯಾಗಿ ಅಳವಡಿಸಿದಲ್ಲಿ ಅಪಾಯ ಸಾಧ್ಯತೆ ಕಡಿಮೆ ಮಾಡಿಕೊಳ್ಳಬಹುದು. ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಹಾಗೂ ವ್ಯಾಕ್ಸಿನೇಶನ್ ಇದಕ್ಕೆ ಪರಿಣಾಮಕಾರಿ ಎಂದು WHO ಹೇಳಿದೆ.