ಸುಡಾನ್: ಸೇನೆಯೊಂದಿಗೆ ಒಪ್ಪಂದ ಮಾಡಿಕೊಡ ಸರಕಾರ; ಸೇನಾ ಹಸ್ತಕ್ಷೇಪ ವಿರೋಧಿಸಿ 12 ಸಚಿವರಿಂದ ರಾಜೀನಾಮೆ

0
411

ಸನ್ಮಾರ್ಗ ವಾರ್ತೆ

ಕರ್ತೂಂ: ಸೈನಿಕ ಕೌನ್ಸಿಲ್‍ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದನ್ನು ವಿರೋಧಿಸಿ 12 ಸಚಿವರು ಪ್ರಧಾನಿ ಸ್ಥಾನಕ್ಕೆ ಮರಳಿದ ಅಬ್ದುಲ್ಲ ಹಂದ್‍ಗೆ ರಾಜೀನಾಮೆ ಒಪ್ಪಿಸಿದ್ದಾರೆ. ಇದು ಅವರ ಪ್ರತಿಭಟನೆ ಎಂದು ವರದಿಯಾಗಿದೆ. ಸುಡಾನಿನಲ್ಲಿ ಒಂದು ತಿಂಗಳವರೆಗೆ ರಾಜಕೀಯ ಅನಿಶ್ಚಿತತೆ ಮುಂದುವರಿದಿತ್ತು. ಕೊನೆಗೆ ರವಿವಾರ ಪುನಃ ಹಂದ್‍ರನ್ನು ಪ್ರಧಾನಿಯಾಗಿ ಸೇನೆ ನಿಯೋಜಿಸಿತು.

ಸೇನಾ ಮುಖ್ಯಸ್ಥ ಜನರಲ್ ಅಬ್ದುಲ್ ಫತ್ತಾಹ್ ಅಲ್ ಬುರ್‍ಹಾನ್‍ರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು ಇದನ್ನು ಅಂತಾರಾಷ್ಟ್ರೀಯ ಸಮುದಾಯ ಸ್ವಾಗತಿಸಿದರೂ ಸೈನಿಕ ಬುಡಮೇಲು ಕೃತ್ಯಕ್ಕೆ ಕಾನೂನು ಸಿಂಧುತ್ವ ನೀಡುವ ಯತ್ನ ಎಂದು ಹೇಳಿ ಸುಡಾನಿನ ಪ್ರಜಾಪ್ರಭುತ್ವ ಬೆಂಬಲಿಗರು ತಿರಸ್ಕರಿಸಿದ್ದರು.

ಮುಂದೆ ಸರಕಾರದಲ್ಲಿ ಸೇನೆಯ ಹಸ್ತಕ್ಷೇಪ ಇರಬಾರದೆಂಬುದಿ ಇವರ ಆಗ್ರಹವಾಗಿದೆ.

ಅಕ್ಟೋಬರ್ 25ರಂದು ಮಧ್ಯಕಾಲೀನ ಸರಕಾರವನ್ನು ಬುಡಮೇಲುಗೊಳಿಸಿ ಅಲ್ ಬುರ್‍ಹಾನ್ ಅಧಿಕಾರ ಕಿತ್ತುಕೊಂಡಿದ್ದರು. ಮಧ್ಯಂತರ ಸರಕಾರದ ಸಚಿವರು ಈಗ ರಾಜೀನಾಮ ನೀಡಿದ್ದಾರೆ. ಸೇನಾ ಬುಡಮೇಲು ಕೃತ್ಯವನ್ನು ವಿರೋಧಿಸಿ ಇಡೀ ದೇಶದುದ್ದಕ್ಕೂ ಪ್ರತಿಭಟನೆ ನಡೆದು 41 ಮಂದಿ ಪ್ರಜೆಗಳು ಮೃತಪಟ್ಟಿದ್ದರು.