ತಮಿಳುನಾಡಿನಲ್ಲಿ ಎಐಎಡಿಎಂಕೆಯೊಂದಿಗೆ ಬಿಜೆಪಿ ಮೈತ್ರಿ; ತಮಿಳರ ನಾಡಲ್ಲಿ ಅರಳಿತೇ ಕಮಲ!

0
1073

ತಮಿಳುನಾಡು: ತಮಿಳುನಾಡಿನಲ್ಲಿ ಎಐಎಡಿಎಂಕೆ ಬಿಜೆಪಿಯೊಂದಿಗೆ ಮೈತ್ರಿಯನ್ನು ಮಾಡಿಕೊಂಡಿದ್ದು ಪಿಎಂಕೆಗೆ 7ಕ್ಕೆ ಸೀಟುಗಳನ್ನು ಬಿಟ್ಟು ಕೊಡಲಾಗಿದೆ. ಇದುವರೆಗೂ ತಮಿಳುನಾಡಿನಲ್ಲಿ ಕೇವಲ ಒಂದೇ ಒಂದು ಸೀಟನ್ನು ಮಾತ್ರ ಹೊಂದಿರುವ ಬಿಜೆಪಿಗೆ ಈ ಸಲ ಐದು ಸೀಟುಗಳನ್ನು ನೀಡಲು ಎಐಎಡಿಎಂಕೆ ನೀಡಲು ಸಜ್ಜಾಗಿವೆ. ಪುದುಚೇರಿಯಲ್ಲಿಯೂ ಎಐಎಡಿಎಂಕೆ ಬಿಜೆಪಿ ಜೊತೆಗೂಡಿ ಕಾರ್ಯವೆಸಗಲಿವೆ.

ತಮಿಳುನಾಡಿನಲ್ಲಿ ಬಿಜೆಪಿ ಹೆಚ್ಚಿನ ಪ್ರಭಾವವನ್ನು ಹೊಂದಿಲ್ಲವಾದರೂ ಪಟ್ಟಾಳ್ ಮಕ್ಕಳ್ ಕಚ್ಚಿಪಾರ್ಟಿ(ಪಿಎಂಕೆ) ಬಿಜೆಪಿಗಿಂತ ಅಲ್ಲಿ ಹೆಚ್ಚು ಪ್ರಭಾವವನ್ನು ಹೊಂದಿದೆ.

ಎಐಡಿಯೊಂದಿಗೆ ಸಖ್ಯವನ್ನು ಪಿಎಂಕೆ ಇಂದು ಬೆಳಗ್ಗೆ ಘೋಷಿಸಿತ್ತು. ಆದರೆ ಈ ಬಾರಿ ಎಐಎಡಿಎಂಕೆಯ ಸಹಕಾರದಲ್ಲಿ ತಮಿಳುನಾಡಿನಲ್ಲಿ ತನ್ನ ಬೇರನ್ನು ಗಟ್ಟಿಗೊಳಿಸುವ ಸದವಕಾಶ ಬಿಜೆಪಿಗೆ ದೊರಕಿದ್ದು ತಮಿಳರ ನಾಡಲ್ಲಿ ಕಮಲ ಅರಳುವುದೇ ಎಂಬುದನ್ನು ಕಾದು ನೋಡಬೇಕಿದೆ. ತಮಿಳುನಾಡಿನಲ್ಲಿ ಒಟ್ಟು ನಲ್ವತ್ತು ಲೋಕಸಭಾ ಸೀಟುಗಳಿಗೆ ಚುನಾವಣೆ ನಡೆಯಲಿದೆ.

ಬಿಜೆಪಿಯೊಂದಿಗಿನ ಸಖ್ಯವನ್ನು ಮಾಜಿ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ.