ಅಮಲಿನಲ್ಲಿ ಕಾರು ಚಾಲನೆ: ತಪ್ಪಿದ ಭಾರೀ ಅನಾಹುತ! ಮಂಗಳೂರು ಮಿನಿ ವಿಧಾನಸೌಧದ ಆವರಣದಲ್ಲಿ ನಡೆದ ಘಟನೆ

0
1686

ಮಂಗಳೂರು: ಮಾದಕ ದ್ರವ್ಯದ ಅಮಲಿನಲ್ಲಿದ್ದ ವ್ಯಕ್ತಿಯೋರ್ವ ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿದ ಪರಿಣಾಮವಾಗಿ ಕಾರೊಂದಕ್ಕೆ ಢಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದಾಗ ಸಾರ್ವಜನಿಕರು ಆರೋಪಿ ಪೊಲೀಸರಿಗೊಪ್ಪಿಸಿದ ಘಟನೆ ಇಂದು ಮಧ್ಯಾಹ್ನ 1.30 ರ ಸುಮಾರಿಗೆ ಮಂಗಳೂರು ತಾಲೂಕು ಪಂಚಾಯತ್ ಆವರಣದಲ್ಲಿ ನಡೆದಿದೆ.

ಪ್ರತಿದಿನ ಜನನಿಬಿಡ ಪ್ರದೇಶವಾಗಿರುವ ಮಂಗಳೂರು ತಾಲೂಕು ಪಂಚಾಯತ್ ಹಾಗೂ ಮಿನಿ ವಿಧಾನ ಸೌಧದ ಆವರಣದಲ್ಲಿ ಹಲವಾರು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಿನಿ ವಿಧಾನ ಸೌಧದ ಪಾರ್ಕಿಂಗ್ ನಲ್ಲಿ ತಾನು ಬಂದಿದ್ದ ವ್ಯಾಗನಾರ್ ಕಾರನ್ನು ರಭಸವಾಗಿ ಚಲಾಯಿಸಿದ ಪರಿಣಾಮವಾಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕೇರಳದಿಂದ ಆಗಮಿಸಿದ್ದ ಮುಸ್ಲಿಂ ಧಾರ್ಮಿಕ ಗುರು ಉಸ್ಮಾನ್ ಸ ಅದಿ ಪಟ್ಟೋರಿ ಎಂಬವರ ಸ್ವಿಫ್ಟ್ ಕಾರಿಗೆ ಗುದ್ದಿದ್ದಲ್ಲದೆ, ಆರೋಪಿ ಚಾಲಕ ಪರಾರಿಯಾಗಲು ಯತ್ನಿಸಿದ್ದಾನೆ.

ಆರೋಪಿ ಚಾಲಕನನ್ನು ಬಳಿಕ ಸಾರ್ವಜನಿಕರ ಸಹಕಾರದಿಂದ ಪಾಂಡೇಶ್ವರ ಟ್ರಾಫಿಕ್ ಪೊಲೀಸರಿಗೆ ಒಪ್ಪಿಸಲಾಗಿದ್ದು, ಪೊಲೀಸರು ಚಾಲಕನನ್ನು ಬಂಧಿಸಿ ಕರೆದೊಯ್ದಿದ್ದಾರೆ. ಚಾಲಕನ ವಿವರ ತಿಳಿದು ಬಂದಿಲ್ಲ.

ಚಾಲಕ ಮಾದಕ ದ್ರವ್ಯದ ಅಮಲಿನಲ್ಲಿದ್ದ ಆರೋಪಿ ಚಾಲಕನ ಅಜಾಗರೂಕತೆಯಿಂದ ಹಲವಾರು ಜನರ ಪ್ರಾಣಕ್ಕೆ ಈತ ಎರವಾಗುತ್ತಿದ್ದ ಎಂದು ಈ ಘಟನೆಯ ವೇಳೆ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.