ಎಲ್ಲಿಯವರೆಗೆ ಭೇದ ಭಾವ ಇರುತ್ತದೋ ಅಲ್ಲಿಯವರೆಗೆ ಸಮಾಜದಲ್ಲಿ ಸಮಾನತೆ ಸಾಧ್ಯವಿಲ್ಲ- ರವಿದಾಸ್ ಜಯಂತಿ ಸಮಾರಂಭದಲ್ಲಿ ಪ್ರಧಾನಿ ಮೋದಿ

0
1392

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತನ್ನ ಸಂಸದೀಯ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ್ದು ಅಲ್ಲಿ ಸಂತ ರವಿದಾಸ್ ಮಂದಿರವನ್ನು ದರ್ಶನ ಪಡೆದರು. ನಂತರ ಅವರು ಸಂತ ರವಿದಾಸ ಮಂದಿರ ಪ್ರಾಂಗಣದಲ್ಲಿ ಸಭೆಯುನ್ನು ಉದ್ದೇಶಿ ಮಾತಾಡಿದರು. ಸಂತ ರವಿದಾಸರು ಸದ್ಭಾವ,ಸಮಾನತೆ, ಸಾಮಾಜಿಕ ಸಶಕ್ತೀಕರಣಕ್ಕಾಗಿ ಅವರು ಅಮೂಲ್ಯ ಮತ್ತು ಮಹತ್ವದ ಸಂದೇಶ ನೀಡಿದರು. ಅವರು ನಮಗೆ ಸದಾ ಪ್ರೇರಣೆಯಾಗಿದ್ದರು ಎಂದು ಮೋದಿ ಹೇಳಿದರು.

ಭೇದಭಾವ ಇರುವವರೆಗೆ ನಾವು ಪರಸ್ಪರ ಒಬ್ಬರನ್ನೊಬ್ಬರನ್ನು ಜೋಡಿಸಲಾರೆವು. ಸಮಾಜದಲ್ಲಿ ಸಮಾನತೆ ಬರಲಾರದು ಎಂದು ಪ್ರಧಾನಿ ಹೇಳಿದರು.

ಮೊದಲ ಹಂತದಲ್ಲಿ 50 ಕೋಟಿ ರೂಪಾಯಿಯನ್ನು ವಿಸ್ತರೀಕರಣ ಮತ್ತ ಸುಂದರೀಕರಣ ಯೋಜನೆಯಡಿಯಲ್ಲಿ ವಿನಿಯೋಗಿಸಲಾಗಿದೆ. ಬಿಎಚ್‍ಯುನಿಂದ ರಸ್ತೆಯನ್ನು ಅಲಂಕರಿಸಲಾಗುವುದು. ಹನ್ನೆರಡು ಕಿಲೊಮೀಟರ್ ವರೆಗೆ ಇನ್ನೊಂದು ರಸ್ತೆ ನಿರ್ಮಾಣವಾಗಲಿದೆ. ಗುರುವಿನ ಕಂಚಿನ ಪ್ರತಿಮೆಮತ್ತು ಕಮ್ಯುನಿಟಿ ಹಾಲ್ ಕಟ್ಟಿಸಲಾಗುವುದು ಎಂದು ತಿಳಿಸಿದರು.

ಯೋಜನೆ ಪೂರ್ಣಗೊಂಡ ಬಳಿಕ ಲಕ್ಷಾಂತರ ಮಂದಿಗೆ ಎಲ್ಲ ಸೌಲಭ್ಯಗಳು ದೊರಕಲಿವೆ. ಸಂತರ ಜನ್ಮಸ್ಥಳ ಕೋಟ್ಯಂತರ ಜನರ ನಂಬಿಕೆಯ ವಿಷಯವಾಗಿದೆ. ಶ್ರೀಗುರು ರವಿದಾಸ ಜಯಂತಿಯ ಸಂದರ್ಭದಲ್ಲಿ ನೀವೆಲ್ಲರೂ ಮತ್ತು ಅನುಯಾಯಿಗಳ ಸಹಿತ ದೇಶವಾಸಿಗಳಿಗೆ ಅಪಾರ ಅಭಿನಂದನೆಗಳನ್ನು ನೀಡುತ್ತಿದ್ದೇನೆ. ಅವರ ಆಶೀರ್ವಾದದಲ್ಲಿ ತನ್ನ ಭರವಸೆ ಈಡೇರಿಸಲು ಪುನಃ ಬಂದದ್ದಕ್ಕೆ ತನಗೆ ಸಂತೋಷವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.