ಬ್ರೂನೈಯಲ್ಲಿ ಸಲಿಂಗರತಿ, ವ್ಯಭಿಚಾರಕ್ಕೆ ಕಲ್ಲೆಸೆದು ಕೊಲ್ಲುವ ಶಿಕ್ಷೆ

0
1501

ಬಂದರ್‍ಸರಿ ಬೆಗಾವನ್,ಮಾ.30: ವ್ಯಭಿಚಾರ, ಸಲಿಂಗ ರತಿಯ ವಿರುದ್ಧ ಬ್ರುನೈ ಸರಕಾರ ಕಠಿಣ ಶಿಕ್ಷೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಇಂತಹ ಕೃತ್ಯವೆಸಗುವವರನ್ನು ಕಲ್ಲೆಸೆದು ಕೊಲ್ಲುವ ಶಿಕ್ಷೆ ಜಾರಿಗೊಳಿಸಲು ಸರಕಾರ ಆದೇಶ ಹೊರಡಿಸಿತು. ಮುಂದಿನ ತಿಂಗಳು ಎಪ್ರಿಲ್ ಮೂರರಿಂದ ಹೊಸ ಕಾನೂನು ಜಾರಿಗೆ ಬರಲಿದೆ. ಈ ಕಾನೂನಿನ ವಿರುದ್ಧ ಆಮ್ನೆಸ್ಟಿ ಇಂಟರ್‍ನ್ಯಾಶನಲ್ ಮುಂತಾದ ಮಾನವಹಕ್ಕು ಸಂಘಟನೆಗಳು ಧ್ವನಿಯೆತ್ತಿ ರಂಗಪ್ರವೇಶಿಸಿವೆ.

ಮಲೇಶ್ಯ, ಇಂಡೊನೇಶ್ಯಕ್ಕೆ ಹೋಲಿಸಿದರೆ ಶರೀಅತ್ ನಿಯಮದಂತೆ ಬ್ರೂನೈ ಕಠಿಣ ಶಿಕ್ಷಾ ಕ್ರಮವನ್ನು ಅನುಸರಿಸುತ್ತಿದೆ. ನಾಲ್ಕೂವರೆ ಲಕ್ಷ ಜನಸಂಖ್ಯೆ ಹೊಂದಿರುವ ಬ್ರೂನೈಯಲ್ಲಿ ಮೊತ್ತಮೊದಲು ಶರೀಅತ್ ಕಾನೂನು ಜಾರಿಗೆ ತರಲಾಗುತ್ತಿದೆ. ಕಳ್ಳತನಕ್ಕೂ ಕಠಿಣ ಶಿಕ್ಷೆ ಇದೆ. ಕದ್ದು ಮೊದಲ ಬಾರಿ ಸಿಕ್ಕಿಹಾಕಿಕೊಂಡರೆ ಬಲಗೈ ಕಡಿಯಲಾಗುವುದು. ಪುನಃ ಇದೇ ಚಾಳಿ ಮುಂದುವರಿಸಿ ಸಿಕ್ಕಿಬಿದ್ದರೆ ಎಡಕಾಲು ಕತ್ತರಿಸಲಾಗುವುದು. ಅಪರಾಧ ಕೃತ್ಯಗಳು ಕಡಿಮೆ ಮಾಡುವ ಸಲುವಾಗಿ ಇಂತಹ ಕಠಿಣ ಶಿಕ್ಷೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಬ್ರೂನೈ ಸರಕಾರ ಹೇಳುತ್ತಿದೆ.

ಬ್ರೂನೈಯಲ್ಲಿ ಸಲಿಂಗರತಿ ಈ ಹಿಂದೆಯೇ ಕಾನೂನು ಬಾಹಿರವಾಗಿದ್ದು ಮುಸ್ಲಿಮರಿಗೆ ಮಾತ್ರ ಶಿಕ್ಷೆ ಅನ್ವಯವಾಗಲಿದೆ. ಸಲಿಂಗಕಾಮದಲ್ಲಿ ತೊಡಗಿಸಿಕೊಂಡವರನ್ನು ಕಲ್ಲೆಸೆದು ಕೊಲ್ಲುವ ಕಾನೂನು ಜಾರಿಗೆ ತರಬೇಕೆಂದು ಕಳೆದ ಡಿಸೆಂಬರಿನಲ್ಲಿ ಒತ್ತಾಯ ಕೇಳಿ ಬಂದಿತ್ತು.