ಬಿಹಾರ ಚುನಾವಣೆ: ಬಿಜೆಪಿಗೆ 9500 ಐಟಿ ಸೆಲ್ ಹೊಣೆಗಾರರು, 72,000 ವಾಟ್ಸಪ್ ಗ್ರೂಪ್‌ಗಳು!

0
629

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜು.1: ವಿವಿಧ ರಾಜ್ಯಗಳಲ್ಲಿ 60 ವಿರ್ಚುವಲ್ ರ‌್ಯಾಲಿಗಳ ಬಳಿಕ ಬಿಹಾರದ ಚುನಾವಣೆಗೆ ಡಿಜಿಟಲ್ ಅಭಿಯಾನವನ್ನು ಬಿಜೆಪಿ ಆರಂಭಿಸಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ 9,500 ಐಟಿ ಸೆಲ್ ಹೊಣೆಗಾರರನ್ನು ಬಿಜೆಪಿ ಸಜ್ಜುಗೊಳಿಸಿದೆ. ಇದರಲ್ಲಿ ಬಿಜೆಪಿಯ ಅಜೆಂಡಾ, ಸಂದೇಶ ಪ್ರಚಾರ ಮಾಡುವ ಇವರಿಗೆ ಬೂತ್ ಕೇಂದ್ರೀಕರಿಸಿ 72,000 ವಾಟ್ಸಪ್ ಗ್ರೂಪ್‌ಗಳನ್ನು ಮಾಡಲಾಗಿದೆ.

ಕಳೆದ ಎರಡು ತಿಂಗಳಲ್ಲಿ ಬಿಜೆಪಿ 50,000 ವಾಟ್ಸಪ್ ಗ್ರೂಪ್‍ಗಳನ್ನು ಆರಂಭಿಸಿದೆ. ಬೂತ್ ಮಟ್ಟದ ಕಾರ್ಯಕರ್ತರು ಐಟಿ ಸೆಲ್ ಹೊಣೆಗಾರರಿಗೆ ವಾಟ್ಸಪ್ ಗ್ರೂಪ್ ನಿರ್ವಹಿಸುವ ಜವಾಬ್ದಾರಿ ನೀಡಲಾಗಿದೆ. ಅಮಿತ್ ಮಾಳವೀಯರ ನೇತೃತ್ವದ ರಾಷ್ಟ್ರೀಯ ಐಟಿ ಸೆಲ್‍ನ ಅಧೀನದಲ್ಲಿ ಇವು ಕೆಲಸ ಮಾಡಲಿದೆ.

5,500 ಮಂಡಲ, 9,500 ಶಕ್ತಿಕೇಂದ್ರ, 72,000 ಬೂತ್‍ಗಳೆಂದು ವಿಭಜಿಸಿ ಬಿಜೆಪಿ ಅಭಿಯಾನ ಮಾಡಲಿದೆ. ಬಿಜೆಪಿ ಹಾಗೂ ಜೆಡಿಎಸ್‍ಗೆ ಈ ಚುನಾವಣೆ ನಿರ್ಣಾಯಕವಾಗಿದೆ. ಡಿಜಿಟಲ್ ಕ್ಷೇತ್ರದ ಸಾಧ್ಯತೆ ಉಪಯೋಗಿಸಲು ಬಿಜೆಪಿ ತೀರ್ಮಾನಿಸಿದ್ದು, ವಾಟ್ಸಪ್ ಗ್ರೂಪ್‍ಗಳಲ್ಲಿ ಎರಡು ಕೋಟಿ ಮತದಾರರನ್ನು ತಲುಪುವ ಗುರಿ ಇಟ್ಟುಕೊಂಡಿದೆ.

ಮೋದಿ, ಅಮಿತ್ ಶಾರ ಭಾಷಣಗಳು ತ್ರಿಡಿ ವ್ಯಾನುಗಳಲ್ಲಿ ಜನರಿಗೆ ಕಡಿಮೆ ವೆಚ್ಚದಲ್ಲಿ ತಲುಪಿಸಲು ಉದ್ದೇಶಿಸಿದೆ. ಈ ವರ್ಷದ ಕೊನೆಯಲ್ಲಿ ಬಿಹಾರ ಚುನಾವಣೆ ಆಗಬಹುದೆಂದು ಸೂಚನೆ ಇದೆ. ಕೊರೋನ ನಿಯಂತ್ರಣ ಇರುವುದರಿಂದ ಡಿಜಿಟಲ್ ಪ್ರಚಾರವೊಂದೇ ದೊಡ್ಡ ಅಸ್ತ್ರವಾಗಿ ಮಾರ್ಪಟ್ಟಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.