ಹಿಂಸೆಗೊಳಗಾಗುತ್ತಿರುವ ಕಾಶ್ಮೀರೀ ವಿದ್ಯಾರ್ಥಿಗಳಿಗೆ ನಮ್ಮ ಮನೆ ಬಾಗಿಲು/ಹೃದಯಗಳೆರಡು ತೆರೆದಿರುತ್ತವೆ – ರಾಜ್ ದೀಪ್, ಬರ್ಕಾ ದತ್

0
1371

ಪುಲ್ವಾಮ ದಾಳಿಯ ದೇಶಭಕ್ತಿಯ ಹೆಸರಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದ್ದು, ಕಾಶ್ಮೀರಿಗಳಿಗೆ ಮನೆ ಬಾಡಿಗೆಗೆ ನೀಡಬಾರದು ಹಾಗೂ ಅವರನ್ನು ಓಡಿಸಬೇಕೆಂಬ ಕೂಗು ಹಲವು ಕಡೆ ಕೇಳಿ ಬರುತ್ತಿದೆ. ಕೆಲವೆಡೆ ಕಾಶ್ಮೀರಿಗಳನ್ನು ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದು, ಇದರಿಂದಾಗಿ ಕಾಶ್ಮೀರ ಮೂಲದ ವಿದ್ಯಾರ್ಥಿಗಳು,ಸಂಶೋಧಕರು, ಜನಸಾಮಾನ್ಯರು ಹಲವೆಡೆ ಹಿಂಸೆ, ದಾಳಿಗಳಿಂದ ಸಮಸ್ಯೆಗೆ ಗುರಿಯಾಗಿದ್ದಾರೆ. ಇದಲ್ಲದೇ ಕಾಶ್ಮೀರ ಮೂಲದ ವಿದ್ಯಾರ್ಥಿಗಳನ್ನು ಹಾಸ್ಟೆಲ್ ಗಳಿಂದ ಹೊರಗಟ್ಟಿದ, ಕೆಲವೆಡೆ ಕೊಠಡಿಗಳಲ್ಲಿ ಕೂಡಿ ಹಾಕಿ ಹಿಂಸಿಸಿದ ಘಟನೆಗಳು ದೆಹಲಿ, ಪಂಜಾಬ್, ಚಂಡಿಗಡ,ರಾಜಸ್ತಾನ ಸೇರಿದಂತೆ ಹಲವೆಡೆ ನಡೆದಿವೆ. ಕಾಶ್ಮೀರದ ಜನತೆಯ ಮೇಲೆ ನಡೆಯುತ್ತಿರುವ ಈ ದಬ್ಬಾಳಿಕೆಯನ್ನು ಬರ್ಕಾ ದತ್, ರಾಜದೀಪ್ ಸರ್ದೇಸಾಯೀ ಸೇರಿದಂತೆ ಹಲವು ಪತ್ರಕರ್ತರು ಖಂಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಸಮಸ್ಯೆಗೆ ಗುರಿಯಾದ ವಿದ್ಯಾರ್ಥಿಗಳು ಯಾವುದೇ ಸಂದರ್ಭದಲ್ಲಿ ನಮಗೆ ನೇರವಾಗಿ ಕರೆ ಮಾಡಬಹುದು ಅಥವಾ ಮೆಸೇಜ್ ಮಾಡಬಹುದು. ನಮ್ಮ ಮನೆ ಬಾಗಿಲುಗಳು ಹಾಗೂ ಹೃದಯಗಳು ಸದಾ ನಿಮಗಾಗಿ ತೆರೆದಿರುತ್ತವೆ ಎಂದು ಈ ಟ್ವೀಟ್ ಮಾಡಿದ್ದಾರೆ.

“ನನ್ನ ನಂಬರ್ ಸದಾ ಆನ್ ಲೈನ್ ನಲ್ಲಿರುತ್ತದೆ. ಈ ಸಂದರ್ಭದಲ್ಲಿ ಸಂಕಷ್ಟವನ್ನು ಎದುರಿಸುತ್ತಿರುವ ಕಾಶ್ಮೀರಿಳಿಗೆ ನನ್ನ ಮನೆಯ ಬಾಗಿಲು ಸದಾ ತೆರೆದಿದೆ. ಅಮಾಯಕ ಜನರನ್ನು ಸಂಕಷ್ಟಕ್ಕೆ ಒಳ ಪಡಿಸುತ್ತಿರುವವರು ಭಯೋತ್ಪಾದಕರ ಮೇಲೆ ಕರುಣೆಯುಳ್ಳ ದೇಶಭಕ್ತರಾಗಿದ್ದಾರೆ. ಅವರು ಜೈಶ್ ನ ದೃಷ್ಟಿಕೋನದಲ್ಲಿ ಅಳೆದು ಓದುತ್ತಿದ್ದು ಆತ ಅದನ್ನೇ ಬಯಸಿದ್ದನೆಂಬದುನ್ನು ಅವರು ಮರೆತಿದ್ದಾರೆ”. ಎಂದು ಬರ್ಕಾ ದತ್ ಟ್ವೀಟ್ ಮಾಡಿದ್ದಾರೆ.

ರಾಜ್ ದೀಪ್ ಸರ್ದೇಸಾಯೀ ಯವರು ಕೂಡ ತಮ್ಮ ಟ್ವೀಟ್ ನಲ್ಲಿ ಕಾಶ್ಮೀರದ ವಿದ್ಯಾರ್ಥಿಗಳಿಗೆ ಸಹಾಯಹಸ್ತ ನೀಡಿದ್ದು, ನೀವು ಭಾರತದ ಧನಾತ್ಮಕ ವಿಚಾರಗಳುಳ್ಳ ದಕ್ಷ ಪ್ರಜೆಗಳಾಗಿದ್ದೀರಿ. ದೇಶದಲ್ಲಿ ನೀವು ಭಯ ಭೀತಿರಾಗಬೇಕಾಗಿಲ್ಲ. ಬದಲಾಗಿ ಇಂತಹ ಮನಸ್ಥಿತಿಗಳ ವಿರುದ್ಧ ಜೊತೆಗೂಡಿ ಹೋರಾಡಬೇಕಿದೆ. ಎಂದು ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಪುಲ್ವಾಮ ದಾಳಿಯ ದೇಶಭಕ್ತಿಯ ಹೆಸರಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದ್ದು, ಕಾಶ್ಮೀರಿಗಳಿಗೆ ಮನೆ ಬಾಡಿಗೆಗೆ ನೀಡಬಾರದು ಹಾಗೂ ಅವರನ್ನು ಓಡಿಸಬೇಕೆಂಬ ಕೂಗು ಹಲವು ಕಡೆ ಕೇಳಿ ಬರುತ್ತಿದ್ದು, ಕೆಲವು ಸ್ಥಳಗಳಲ್ಲಿ ಪ್ರತಿಭಟನೆಗಳೂ ಕೂಡ ನಡೆದಿದೆ. ಇದರಿಂದಾಗಿ ಕಾಶ್ಮೀರದ ವಿದ್ಯಾರ್ಥಿಗಳು ಹಲವೆಡೆ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಕಂಡ ಅವರು ಈ ಟ್ವೀಟನ್ನು ಮಾಡಿದ್ದು, ಅಮಾಯಕ ಜನರನ್ನು ಹಿಂಸಿಸುವ ಹಕ್ಕು ಯಾರಿಗೂ ಇಲ್ಲವೆಂಬುದನ್ನು ತಿಳಿಸಲು ಪ್ರಯತ್ನಿಸಿದ್ದಾರೆ.