ಜಾಧವ್‍ ಮರಣದಂಡನೆ ಪ್ರಕರಣ: ಅಂತಾರಾಷ್ಟ್ರೀಯ ಕೋರ್ಟಿನಲ್ಲಿ ಇಂದು ವಿಚಾರಣೆ

0
1193

ಹೇಗ್: ವಿಶ್ವಸಂಸ್ಥೆ ಅಧೀನದ ಹೇಗ್‍ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತ ಮೂಲದ ಕುಲಭೂಷಣ್ ಜಾಧವ್ ರವರ ಮರಣದಂಡನೆ ಪ್ರಕರಣ ಇಂದು ವಿಚಾರಣೆಗೆ ಬರಲಿದೆ ಎಂದು ತಿಳಿದು ಬಂದಿದೆ. ಪಾಕಿಸ್ತಾನದ ವಿರುದ್ಧ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಅವರನ್ನು ಪಾಕಿಸ್ತಾನ ಬಂಧಿಸಿತ್ತು. ನಂತರ ಪಾಕಿಸ್ತಾನದ ಸೈನಿಕ ಕೋರ್ಟು ಅವರಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿತ್ತು.

2017ರಲ್ಲಿ ಪಾಕಿಸ್ತಾನದ ಸೈನಿಕ ನ್ಯಾಯಾಲಯದಲ್ಲಿ ಮರಣದಂಡನೆ ತೀರ್ಪು ಪ್ರಕಟವಾದಾಗ ಭಾರತವು ಈ ಪ್ರಕರಣವನ್ನು ಅಂತಾರಾಷ್ಟ್ರೀಯ ಕೋರ್ಟಿಗೆ ಒಯ್ದಿದೆ. ನಂತರ ಅಂತಾರಾಷ್ಟ್ರೀಯ ಕೋರ್ಟು ಮರಣದಂಡನೆ ತೀರ್ಪಿಗೆ ಸ್ಟೇ ನೀಡಿ ತನ್ನ ತೀರ್ಪು ಬರುವವರೆಗೆ ಮರಣದಂಡನೆ ವಿಧಿಸದಂತೆ ಪಾಕಿಸ್ತಾನಕ್ಕೆ ಆದೇಶಿಸಿತ್ತು.

ಇದಲ್ಲದೇ, ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ಜಾರಿಗೊಳಿಸಲಾಗುವುದು ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ಮತ್ತು ಕುಲಭೂಷಣ್ ಪರ ಪ್ರಸಿದ್ಧ ನ್ಯಾಯವಾದಿ ಹರೀಶ್ ಸಾಳ್ವೆ ವಾದಿಸಲಿದ್ದಾರೆ.