ಲಂಡನ್ ನಲ್ಲಿ ಪುಲ್ವಾಮಾ ಘಟನೆಯನ್ನು ಖಂಡಿಸಿ ಪ್ರತಿಭಟಿಸುತ್ತಿದ್ದ ಭಾರತೀಯರ ಗುಂಪೊಂದು ತನಗೆ ಕಿರುಕುಳ ನೀಡಿದೆಯೆಂದು NDTV ಪತ್ರಕರ್ತೆ ರಾಧಿಕಾ ಅಯ್ಯರ್ ಟ್ವಿಟ್ಟರ್ ನಲ್ಲಿ ಆರೋಪಿಸಿದ್ದಾರೆ . “ವಿರುದ್ಧ ಲಂಡನ್ ನಲ್ಲಿರುವ ಕೆಲವು ಭಾರತೀಯರು ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿದ್ದೆ. ನಾನು ಕೆಲವು ಜನರನ್ನು ಸಂದರ್ಶಿಸುತ್ತಿದ್ದೆ. ಆಗ ಎನ್ಡಿಟಿವಿಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ನನ್ನನ್ನು ಕೆಲವರು ಬೆದರಿಸಿದರು . ಓರ್ವ ಮಹಿಳೆ ‘ನೀವು ಇಲ್ಲಿರಕೂಡದು’ ಎಂದು ಹೇಳಿದರು. ಒಬ್ಬ ವ್ಯಕ್ತಿ ‘ನೀವು ಒಬ್ಬ ಭಾರತೀಯಳಾಗಿದ್ದರೆ, ಭಾರತ್ ಮಾತಾ ಕಿ ಜೈ ಹೇಳು’ ಎಂದು ಹೇಳಿದರು.
I was at a protest march by some Indians in London against the terro attack in J&K. I was interviewing some people, when the crowd cornered me. Hooted me for being associated with NDTV. A lady said ‘you cannot be here’. One man said ‘ if you are an Indian, say bharat mata Ki jai’
— Radhika Iyer (@RadhikaIyer_) February 17, 2019
“ಇದು ಭಾರತೀಯರು ಮತ್ತು ಲಂಡನ್ ಮೂಲದ ಭಾರತೀಯರ ಪ್ರತಿಭಟನೆಯಾಗಿತ್ತು. ಇದ್ದಕ್ಕಿದ್ದಂತೆ ಅವರ ಗಮನ ನನ್ನ ಮತ್ತು ನನಗೆ ಸಂಬಂಧಿಸಿದ NDTV ಚಾನಲ್ ಮೇಲೆ ಕೇಂದ್ರಿತವಾಯಿತು. ನಾನು ಅವರ ಮಧ್ಯೆ ದುರ್ಬಲ ಮತ್ತು ಏಕಾಂಗಿಯಾಗಿರುವಂತೆ ಭಾಸವಾಯಿತು”.ಟ್ವಿಟ್ಟರ್ ಬಳಕೆದಾರ ಪ್ರದೀಪ್ ಅಗರ್ವಾಲ್ ಅವರು ವಿವಾದದ ವೀಡಿಯೊವನ್ನು ಪ್ರಕಟಿಸಿದರು.
ನಕಲಿ ರಾಷ್ಟ್ರೀಯತೆಯ ಧ್ವಜವನ್ನು ಹಾರಿಸುವಾಗ ಈ ಮತಾಂಧರು ಹೆಚ್ಚಾಗಿ ಭಾರತೀಯ ಸಂಸ್ಕಾರ ಅಥವಾ ಭಾರತೀಯ ಮೌಲ್ಯಗಳನ್ನು ಅಳವಡಿಸುತ್ತಾರೆ. ಲಂಡನ್ ಪ್ರತಿಭಟನೆಯು ಹಲವು ವಿಧಗಳಲ್ಲಿ ಇದು ವ್ಯಂಗ್ಯಾತ್ಮಕವಾಗಿ ಕಾಣಿಸಿಕೊಂಡಿದೆ. ಮೊದಲನೆಯದಾಗಿ, ಈ ನಾಮ ಮಾತ್ರ ದೇಶಪ್ರೇಮಿಗಳು ತಮ್ಮ ತಾಯಿನಾಡು ವಾಸಕ್ಕೆ ಯೋಗ್ಯವಲ್ಲವೆಂದು ಭಾರತವನ್ನು ಬಿಟ್ಟು ಇಂಗ್ಲೆಂಡ್ ನಲ್ಲಿ ನೆಲೆಸಿದ್ದಾರೆ. ಎರಡನೆಯದಾಗಿ, ಅವರು ತಮ್ಮ ಮಕ್ಕಳ ಉಪಸ್ಥಿತಿಯಲ್ಲಿ ಪ್ರಚೋದಕ ಮಾತುಗಳನ್ನು ಬಳಸುತ್ತಿದ್ದರು. ಹೀಗೆ ನಾಮಮಾತ್ರ ಭಾರತೀಯರು ಭಾರತೀಯ ಮೌಲ್ಯಗಳನ್ನು ಸಾಯಿಸುತ್ತಿದ್ದರೆ.
“ಹಿಂದೂ ವಲಸಿಗರು ಬಹು ಸ೦ಸ್ಕೃತಿಯ ಪ್ರಜಾಪ್ರಭುತ್ವಗಳಲ್ಲಿ ವಾಸಿಸುತ್ತಾರೆ, ಅಲ್ಲಿ ಅಲ್ಪಸಂಖ್ಯಾತರಾಗಿರುವ ಕಾರಣಕ್ಕೆ ತನ್ನದೇ ಆದ ಹಕ್ಕುಗಳನ್ನು ರಕ್ಷಿಸಲು ಹೋರಾಡುತ್ತಾರೆ, ಆದರೆ ಅದೇ ಸಮಯದಲ್ಲಿ, ತಾಯ್ನಾಡಿನಲ್ಲಿ ಅಲ್ಪಸಂಖ್ಯಾತರ ವಿರೋಧಿ ಬಿಜೆಪಿಯನ್ನು ಬೆಂಬಲಿಸುತ್ತಾರೆ, ಇದಲ್ಲದೆ, ವಲಸೆಗಾರರು ಶಾಂತಿಯುತವಾಗಿ ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ಆದರೆ ದೇಶದವರು ಯುದ್ಧದಲ್ಲಿ ಹೋರಾಡಿ ಮಡಿಯುವುದನ್ನು ಬಯಸುತ್ತಾರೆ ” ಎಂದು ಬರಹಗಾರ ಅಶೋಕ್ ವಾದಿಸುತ್ತಾರೆ.












