ಸನ್ಮಾರ್ಗ ವಾರ್ತೆ
ನವದೆಹಲಿ,ಜು.16:ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 9,70,169 ಕ್ಕೆ ಏರಿದೆ. ಮತ್ತೊಂದೆಡೆ, ಭಾರತೀಯ ವೈದ್ಯಕೀಯ ಸಂಘವು ಇದುವರೆಗೆ ದೇಶದಲ್ಲಿ 99 ವೈದ್ಯರು ಕೊರೋನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 1302 ವೈದ್ಯರಿಗೆ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಹೇಳಿದೆ.
Covid19india.org ಪ್ರಕಾರ, ಒಂದೇ ದಿನದಲ್ಲಿ 32,607 ಹೊಸ ಪ್ರಕರಣಗಳು ಬುಧವಾರ ದೃಢಪಟ್ಟಿವೆ. ಇದುವರೆಗಿನ ದಾಖಲೆಯ ಏಕ ದಿನ ಪ್ರಕರಣಗಳಿವು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












