ಕೇಸು ರಾಜಕೀಯ ಪ್ರೇರಿತ: ಇಂದ್ರಾಣಿ ನನಗೆ ಗೊತ್ತಿಲ್ಲ – ಪಿ.ಚಿದಂಬರಂ

0
525

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಆ.22: ಐಎನ್‍ಎಕ್ಸ್ ಕೇಸಿನಲ್ಲಿ ಬಂಧಿಸಲಾದ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂರ ವಿಚಾರಣೆ ಮುಂದುವರಿದಿದ್ದು ಇಂದ್ರಾಣಿ ಮುಖರ್ಜಿ ಗೊತ್ತಿಲ್ಲ. ಅಧಿಕಾರ ದುರುಪಯೋಗಿಸಿಲ್ಲ ಎಂದು ಹೇಳಿದ್ದಾರೆ. ಚಿದಂಬರಂರನ್ನು ಸಿಬಿಐ ರೇಸ್ ಅವೆನ್ಯೂ ಕೋರ್ಟಿಗೆ ಹಾಜರುಪಡಿಸಲಿದೆ. ಚಿದಂಬರಂರನ್ನು ಸಿಬಿಐ ಬೆಳಗ್ಗೆಯಿಂದಲೂ ವಿಚಾರಣೆಗೆ ಗುರಿಪಡಿಸಿದೆ. ಆರ್ಥಿಕ ಅಪರಾಧಿಗಳ ಆರೋಪಿಗಳಿಗಿರುವ ಲಾಕಪ್ 3ರಲ್ಲಿ ಚಿದಂಬರಂರನ್ನು ನಿನ್ನೆ ರಾತ್ರೆ ಇರಿಸಲಾಗಿತ್ತು. ಪ್ರಕರಣವನ್ನು ರಾಜಕೀಯ ಪ್ರೇರಿತ ಎಂದು ಮತ್ತು ಅಧಿಕಾರ ದುರುಪಯೋಗ ಮಾಡಿಲ್ಲ ಎಂದು ಅವರು ಸಿಬಿಐ ವಿಚಾರಣೆಯಲ್ಲಿ ಹೇಳಿದರು.

ಕಾರ್ತಿ ಚಿದಂಬರಂ, ಇಂದ್ರಾಣಿ ಮುಖರ್ಜಿಯವರ ಫೋನ್ ಕರೆಗಳ ವಿವರಗಳ ಕುರಿತು ಚಿದಂಬರಂ ಮೌನ ಪಾಲಿಸಿದರು. ಪ್ರಕರಣದಲ್ಲಿ ಈ ಹಿಂದೆ ತಳೆದ ನಿಲುವನ್ನೇ ಸಿಬಿಐ ಮುಂದೆಯೂ ಹೇಳಿದರು. ಆರೋಪ ಪಟ್ಟಿಯಿಲ್ಲ ಎಂಬ ಆರೋಪ ನಿರಾಧಾರವಾಗಿದ್ದು ಕರಡು ಆರೋಪ ಪಟ್ಟಿ ಇದೆ ಎಂದು ಸಿಬಿಐ ಹೇಳುತ್ತಿದೆ. ಇದೇವೇಳೆ ಇಡಿ ಈವರೆಗೂ ಚಿದಂಬರಂರ ಬಂಧನವನ್ನು ದಾಖಲಿಸಿಕೊಂಡಿಲ್ಲ.