ಹೊಗೆಸೊಪ್ಪು ಉಪಯೋಗದ ಪ್ರತ್ಯಾಘಾತದ ಬಗ್ಗೆ ಮೊದಲೇ ತಿಳಿದಿದ್ದರೆ ಎಂದು ಮನಸ್ಸು ಖೇದಿಸುತ್ತಿದೆ- :ಶರದ್ ಪವಾರ್

0
1518

ಮುಂಬೈ: ಹೊಗೆಸೊಪ್ಪು ಉಪಯೋಗಿಸಿದ ಕುರಿತು ತನಗೆ ವ್ಯಥೆಯಿದೆಯೆಂದು ಎನ್‍ಸಿಪಿ ಅದ್ಯಕ್ಷ ಶರಾದ್ ಪವಾರ್ ಹೇಳಿದ್ದಾರೆ. ಧೂಮಪಾನ ಮತ್ತು ಸುಪಾರಿಯ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ನಲವತ್ತು ವರ್ಷಗಳ ಹಿಂದೆ ಯಾರಾದರೂ ಮುನ್ನೆಚ್ಚರಿಕೆ ನೀಡಿದ್ದರೆ ಎಂಬ ಚಿಂತೆ ಮೂಡುತ್ತಿದೆಯೆಂದೂ ಅವರು ಹೇಳಿದರು. 2022ರ ವೇಳೆಗೆ ಅರ್ಬುದವನ್ನು ಸಂಪೂರ್ಣವಾಗಿ ತೊಡೆದು ಹಾಕುವ ಇಂಡಿಯನ್ ದಂದಲ್ ಎಸೋಸಿಯೇಶನ್‍ನ ಯೋಜನೆಯನ್ನು ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಅರ್ಬುದದಿಂದ ಮುಕ್ತರಾದ ಶರದ್ ಪವಾರ್ ಹೇಳಿದರು.
ಬಾಯಿಯನ್ನು ಭಾದಿಸಿದ ಕ್ಯಾನ್ಸರ್ ತನಗೆ ತೀವ್ರವಾದ ತೊಂದರೆ ನೀಡಿದೆ. ಇದರಿಂದ ಪಾರಾಗಲು ಶಸ್ತ್ರಕ್ರಿಯೆಗೆ ಒಳಪಡಬೇಕಾಯಿತು. ಹಲ್ಲುಗಳನ್ನು ಕೀಳಬೇಕಾಯಿತು. ಬಾಯಿ ಚೆನ್ನಾಗಿ ತೆರೆಯಲು ಅಸಾಧ್ಯವಾಯಿತು. ಮಾತನಾಡಲು ಆಹಾರ ಸೇವಿಸಲು ತ್ರಾಸಪಡಬೇಕಾಯಿತು. ಈ ಕಾಯಿಲೆಗೆ ಈಗಲೂ ಲಕ್ಷಾಂತರ ಜನರು ತುತ್ತಾಗುತ್ತಿದ್ದಾರೆಂಬ ಬಗ್ಗೆ ಖೇದವಿದೆ. ಈ ವಿಚಾರವನ್ನು ಸಂಸತ್ತಿನಲ್ಲಿಯೂ ಪ್ರಸ್ತಾಪಿಸುವುದಾಗಿ ಅವರು ಹೇಳಿದರು