ಸನ್ಮಾರ್ಗ ವಾರ್ತೆ
ಪ್ಯಾರಿಸ್, ಆ. 23: ಕಾಶ್ಮೀರ ವಿಷಯದಲ್ಲಿ ಭಾರತ, ಪಾಕಿಸ್ತಾನ ಉಭಯ ಕಕ್ಷಿ ಚರ್ಚೆಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕೆಂದು ಫ್ರೆಂಚ್ ಅಧ್ಯಕ್ಷ ಇಮ್ಯಾನುವೇಲ್ ಮಕ್ರೋನ್ ಹೇಳಿದರು. ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಮೂರನೆಯವರ ಮಧ್ಯಪ್ರವೇಶ ಅಗತ್ಯವಿಲ್ಲ. ವಲಯದಲ್ಲಿ ಶಾಂತಿಯ ವಾತಾವರಣ ಖಾಯಂಗೊಳಿಸಬೇಕು ಮತ್ತು ಜನರ ಹಕ್ಕುಗಳನ್ನು ಸಂರಕ್ಷಿಸಬೇಕೆಂದು ಮಕ್ರೋನ್ ಹೇಳಿದರು. ತ್ರಿರಾಷ್ಟ್ರ ಸಂದರ್ಶನದ ಭಾಗವಾಗಿ ಫ್ರಾನ್ಸ್ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದು ಅವರನ್ನು ಭೇಟಿಯಾದ ಬಳಿಕ ಮಕ್ರೋನ್ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.90 ನಿಮಿಷ ಮೋದಿ ಅವರೊಂದಿಗೆ ಚರ್ಚಿಸಿದ್ದು ಇದು ಕಾಶ್ಮೀರ ಚರ್ಚೆಯಾಗಿತ್ತು. ಭಾರತದ ಸಾರ್ವಭೌಮತ್ವದ ವಿಷಯ ಇದು ಎಂದು ತಿಳಿದಿರುವೆ ಎಂದು ಮಕ್ರೋನ್ ಹೇಳಿದರು.
ಭಾರತಕ್ಕೆ ಇನ್ನಷ್ಟು ರಫೇಲ್ ವಿಮಾನಗಳನ್ನು ಫ್ರಾನ್ಸ್ ಕೊಡಲಿದೆ ಎಂದು ಇಮ್ಯಾನುವೇಲ್ ಮ್ಯಾಕ್ರೋನ್ ತಿಳಿಸಿದರು. ಒಪ್ಪಂದ ಪ್ರಕಾರ 36 ವಿಮಾನಗಳಲ್ಲಿ ಮೊದಲನೆ ಕಂತನ್ನು ಮುಂದಿನ ತಿಂಗಳು ಭಾರತಕ್ಕೆ ನೀಡುವುದಾಗಿ ಅವರು ತಿಳಿಸಿದರು. ಉಭಯ ನಾಯಕರ ಚರ್ಚೆಯಲ್ಲಿ ವಿವಿಧ ವಿಷಯಗಳಲ್ಲಿ ಭಾರತ, ಪಾಕಿಸ್ತಾನ ಸಹಕರಿಸುವ ಕುರಿತು ಸಮ್ಮತ ವ್ಯಕ್ತವಾಗಿದೆ. ಅಣು ಶಕ್ತಿ ಕ್ಷೇತ್ರದಲ್ಲಿ ಸಹಕಾರವನ್ನು ದೃಢಪಡಿಸಲಾಗುವುದು.












