ಕಾಶ್ಮೀರದ ಆಸ್ಪತ್ರೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿಸುತ್ತಿದ್ದ ವೈದ್ಯರನ್ನು ಪೊಲೀಸರು ಎಳೆದೊಯ್ದರು!

0
603

ಸನ್ಮಾರ್ಗ ವಾರ್ತೆ

ಶ್ರೀನಗರ,ಆ.28: ಕಾಶ್ಮೀರದ ಆರೋಗ್ಯ ಕ್ಷೇತದ ಸಮಸ್ಯೆಯನ್ನು ಪತ್ರಕರ್ತರಿಗೆ ವಿವರಿಸಿದ ವೈದ್ಯರೊಬ್ಬರನ್ನು ಮಾತಾಡುತ್ತಿದ್ದಲ್ಲಿಂದಲೇ ಎಳೆದೊಯ್ದು ಬಂಧಿಸಲಾಗಿದೆ. ಕಾಶ್ಮೀರದ ಆರೋಗ್ಯ, ಆಸ್ಪತ್ರೆಗಳು ಎದುರಿಸುತ್ತಿರುವ ಸಮಸ್ಯೆಯನ್ನು ಅವರು ವಿವರಿಸುತ್ತಿದ್ದರು. ಅಲ್ಲಿಗೆ ಬಂದ ಜಮ್ಮು-ಕಾಶ್ಮೀರ ಪೊಲೀಸರು ಕೂಡಲೇ ಬಂಧಿಸಿದರು. ಶ್ರೀನಗರ ಪ್ರೆಸ್ ಎನ್‍ಕ್ಲೇವಿನಲ್ಲಿ ಅವರು ಪತ್ರಕರ್ತರಿಗೆ ವಿವರ ನೀಡುತಿದ್ದರು. ಹತ್ತೇ ನಿಮಿಷದಲ್ಲಿ ಅಲ್ಲಿಗೆ ಬಂದ ಪೊಲೀಸರು ಅವರನ್ನು ಬಂಧಿಸಿದ್ದಾರೆ. ದಿ ಟೆಲಿಗ್ರಾಫ್ ಘಟನೆಯನ್ನು ವರದಿ ಮಾಡಿದೆ. ವೈದ್ಯರನ್ನು ಎಲ್ಲಿಗೆ ಕೊಂಡು ಹೋಗಲಾಗಿದೆ ಎಂಬುದನ್ನು ಈವರೆಗೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.

ಶ್ರೀನಗರ ಸರಕಾರಿ ಮೆಡಿಕಲ್ ಕಾಲೇಜಿನ ಯುರೊಲಜಿಸ್ಟ್ ಒಮರ್ ಸಾಲಿಹ್ ಬಂಧನಕ್ಕೊಳಗಾದ ವೈದ್ಯರಾಗಿದ್ದು, ಆರ್ಟಿಕಲ್ 370 ರದ್ದುಪಡಿಸಿದ ನಂತರ ಆಗಸ್ಟ್ ಐದಕ್ಕೆ ಕೇಂದ್ರ ಸರಕಾರ ಕಾಶ್ಮೀರದಲ್ಲಿ ಹೇರಿದ ನಿಯಂತ್ರಣಗಳಿಂದಾಗಿ ಆಸ್ಪತ್ರೆ ಹಾಗೂ ಆರೋಗ್ಯ ಕ್ಷೇತ್ರವು ಎದುರಿಸುವ ಸಮಸ್ಯೆಯನ್ನು ಅವರು ಬಹಿರಂಗಪಡಿಸಿದ್ದರು. ಕಳೆದ ದಿವಸ ಜಮ್ಮುವಿನಲ್ಲಿ ನಿಯಂತ್ರಣದಲ್ಲಿ ಸಡಿಲಿಕೆ ಮಾಡಲಾಗಿತ್ತು. ಆದರೆ ಕಾಶ್ಮೀರದಲ್ಲಿ ಈಗಲೂ ಸರಕಾರದ ನಿಯಂತ್ರಣಗಳು ಇವೆ. ಹಲವು ರಾಜಕೀಯ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಉಮರ್ ಅಬ್ದುಲ್ಲ, ಮೆಹಬೂಬ ಮುಫ್ತಿ ಈಗಲೂ ಗೃಹಬಂಧನದಲ್ಲಿದ್ದಾರೆ.