ಸನ್ಮಾರ್ಗ ವಾರ್ತೆ
ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರಿ ನೌಕರರಿಗೆ ಪಿತೃತ್ವ ರಜೆ ಘೋಷಿಸಿ ಮುಖ್ಯಮಂತ್ರಿ ವಿಜಯ್ ಆದೇಶ ಹೊರಡಿಸಿದ್ದಾರೆ. ಪುರುಷ ನೌಕರರಿಗೆ 15 ದಿನಗಳ ರಜೆಯನ್ನು ಮಂಜೂರು ಮಾಡಲಾಗಿದೆ. ಮಹಿಳಾ ನೌಕರರಿಗೆ ಈಗಾಗಲೇ 365 ದಿನಗಳ ಮಾತೃತ್ವ ರಜೆ ನೀಡಲಾಗುತ್ತಿದೆ. ಮಗು ಹುಟ್ಟುವ 15 ದಿನಗಳ ಮೊದಲಿನಿಂದ ಅಥವಾ ಮಗು ಹುಟ್ಟಿದ ದಿನಾಂಕದಿಂದ ಆರು ತಿಂಗಳ ಒಳಗಾಗಿ ಈ ರಜೆಯನ್ನು ಪಡೆಯಬಹುದು.
ತಾಯಂದಿರಿಗೆ ದೈಹಿಕ ಮತ್ತು ಭಾವನಾತ್ಮಕ ಬೆಂಬಲ ನೀಡಲು ಹಾಗೂ ಶಿಶುಪಾಲನೆಯ ಆರಂಭಿಕ ಜವಾಬ್ದಾರಿಗಳನ್ನು ಹಂಚಿಕೊಳ್ಳಲು ತಂದೆಯರ ಪಾತ್ರ ಮುಖ್ಯವಾಗಿದೆ ಎಂದು ಪರಿಗಣಿಸಿ, ಸರ್ಕಾರಿ ನೌಕರರ ಮನವಿಯ ಮೇರೆಗೆ ಮುಖ್ಯಮಂತ್ರಿ ವಿಜಯ್ ಈ ಆದೇಶ ಹೊರಡಿಸಿದ್ದಾರೆ.
ತಮಿಳುನಾಡಿನಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ ಈಗಾಗಲೇ 365 ದಿನಗಳ ಮಾತೃತ್ವ ರಜೆ ಇದೆ. ಈ ಹೊಸ ನಿರ್ಧಾರದೊಂದಿಗೆ ಕೇರಳ, ಉತ್ತರ ಪ್ರದೇಶ, ಹರಿಯಾಣ ಮತ್ತು ಸಿಕ್ಕಿಂನಂತಹ ರಾಜ್ಯಗಳ ಸಾಲಿಗೆ ತಮಿಳುನಾಡು ಕೂಡ ಸೇರಿದೆ.












