ಇರಾಕ್‌ನಿಂದ ಅಮೆರಿಕದ ಸೇನೆ ಹೊರಟು ಹೋಗಲಿ- ಇರಾಕ್ ಪಾರ್ಲಿಮೆಂಟ್ ಸದಸ್ಯರ ಆಗ್ರಹ

0
534

ಸನ್ಮಾರ್ಗ ವಾರ್ತೆ

ಟೆಹ್ರಾನ್,ಆ.28: ಅಮೆರಿಕದ ಸೈನ್ಯ ದೇಶದಿಂದ ಮರಳಬೇಕೆಂದು ಇರಾಕ್ ಪಾರ್ಲಿಮೆಂಟ್ ಸದಸ್ಯರು ಆಗ್ರಹಿಸಿದ್ದಾರೆ. ಇರಾನ್ ಬೆಂಬಲ ಇರುವ ಶಿಯಾ ಸಶಸ್ತ್ರ ಸೇನೆಯ ವಿರುದ್ಧ ನಿರಂತರ ಇಸ್ರೇಲ್ ನಡೆಸುತ್ತಿರುವ ಆಕಾಶ ದಾಳಿಯನ್ನು ಪ್ರತಿಭಟಿಸಿದ ಇರಾಕ್ ಪಾರ್ಲಿಮೆಂಟ್ ಮುಖ್ಯ ಬ್ಲಾಕ್ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ.

“ಇಸ್ರೇಲಿನ ದಾಳಿಗೆ ಅಮೆರಿಕ ಜವಾಬ್ದಾರಿ. ಇದು ಇರಾಕ್ ಮತ್ತು ಅಲ್ಲಿನ ಜನರ ವಿರುದ್ಧ ಯುದ್ಧ ಘೋಷಣೆಯಾಗಿದೆ” ಎಂದು ಫತಹ್ ಸಖ್ಯ ಹೇಳಿದೆ. ಇರಾನ್ ಬೆಂಬಲವಿರುವ ಪಾರ್ಲಿಮೆಂಟರಿ ಸೈನ್ಯವಾದ ಪಾಪ್ಯುಲರ್ ಮೊಬಿಲೈಸೇಷನ್ ಫೋರ್ಸ್‌ನ ಬ್ಲಾಕ್ ಫತಹ್ ಸಖ್ಯವಾಗಿದೆ. ಪಶ್ಚಿಮ ಇರಾಕ್ ಪಟ್ಟಣದಲ್ಲಿ ಕಳೆದ ದಿವಸ ಇಸ್ರೇಲ್ ನೇತೃತ್ವದಲ್ಲಿ ಡ್ರೋನ್ ದಾಳಿ ನಡೆದಿತ್ತು. ಇದರಲ್ಲಿ ಇರಾನ್ ಬೆಂಬಲಿತ ಸೈನಿಕ ಸಖ್ಯದ ಒಬ್ಬ ಕಮಾಂಡರ್ ಮೃತಪಟ್ಟಿದ್ದರು.