ಅಮಿತ್ ಶಾ ಭಾರತದ ಉಕ್ಕಿನ ಮನುಷ್ಯ- ಮುಖೇಶ್ ಅಂಬಾನಿ

0
641

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.30: ಅಮಿತ್ ಶಾ ಕರ್ಮಯೋಗಿ ಮತ್ತು ಭಾರತದ ಉಕ್ಕಿನ ಮನುಷ್ಯನಾಗಿದ್ದಾರೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದ್ದಾರೆ. ಪಂಡಿತ್ ದೀನದಯಾಳ್ ಪ್ರೆಟ್ರೋಲಿಯಂ ಯುನಿವರ್ಸಟಿಯ ಪದವಿ ಪ್ರಧಾನ ಸಮಾರಂಭದಲ್ಲಿ ಅವರು ಮಾತಾಡುತ್ತಿದ್ದರು.

ಅಮಿತ್ ಭಾಯಿ ನೀವೊಬ್ಬರು ನೈಜ ಕರ್ಮಯೋಗಿಯಾಗಿದ್ದೀರಿ. ಭಾರತದ ಉಕ್ಕಿನ ಮನುಷ್ಯ ಕೂಡ ನೀವೇ. ಗುಜರಾತ್‍ಗೆ ಮತ್ತು ಭಾರತಕ್ಕೆ ನಿಮ್ಮಂತಹ ನಾಯಕರು ಸಿಕ್ಕಿದ್ದು ಅನುಗ್ರಹವಾಗಿದೆ ಎಂದು ಅವರು ಹೊಗಳಿದ್ದಾರೆ. “ಭಾರತ ಸುರಕ್ಷಿತ ಕೈಗಳಲ್ಲಿದೆ. ನಿಮ್ಮ ಆಗ್ರಹಗಳಿಗೆ ಗಡಿಯನ್ನು ನಿರ್ಣಯಿಸಬೇಡಿ. ದೊಡ್ಡ ಕನಸು ಕಾಣಲು ಹಿಂಜರಿಯಬೇಡಿ. ನಾಳೆಯ ಭಾರತ ನಿಮ್ಮ ಕನಸನ್ನು ಸಾಕ್ಷಾತ್ಕರಿಸಲಿಕ್ಕಿರುವ ಅವಕಾಶವನ್ನು ನೀಡಲಿದೆ” ಎಂದು ಅಂಬಾನಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.